ಬೆಂಗಳೂರು: ಮೊನ್ನೆ ಬೆಂಗಳೂರಿನ ಪೀಣ್ಯದ ಕರಹೋಬನಹಳ್ಳಿಯಲ್ಲಿ ಕೆಎಎಸ್ ಅಧಿಕಾರಿ ಕಚೇರಿಯಲ್ಲಿನ ಸೆಕ್ಯುರಿಟಿ ದಂಪತಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಮಗನಿಂದ ಶಾಕಿಂಗ್ ವಿಚಾರ ಹೊರಬಿದ್ದಿದೆ. ಮೃತ ದಂಪತಿ ಮಗನಿಗೆ ಜ್ಯೋತಿಷಿ ಒಬ್ಬ ನಿನಗೆ ಪಿತೃದೋಷ ಇದೆ ಅಂತ ಹೇಳಿದ್ದನ್ನ ಕೇಳಿದ್ದ ಮಗ ಕಡೆಗೆ ಆ ದೋಷ ಪರಿಹಾರಕ್ಕೆ ತಂದೆ ತಾಯಿಯನ್ನೆ ಕೊಲೆಮಾಡಿದ್ದಾನೆ.
ನೀನೂ ಚೆನ್ನಾಗಿ ಇರ್ಬೇಕು ಅಂದ್ರೆ ನಿಮ್ಮ ತಂದೆ ಸಾಯಬೇಕು ಎಂದು ಶಾಸ್ತ್ರ ಹೇಳಿದ್ದರಂತೆ. ಇದೇ ವಿಚಾರಕ್ಕೆ ತಂದೆ ಕೊಲೆ ಮಾಡಿದ್ದಾನೆ. 14 ವರ್ಷದ ಮಗ ಕಲ್ಲಿನಿಂದ ಚಚ್ಚಿ ತಂದೆ-ತಾಯಿ ಇಬ್ಬರನ್ನು ಕೊಲೆ ಮಾಡಿದ್ದಾನೆ.
ಗಾಂಜಾ ಮತ್ತಲ್ಲಿ ಪೋಷಕರನ್ನು ರಾಕ್ಷಸನಂತೆ ಕೊಂದಿದ್ದಾನೆ. ಸದ್ಯ ಈ ದುಷ್ಟ ಮಗನನ್ನು ಪೀಣ್ಯ ಪೊಲೀಸರು ಬಂಧಿಸಿದ್ದಾರೆ. ಭವಿಷ್ಯ ಹೇಳಿ ಕೊಲೆಗೆ ಕಾರಣನಾದ ಜ್ಯೋತಿಷಿಯನ್ನು ಬಂಧಿಸಿದ್ದಾರೆ.
ಮೊನ್ನೆ ತಡ ರಾತ್ರಿ ಮೂರು ಗಂಟೆಗೆ ಕಲ್ಲಿನಿಂದ ಚಚ್ಚಿ ತಾಯಿ ಕೊಲೆ ಮಾಡಲಾಗಿತ್ತು. ಆನಂತರ ಕೊಲೆ ಮಾಡಿ ಕಚೇರಿ ಲಾಕ್ ಮಾಡಿಕೊಂಡಿದ್ದ. ತಾನೇ ಕಚೇರಿಯ ಬೀಗ ಹಾಕಿ, ಕೀ ತನ್ನ ಪ್ಯಾಂಟ್ ವೊಂದರಲ್ಲಿ ಬಚ್ಚಿಟ್ಟಿದ್ದ. ಬೆಳಿಗ್ಗೆ ತಂದೆ-ತಾಯಿ ಕಾಣದಿದ್ದಾಗ ಮೊದಲನೇ ಮಗ ಪೀಣ್ಯ ಪೊಲೀಸರಿಗೆ ದೂರು ನೀಡಿದ್ದ. ವಿಚಾರಣೆ ನಡೆಸಿದ ಪೊಲೀಸರಿಗೆ ಮಗನ ದುಷ್ಟತನ ಬೆಳಕಿಗೆ ಬಂದಿದೆ.