Breaking News

ಸಾಯಬೇಕೋ ಅಥವಾ ವ್ಯಾಪಾರ ಮಾಡಬೇಕೋ ನೀವು ತೀರ್ಮಾನ ಮಾಡಿ: ವ್ಯಾಪಾರಸ್ಥರಿಗೆ ಸಚಿವ ಈಶ್ವರಪ್ಪ

Spread the love

ಶಿವಮೊಗ್ಗ: “ಸಾಯಬೇಕೋ, ವ್ಯಾಪಾರ ಮಾಡಬೇಕೋ ವ್ಯಾಪಾರಸ್ಥರೇ ತೀರ್ಮಾನ ಮಾಡಬೇಕು. ವ್ಯಾಪಾರಕ್ಕೆ ತೊಂದರೆಯಾಗುತ್ತಿದೆ ಎಂದು ಒಪ್ಪಿಕೊಳ್ಳುತ್ತೇನೆ. ಆದರೆ ವ್ಯಕ್ತಿ ತಾನು ಬದುಕಿದ್ದರೆ ತಾನೆ ನಾಳೆ ವ್ಯಾಪಾರ ಮಾಡಬಹುದು. ಕೋವಿಡ್ ಬಂದು ಆಸ್ಪತ್ರೆಗೆ ಹೋಗಿ ಏನು ಚಿಕಿತ್ಸೆ ಸಿಗದೆ ಸತ್ತರೆ ಅದು ಒಳ್ಳೆಯದಾ? ವ್ಯಾಪಾರ ನಿಲ್ಲಿಸಿ ಹೆಂಡತಿ ಮಕ್ಕಳೊಂದಿಗೆ ಮೂರ್ನಾಲ್ಕು ದಿನ ಸಂತೋಷವಾಗಿ ಇರುವುದು ಒಳ್ಳೆಯದಾ ಯೋಚನೆ ಮಾಡಿ” ಇದು ರಾಜ್ಯದ ಗ್ರಾಮೀಣಾಭಿವೃದ್ಧಿ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ವ್ಯಾಪಾರಸ್ಥರಿಗೆ ನೀಡಿದ ಸಲಹೆಗಳು.

ಶಿವಮೊಗ್ಗದಲ್ಲಿ ಮಾತನಾಡಿದ ಅವರು, ವ್ಯಕ್ತಿಗಳು ಜೀವನ‌ ಮಾಡಬೇಕು. ಜೀವನ‌ ಮಾಡುವಾಗ ಜಾಗೃತಿಯನ್ನೂ ವಹಿಸಬೇಕು. ಅಂಗಡಿಗೆ ಯಾರಾದರೂ ಮಾಸ್ಕ್ ಹಾಕಿಕೊಳ್ಳದೆ ಬಂದರೆ ಅವರನ್ನು ವಾಪಸ್ ಕಳಿಸಬೇಕು. ಇಲ್ಲವೇ ಮಾಸ್ಕ್ ಕೊಟ್ಟು ವ್ಯಾಪಾರ ಮಾಡಬೇಕು ಎಂದರು.

ರೋಗಿಗಳಿಗೆ ಆಸ್ಪತ್ರೆಯಲ್ಲಿ ಬೆಡ್ ಇಲ್ಲ, ಆಕ್ಸಿಜನ್ ಇಲ್ಲ. ಹೀಗಾಗಿ ಜನ ಜಾಗೃತರಾಗಬೇಕು‌ ಎಂದ ಸಚಿವರು, ಶಿವಮೊಗ್ಗದಲ್ಲಿ ಬಹುತೇಕರು ಮಾಸ್ಕ್ ಧರಿಸುತ್ತಿರುವುದು ಸಂತಸದ ಸಂಗತಿ‌. ಯಾರಾದರೂ ಮಾಸ್ಕ್ ಧರಿಸದಿದ್ದರೆ ಅವರಿಗೆ ಮಾಸ್ಕ್ ನೀಡಿ ಮಾಸ್ಕ್ ಧರಿಸುವಂತೆ ತಿಳಿಹೇಳಬೇಕು. ಶಿವಮೊಗ್ಗ ಪರಿಸ್ಥಿತಿ ಬೆಂಗಳೂರು ಹಾಗೂ ದೆಹಲಿ ಮಟ್ಟಕ್ಕೆ ಹೋಗಲು ಬಿಡಬಾರದು ಎಂದು ಮನವಿ ಮಾಡಿದರು.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ