Breaking News

ಕೊವಿಡ್ ಕೇರ್ ಸೆಂಟರ್ ಘಟಪ್ರಭಾದ ಕೆಎಚ್ಐ, ಜೆಜಿಕೊ ಆಸ್ಪತ್ರೆಯಲ್ಲಿಪ್ರಾರಂಭಿಸಲು ಅಶೋಕ ಪೂಜಾರಿ ಮನವಿ

Spread the love

ಗೋಕಾಕ: ಉತ್ತರ ಕರ್ನಾಟಕದಲ್ಲಿ ವೈಧ್ಯಕೀಯ ಸೇವೆಯಲ್ಲಿ ತನ್ನದೇ ಆದ ಹಿರಿಮೆ-ಗರಿಮೆ ಹೊಂದಿರುವ ಘಟಪ್ರಭಾದಲ್ಲಿರುವ ಸೇವಾದಳದ ಸಂಸ್ಥಾಪಕ ನಾ.ಸು. ಹರ್ಡಿಕರ ಅವರ ನಿಸ್ವಾರ್ಥ ಸಾರ್ವಜನಿಕ ಸೇವಾ ಮನೋಭಾವನೆಯ ತತ್ವದೊಂದಿಗೆ ಸ್ಥಾಪನೆಗೊಂಡರುವ ಕರ್ನಾಟಕ ಆರೋಗ್ಯಧಾಮ (ಕೆ.ಎಚ್.ಆಯ್.) ಮತ್ತು ಮೂರುಸಾವಿರ ಮಠದ ಜಗದ್ಗುರುಗಳ ಧಾರ್ಮಿಕ ಮತ್ತು ಸಾಮಾಜಿಕ ಸೇವಾ ಮನೋಭಾವನೆಯಿಂದ ಪ್ರಾರಂಭಗೊಂಡಿರುವ ಜಗ್ದಗುರು ಗಂಗಾಧರರಾಜಯೋಗಿಂದ್ರ ಸಹಕಾರಿ ಆಸ್ಪತ್ರೆ (ಜೆ.ಜಿ.ಕೊ-ಆಪ್ ಹಾಸ್ಪಿಟಲ್) ಗಳು ಕೋವಿಡ್-19 ರೋಗಕ್ಕೆ ಬಳಲಿ ಬೆಂಡಾಗುತ್ತಿರುವ ಜನರಿಗೆ ತಮ್ಮ ಆಸ್ಪತ್ರೆಗಳಲ್ಲಿ ಕೂಡಲೇ ಪ್ರತ್ಯೇಕ ಕೋವಿಡ್ ವೈಧ್ಯಕೀಯ ಸೇವಾ ಘಟಕವನ್ನು ಪ್ರಾರಂಭಿಸುವ ಮೂಲಕ ಸರಕಾರ ಮತ್ತು ಸಾರ್ವಜನಿಕರ ಭಾವನೆಗಳಿಗೆ ಕೂಡಲೇ ಸ್ಪಂಧಿಸಬೇಕೆಂದು ಜೆ.ಡಿ.ಎಸ್. ಮುಖಂಡ ಅಶೋಕ ಪೂಜಾರಿ ವಿನಂತಿಸಿದ್ದಾರೆ.
ನಗರದಲ್ಲಿ ಇಂದು ಪತ್ರಕಾ ಪ್ರಕಟಣೆಯಲ್ಲಿ ಈ ವಿಷಯ ತಿಳಿಸಿರುವ ಆವರು ರೋಗಿಗಳ ಆರೋಗ್ಯಕ್ಕೆ ಕಾಯಕಲ್ಪ ಆಗುವಂತಹ ನೈಸರ್ಗಿಕ ವಾತಾವರ ಮತ್ತು ಪರಿಸರವನ್ನು ಹೊಂದಿರುವ ಈ ಭಾಗದಲ್ಲಿ ಈ ಎರಡೂ ಸಾರ್ವಜನಿಕ ಸ್ವರೂಪದ ವೈಧ್ಯಕೀಯ ಸೇವಾ ಸಂಸ್ಥೆಗಳು ಕಡಿಮೆ ದರದಲ್ಲಿ ವೈಧ್ಯಕೀಯ ಸೇವೆ ಸಲ್ಲಿಸುತ್ತ ತಮ್ಮದೇ ಆದ ಅಸ್ಥತ್ವ ಹೊಂದಿರುತ್ತವೆ. ಈಗ ನಿರೀಕ್ಷೆಯ ಎಲ್ಲೆ ಮೀರಿ ಹಬ್ಬುತ್ತಿರುವ ಕರೋನಾ ಪ್ರಮಾಣ ಸರಕಾರ ಮತ್ತು ಸಾರ್ವಜನಿಕರನ್ನು ಚಿಂತಾಕ್ರಾಂತರನ್ನಾಗಿ ಮಾಡಿದೆ. ಅದೇ ಕಾರಣದಿಂದ ಸರಕಾರ ಮತ್ತು ಸಾರ್ವಜನಿಕರು ಖಾಸಗಿ ವೈಧ್ಯಕೀಯ ಆಸ್ಪತ್ರೆಗಳು ಕರೋನಾ ಪೀಡಿತರನ್ನು ಉಪಚರಿಸುವಲ್ಲಿ ಮುಂದೆ ಬಾರದಿರುವದು ಶೋಚನೀಯ ಮತ್ತು ಕಳವಳಕಾರಿಯಾದ ಸಂಗತಿಯಾಗಿದೆ. ಇಂತಹ ಸಂದರ್ಭದಲ್ಲಿ ಸೇವಾ ಮನೋಭಾವನೆಯಿಂದಲೇ ಪ್ರಾರಂಭವಾಗಿರುವ ಕೆ.ಎಚ್.ಆಯ್. ಮತ್ತು ಜೆ.ಜಿ.ಕೋ-ಆಪ್ ಆಸ್ಪತ್ರೆಗಳು ಕೂಡಲೇ ಜನರಪ ನಿರ್ಣಯದೊಂದಿಗೆ ಸರಕಾರ ನಿಗದಿಪಡಿಸಿದ ದರದೊಂದಿಗೆ ಕರೋನಾ ಪೀಡತ ರೋಗಿಗಳಿಗೆ ಚಿಕಿತ್ಸೆ ನೀಡಲು ಕೂಡಲೇ ಕಾರ್ಯಪ್ರವೃತ್ತರಾಗಬೇಕೆಂದು ಸಾರ್ವಜನಿಕರ ಪರವಾಗಿ ವಿನಂತಿಸಿದ್ದಾರೆ. ಈ ಕುರಿತು ನಾಳೆಯೇ ಸಾರ್ವಜನಿಕ ನಿಯೋಗದೊಂದಿಗೆ ಎರಡು ಸಂಸ್ಥೆಯವರನ್ನು ಬೇಟಿಯಾಗಿ ಮನವಿ ಸಲ್ಲಿಸುವುದಾಗಿ ತಿಳಿಸಿದ್ದಾರೆ.
ಆದರೆ ಸರಕಾರ ಮತ್ತು ಸಾರ್ವಜನಿಕರ ನಿರಂತರ ಮನವಿಗೆ ಹೊರತಾಗಿಯೂ ಕರೋನಾ ರೋಗಿಗಳ ಸೇವೆಗೆ ಮುಂದೆ ಭಾರದ ರಾಜ್ಯದ ಖಾಸಗಿ ಆಸ್ಪತ್ರೆಗಳು ಮತ್ತು ವೈಧ್ಯರ ಭಾವನೆಗಳಿಗೆ ಹೊರತಾಗಿಯೂ ಗೋಕಾಕ ನಗರದ ಪ್ರತಿಭಾನ್ವಿತ ಯುವ ವೈಧ್ಯರಾಗಿರುವ ಡಾ|| ಸಚೀನ ಶಿರಗಾಂವಿ ಯವರು ತಮ್ಮ ಸಿಟಿ ಹೆಲ್ತಕೇರ್ ಆಸ್ಪತ್ರೆಯಲ್ಲಿ ಸರಕಾರದ ಅನುಮೋದನೆಯೊಂದಿಗೆ ಸರಕಾರ ನಿಗದಿಪಡಿಸಿದ ದರದಲ್ಲಿಯೇ ಅತ್ಯಂತ ಗುಣಮಟ್ಟದ ಕರೋನಾ ವೈಧ್ಯಕೀಯ ಸೇವೆಯನ್ನು ನೀಡುತ್ತಿರುವದು ಅವರ ಮಾನವೀಯ ಕಳಕಳಿಯ ಸೇವಾ ಮನೋಭಾವನೆಯಾಗಿದ್ದು ಶ್ಲಾಘನೀಯ ಮತ್ತು ಅಭಿನಂದನೀಯವಾಗಿದ್ದು, ಅವರ ಈ ನಡೆ ಇನ್ನುಳಿದ ಖಾಸಗಿ ಆಸ್ಪತ್ರೆಯ ವೈಧ್ಯರುಗಳಿಗೆ ಉದಾತ್ತ ಸಂದೇಶವಾಗಲಿ ಎಂದು ಹೇಳಿದ್ದಾರೆ.

Spread the love

About Laxminews 24x7

Check Also

ಗುಲ್ಬರ್ಗಾ ವಿವಿ ಅತಿ ಹಿಂದುಳಿದ ವಿಶ್ವವಿದ್ಯಾಲಯ ಆಗಿದೆ : ಮಲ್ಲಿಕಾರ್ಜುನ್​ ಖರ್ಗೆ

Spread the loveಕಲಬುರಗಿ : ಜಿಲ್ಲೆಯಲ್ಲಿ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕಲಬುರಗಿ ಬೆಂಗಳೂರಿನಿಂದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ