Breaking News

ಬೆಳಗಾವಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 12 ಪತ್ರಕರ್ತರಿಗೆ ಕೊರೋನಾ ಪಾಸಿಟಿವ್

Spread the love

ಬೆಳಗಾವಿ – ಬೆಳಗಾವಿಯಲ್ಲಿ ಕೆಲಸ ನಿರ್ವಹಿಸುತ್ತಿರುವ 12 ಪತ್ರಕರ್ತರಿಗೆ ಕೊರೋನಾ ಪಾಸಿಟಿವ್ ದೃಢಪಟ್ಟಿದೆ.

ಭಾನುವಾರ ನಡೆಯಲಿರುವ ಲೋಕಸಭಾ ಉಪಚುನಾವಣೆಯ ಮತ ಎಣಿಕೆ ಕೇಂದ್ರಕ್ಕೆ ತೆರಳಲು ಕೊರೋನಾ ನೆಗೆಟಿವ್ ಸರ್ಟಿಫಿಕೇಟ್ ಕಡ್ಡಾಯ ಎಂದು ನಿಯಮ ಮಾಡಿರುವ ಹಿನ್ನೆಲೆಯಲ್ಲಿ ಪತ್ರಕರ್ತರ ಕೊರೋನಾ ಟೆಸ್ಟ್ ಮಾಡಲಾಯಿತು. ಒಟ್ಟೂ 70 ಪತ್ರಕರ್ತರು ಟೆಸ್ಟ್ ಗೆ ಒಳಗಾಗಿದ್ದರು. ಅವರಲ್ಲಿ 12 ಜನರಿಗೆ ಪಾಸಿಟಿವ್ ಬಂದಿದೆ. ಅವರ ಪೈಕಿ 11 ಜನರಿಗೆ ಕೊರೋನಾದ ಯಾವುದೇ ಲಕ್ಷಣಗಳಿಲ್ಲ.

ಈ ಎಲ್ಲ ಪತ್ರಕರ್ತರು ಹೋಮ್ ಐಸೋಲೇಶನ್ ಮಾಡಿಕೊಂಡರೆ ಸಾಕು, ಆಸ್ಪತ್ರೆಗೆ ದಾಖಲಾಗಬೇಕಿಲ್ಲ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಈ ಎಲ್ಲ ಪತ್ರಕರ್ತರಿಗೆ ಅಗತ್ಯ ಎಲ್ಲ ನೆರವು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.

ಒಂದು ವೇಳೆ ಮತ ಎಣಿಕೆ ಇಲ್ಲದಿದ್ದಲ್ಲಿ ಈ ಪತ್ರಕರ್ತರಿಗೆ ಕೊರೋನಾ ಇರುವುದೇ ಪತ್ತೆಯಾಗುತ್ತಿರಲಿಲ್ಲ. ಅದು ಕುಟುಂಬದವರಿಗೆ ಹಾಗೂ ಅವರ ಸಂಪರ್ಕಕ್ಕೆ ಬರುವ ಇನ್ನಷ್ಟು ಜನರಿಗೆ ಹರಡುವ ಅಪಾಯವಿತ್ತು.


Spread the love

About Laxminews 24x7

Check Also

ಟ್ರ್ಯಾಕ್ಟರ್‌ಗೆ ಸಿಲುಕಿ ರೈತ ಸಾವು – ಗ್ರಾಮದಲ್ಲಿ ಶೋಕ

Spread the love ಟ್ರ್ಯಾಕ್ಟರ್‌ಗೆ ಸಿಲುಕಿ ರೈತ ಸಾವು – ಗ್ರಾಮದಲ್ಲಿ ಶೋಕ ಗೋಕಾಕ ತಾಲೂಕಿನ ನಂದಗಾಂವ ಸಾವಳಗಿ ಗ್ರಾಮದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ