ಶಿವಮೊಗ್ಗದಲ್ಲಿ ಬೆಳ್ಳಂಬೆಳಗ್ಗೆಯಿಂದಲೇ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದಾರೆ. ಲಾಕ್ ಡೌನ್ ನಿಯಮ ಮೀರಿ ರಸ್ತೆಗೆ ಇಳಿದ ವಾಹನಗಳು ಸೀಜ್ ಮಾಡಲು ಮುಂದಾಗಿದ್ದಾರೆ.
ನಗರದ ಪ್ರತಿ ಸರ್ಕಲ್ ನಲ್ಲೂ ಬ್ಯಾರಿಕೇಡ್ ಅಳವಡಿಸಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಬೆಳಗ್ಗೆಯಿಂದ ಇದುವರೆಗೆ ಶಿವಮೊಗ್ಗ ನಗರ ಒಂದರಲ್ಲೇ 200ಕ್ಕೂ ಹೆಚ್ಚು ವಾಹನಗಳು ಸೀಜ್ ಮಾಡಲಾಗಿದೆ. ಇಂದಿನಿಂದ ಶಿವಮೊಗ್ಗದಲ್ಲಿ ವಾಹನದಲ್ಲಿ ಓಡಾಟ ನಡೆಸಲು ಅವಕಾಶವಿಲ್ಲ. ಬೆಳಗ್ಗೆ 6 ಗಂಟೆಯಿಂದ 10 ಗಂಟೆ ಒಳಗೆ ಕಾಲ್ನಡಿಗೆಯಲ್ಲೇ ಬಂದು ದಿನಬಳಕೆ ವಸ್ತುಗಳ ಖರೀದಿಗೆ ಅವಕಾಶ ನೀಡಲಾಗಿದೆ .
ಅನಗತ್ಯವಾಗ ವಾಹನದಲ್ಲಿ ತಿರುಗಾಟ ನಡೆಸಿದರೆ ವಾಹನಗಳು ಸೀಜ್ ಆಗುವುದು ಫಿಕ್ಸ್ ಎಂದು ಪೊಲೀಸರು ಎಚ್ಚರಕೆ ನೀಡಿದ್ದಾರೆ. ಲಾಕ್ ಡೌನ್ ಮುಗಿಯುವವರೆಗೂ ವಾಹನಗಳನ್ನು ಬಿಡದಿರಲು ಪೊಲೀಸರ ನಿರ್ಧಾರ ಮಾಡಿದ್ದಾರೆ.