Breaking News

ಕೇರಳದಲ್ಲಿ ಮೇ16ರವರೆಗೆ ಲಾಕ್‌ಡೌನ್ : ಸಿಎಂ ಪಿಣರಾಯಿ ವಿಜಯನ್

Spread the love

ತಿರುವನಂತಪುರ: ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳಿಗೆ ಕಡಿವಾಣ ಹಾಕುವ ಉದ್ದೇಶದಿಂದ ದೇವರನಾಡು ಕೇರಳದಲ್ಲಿ ಇದೀಗ ಲಾಕ್ ಡೌನ್ ‍ಘೋಷಣೆಯಾಗಿದೆ.

ಮೇ 8ರ ಬೆಳಗ್ಗೆ 6 ಗಂಟೆಯಿಂದ ಮೇ16ರವರೆಗೆ ಕೇರಳ ರಾಜ್ಯದಲ್ಲಿ ಲಾಕ್‌ಡೌನ್ ಜಾರಿ ಮಾಡುತ್ತಿರುವುದಾಗಿ ಸಿಎಂ ಪಿಣರಾಯಿ ವಿಜಯನ್ ಹೇಳಿದ್ದಾರೆ.

ಸರ್ಕಾರದ ಈ ನಿರ್ಧಾರಕ್ಕೆ ಬುಧವಾರ ಕೇರಳದಲ್ಲಿ 41,953 ಹೊಸ ಕೋವಿಡ್ ಪ್ರಕರಣಗಳು ಪತ್ತೆಯಾಗಿರುವುದೇ ಕಾರಣವಾಗಿದೆ. ಇದು ಇದುವರೆಗಿನ ದೈನಂದಿನ ದಾಖಲೆಯಾಗಿದೆ. ಲಾಕ್‌ಡೌನ್ ವೇಳೆ ಯಾವುದಕ್ಕೆಲ್ಲ ವಿನಾಯತಿ ಇರಲಿದೆ ಎಂಬುದು ಮಾರ್ಗಸೂಚಿಯಲ್ಲಿ ತಿಳಿದು ಬರಲಿದೆ.

ಕಳೆದ ವರ್ಷ ಕೇರಳದಲ್ಲಿಯೇ ಮೊದಲ ಕೋವಿಡ್ ಪ್ರಕರಣ ಪತ್ತೆಯಾಗಿತ್ತು. ಆದರೆ, ನಂತರದ ದಿನಗಳಲ್ಲಿ ಸರ್ಕಾರದ ಕಟ್ಟುನಿಟ್ಟಿನ ಕ್ರಮಗಳ ಫಲವಾಗಿ ಸೋಂಕು ಹತೋಟಿಗೆ ಬಂದಿತ್ತು. ಈ ಬಾರಿಯೂ ಎರಡನೇ ಅಲೆ ಕೇರಳದಲ್ಲಿ ಹೆಚ್ಚಿದೆ. ಹೀಗಾಗಿ ಲಾಕ್ ಡೌನ್ ಘೋಷಣೆ ಮಾಡಲು ಸರ್ಕಾರದ ನಿರ್ಧರಿಸಿದೆ. ಇದರ ಜೊತೆಗೆ ಲಸಿಕಾ ಅಭಿಯಾನವನ್ನೂ ಚುರುಕುಗೊಳಿಸಿದೆ.


Spread the love

About Laxminews 24x7

Check Also

ನಾಳೆಯಿಂದ ನಮ್ಮೂರ ಜಾತ್ರೆಯ ಸಂಭ್ರಮ: ದಿ.14 ರಂದು ಸಂಕ್ರಾಂತಿ ಆಚರಣೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ

Spread the love ನಾಳೆಯಿಂದ ನಮ್ಮೂರ ಜಾತ್ರೆಯ ಸಂಭ್ರಮ: ದಿ.14 ರಂದು ಸಂಕ್ರಾಂತಿ ಆಚರಣೆ: ಶಾಸಕ ಬಸನಗೌಡ ಪಾಟೀಲ ಯತ್ನಾಳ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ