ವಿಜಯಪುರ: ರಾಜ್ಯಾದ್ಯಂತ ಹಲವೆಡೆ ಬುಧವಾರ ಸಂಜೆ ಗುಡುಗು, ಸಿಡಿಲಿನೊಂದಿಗೆ ಭಾರಿ ಮಳೆಯಾಗಿದ್ದು, ವಿಜಯಪುರದಲ್ಲಿ ಸಿಡಿಲು ಬಡಿದು ಮೂವರು ಸ್ಥಳದಲ್ಲೇ ಸಾವಿಗೀಡಾಗಿದ್ದು, ಇಬ್ಬರು ಗಾಯಗೊಂಡಿದ್ದಾರೆ. ಜೊತೆಗೆ ನಾಲ್ಕು ಆಡುಗಳು ಸಿಡಿಲಿನಿಂದ ಸಾವನಪ್ಪಿವೆ.
ಅಶೋಕರಾಮ ಕಾರಜೋಳ(48), ಬಾಷಾಸಾಬ್ ಕರಜಗಿ(40) ಮತ್ತು ಜಾವಿದ್ ಹಾಜಿಸಾಬ್ ಜಾಲಗೇರಿ(33) ಸಾವಿಗೀಡಾಗಿದ್ದಾರೆ. ಸಬೀನಾ ಮತ್ತು ಇನ್ನೊಬ್ಬ ವ್ಯಕ್ತಿ ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಹೊಲದಿಂದ ಬರುವ ವೇಳೆ ಗಾಳಿ, ಮಳೆ ಆರಂಭವಾದ ಹಿನ್ನೆಲೆಯಲ್ಲಿ ರಕ್ಷಣೆಗಾಗಿ ಟಕ್ಕೆ ದರ್ಗಾ ಬಳಿ ಇರುವ ಮಸೀದಿ ಆವರಣದಲ್ಲಿ ರಕ್ಷಣೆ ಪಡೆದುಕೊಂಡಿದ್ದರು. ಈ ಸಂದರ್ಭದಲ್ಲಿ ಸಿಡಿಲು ಬಡಿದಿದೆ ಎಂದು ವಿಜಯಪುರ ಗ್ರಾಮೀಣ ಠಾಣೆ ಪಿಎಸ್‌ಐ ಆನಂದ ಟಕ್ಕನವರ ತಿಳಿಸಿದ್ದಾರೆ.
Laxmi News 24×7