Breaking News

ಹಣ ಪಡೆದು ಕೊರೋನಾ ನೆಗೆಟಿವ್ ವರದಿ ನೀಡ್ತಾ ಇದ್ದ ಇಬ್ಬರು ಆರೋಪಿಗಳು ಅರೆಸ್ಟ್.!

Spread the love

ಬೆಂಗಳೂರು : ಯಾವುದೇ ಸ್ವ್ಯಾಬ್ ಪಡೆಯದೇ, ಜನರಿಂದ ಕೊರೋನಾ ನೆಗೆಟಿವ್ ವರದಿ ನೀಡುತ್ತಿದ್ದಂತ ಇಬ್ಬರು ಆರೋಪಿಗಳನ್ನು ನಗರದಲ್ಲಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ನಗರದಲ್ಲಿ ಯಾವುದೇ ಸ್ವ್ಯಾಬ್ ಟೆಸ್ಟ್ ಪಡೆಯದೇ, ಕೊರೋನಾ ನೆಗೆಟಿವ್ ವರದಿಯನ್ನು ಜನರಿಗೆ ನೀಡುತ್ತಿದ್ದರು. ಈ ಖಚಿತ ಮಾಹಿತಿಯಿಂದ ದಾಳಿ ನಡೆಸಿದಂತ ಸಿಸಿಬಿಯ ವಿಶೇಷ ದಳದ ಅಧಿಕಾರಿಗಳು, ರಾಜಸ್ಥಾನ ಮೂಲಕ ಮುಕೇಶ್ ಸಿಂಗ್ ಹಾಗೂ ಸ್ಥಳೀಯ ನಗರದ ನಿವಾಸಿ ನಾಗರಾಜ್ ಎಂಬಾತನನ್ನು ಬಂಧಿಸಿದ್ದಾರೆ. ಬಂಧಿತರಿಂದ ಎರಡು ಮೊಬೈಲ್ ಜಪ್ತಿ ಮಾಡಿದ್ದಾರೆ.

ಅಂದಹಾಗೇ, ದೊಮ್ಮಸಂದ್ರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಕೆಲಸ ಮಾಡುತ್ತಿದ್ದಂತ ಈ ಇಬ್ಬರು ಆರೋಪಿಗಳು, ಕೊರೋನಾ ನೆಗೆಟಿವ್ ವರದಿ ಬೇಕಾದವರಿಗೆ ಯಾವುದೇ ಸ್ವ್ಯಾಬ್ ಟೆಸ್ಟ್ ಪಡೆಯದೇ, ರೂ.700 ಪಡೆದು, RT-PCR ನೆಗೆಟಿವ್ ರಿಪೋರ್ಟ್ ಕೊಡ್ತಾ ಇದ್ದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ