ಬೆಂಗಳೂರು: ನಿರಂತರವಾಗಿ ಹೆಚ್ಚುತ್ತಿರುವ ಕೋವಿಡ್-19 ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾ ಮೂರ್ತಿ 100 ಕೋಟಿ ರೂ. ದೇಣಿಗೆ ನೀಡಿದ್ದಾರೆ.
ಕಳೆದ ವರ್ಷವೂ ಸಹ ಸುಧಾ ಮೂರ್ತಿಯವರು 100 ಕೋಟಿ ರೂ ದೇಣಿಗೆಯನ್ನು ನೀಡಿದ್ದರು.
ಈ ಬಾರಿಯ ದೇಣಿಗೆಯನ್ನು ಕೋವಿಡ್ ರೋಗಿಗಳಿಗೆ ಆಮ್ಲಜನಕ, ವೆಂಟಿಲೇಟರ್ ಮತ್ತು ಇತರ ಔಷಧಿ ಖರೀದಿಗೆ ಬಳಸಿಕೊಳ್ಳಬಹುದು ಎಂದು ಅವರು ಹೇಳಿದ್ದಾರೆ.
ಮಂಗಳೂರು, ಹೈದರಾಬಾದ್, ಪುಣೆ, ನಾಗ್ಪುರ, ನವದೆಹಲಿ ಮತ್ತು ತಿರುವನಂತಪುರಂಗೆ ಇನ್ಫೋಸಿಸ್ ಫೌಂಡೇಶನ್ ಹಣ ಒದಗಿಸುತ್ತದೆ ಎಂದು ಅವರು ಘೋಷಿಸಿದರು
Laxmi News 24×7