Breaking News

ಅಕ್ರಮ ಮದ್ಯ ಸಾಗಾಣಿಕೆ8 ಲಕ್ಷ ರೂ ಬೆಲೆ ಬಾಳುವ ಮಾಲನ್ನ ವಶಪಡಿಸಕೊಳ್ಳಲಾಗಿದೆ.: ಎ.ರವಿಶಂಕರ್

Spread the love

ಅಕ್ರಮ ಮದ್ಯ ಸಾಗಾಣಿಕೆ ಮಾಡುತ್ತಿದ್ದ ಆರೋಪಿಗಳನ್ನ ಬಂಧಿಸಿ, ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಮಾಲನ್ನ ವಶಪಡಿಸಕೊಳ್ಳಲಾಗಿದೆ. ಮಾನ್ಯ ಅಬಕಾರಿ ಜಂಟಿ ಆಯುಕ್ತರಾದ ಶ್ರೀಯುತ ಗಿರಿಯವರ ಮಾರ್ಗದರ್ಶನದಲ್ಲಿ ಅಬಕಾರಿ ಉಪ ಆಯುಕ್ತರಾದ ಶ್ರೀಯುತ ಎ.ರವಿಶಂಕರ್ ರವರ ನಿರ್ದೇಶನದ ಮೇರೆಗೆ ಮಾನ್ಯ ಅಬಕಾರಿ ಊಪ ಅಧೀಕ್ಷಕರು ಕೋಲಾರ ಉಪ ವಿಭಾಗದ ಅಬಕಾರಿ

ಉಪ ಅಧೀಕ್ಷಕರಾದ ಎಂ. ನಟರಾಜ್ ರವರ ನೇತೃತ್ವದಲ್ಲಿ ಕೋಲಾರ ತಾಲ್ಲೂಕು ವ್ಯಾಪ್ತಿಯಲ್ಲಿ ಕೋವಿಡ್ ಲಾಕ್ ಡೋನ್ ಹಿನ್ನೆಲೆಯಲ್ಲಿ ಗಸ್ತು ನಿರ್ವಹಿಸುವಾಗ ಎರಡು ಪ್ರತ್ಯೇಕ ಪ್ರಕರಣಗಳಲ್ಲಿ ಒಂದು ಸ್ವಿಪ್ಟ್ ಡಿಜೈರ್ ವಾಹನದಲ್ಲಿ ಸುಮಾರು 45.240 ಲೀ ಮದ್ಯ ವನ್ನು ಕುರಗಲ್ ಗೇಟ್ ಬಳಿ ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಆರೋಪಿಯನ್ನು ಬಂಧಿಸಲಾಗಿದೆ..

ಇನ್ನೊಂದು ಪ್ರಕರಣದಲ್ಲಿ ಒಂದು ಓಮಿನಿ ಕಾರಿನಲ್ಲಿ 65.560 ಲೀ ಮದ್ಯ ವನ್ನು ನಡುಪಲ್ಲಿ ಗ್ರಾಮದ ಬಳಿ ಸಾಗಿಸುತ್ತಿದ್ದು ಆರೋಪಿ ಪರಾರಿಯಾಗಿರುತ್ತಾನೆ. ಮೇಲಿನ ಮಾಲನ್ನು ಜಫ್ತುಪಡಿಸಿ ಎರಡು ಪ್ರಕರಣವನ್ನು ವಲಯದ ನಿರೀಕ್ಷಕರಾದ ಶ್ರೀಮತಿ ಅರುಣಾ ರವರು ದಾಖಲಿಸಿದ್ದು, ಧಾಳಿಯಲ್ಲಿ ಉಪ ನಿರೀಕ್ಷಕರಾದ ಸುವರ್ಣ ಬಿ ಕೋಟೆ ಶ್ರೀ ರವೀ಼ಂದ್ರ ಸಿಬ್ಬಂದಿಯಾದ ಎಂ ಮಂಜುನಾಥ ,ಅನಿಲ್ ಕುಮಾರ್,ಸಾಬೂಕಾತ್ರಾಲ್ ಹಾಗೂ ಪ್ರದೀಪ್ ರವರು ಭಾಗವಹಿಸಿದ್ದರು ಸ್ವತ್ತಿನ ಅಂದಾಜು ಮೌಲ್ಯ 8 ಲಕ್ಷ ರೂಗಳಾಗಿರುತ್ತದೆ..


Spread the love

About Laxminews 24x7

Check Also

ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ

Spread the love ಗಣೇಶ ಜನ್ಮ ಕಥೆ, ಸಂಕೇತಗಳ ಅರ್ಥ ಮತ್ತು ಆಚರಣೆ ಒಂದು ದಿನ ಪಾರ್ವತಿ ದೇವಿಯು ಕೈಲಾಸ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ