Breaking News

ಸಿಪಿಐಎಂ ಮುಖಂಡ ಸೀತಾರಂ ಯೆಚೂರಿ ಪುತ್ರ ಕೊರೊನಾಕ್ಕೆ ಬಲಿ

Spread the love

ಗುರುಗ್ರಾಮ, : ಸಿಪಿಐಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರ ಪುತ್ರ ಆಶೀಶ್ ಯೆಚೂರಿ ಇಲ್ಲಿನ ಖಾಸಗಿ ಆಸ್ಪತ್ರೆಯಲ್ಲಿ ಇಂದು ಬೆಳಗ್ಗೆ ನಿಧನರಾಗಿದ್ದಾರೆ. ಕೊವಿಡ್ 19 ಸೋಂಕಿನಿಂದ ಬಳಲುತ್ತಿದ್ದ ಆಶೀಶ್ ಅವರಿಗೆ 34 ವರ್ಷವಾಗಿತ್ತು.ಕಳೆದ ಎರಡು ವಾರಗಳಿಂದ ಜೀವನ್ಮರಣ ಹೋರಾಟ ನಡೆಸಿದ್ದ ಆಶೀಶ್ ಕೆಲದಿನಗಳಲ್ಲಿ ಚೇತರಿಕೆ ಹೊಂದುವ ನಿರೀಕ್ಷೆಯಿತ್ತು. ಆದರೆ, ಗುರುಗ್ರಾಮದ ಮೇದಾಂತಾ ಆಸ್ಪತ್ರೆಯಲ್ಲಿ ಗುರುವಾರ ಬೆಳಗ್ಗೆ 5.30ಕ್ಕೆ ಕೊನೆಯುಸಿರೆಳೆದಿದ್ದಾರೆ ಎಂದು ಆಪ್ತವಲಯ ತಿಳಿಸಿದೆ.

ಹೋಲಿ ಫ್ಯಾಮಿಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ನಂತರ ಮೇದಾಂತ ಆಸ್ಪತ್ರೆಗೆ ದಾಖಲಾಗಿದ್ದರು. ದೆಹಲಿಯ ಪ್ರಮುಖ ಮಾಧ್ಯಮ ಸಂಸ್ಥೆಯಲ್ಲಿ ಕಾಪಿ ಎಡಿಟರ್ ಆಗಿ ಆಶೀಶ್ ಕಾರ್ಯ ನಿರ್ವಹಿಸುತ್ತಿದ್ದರು. ಈ ಬಗ್ಗೆ ಟ್ವೀಟ್ ಮಾಡಿರುವ ಸೀತಾರಾಂ ಯೆಚೂರಿ, “ನನ್ನ ಹಿರಿಯ ಪುತ್ರ ಆಶೀಶ್ ಕೋವಿಡ್ 19ನಿಂದ ಕಳೆದುಕೊಂಡೆ ಎಂದು ತಿಳಿಸಲು ದುಃಖವಾಗುತ್ತಿದೆ. ಆಶೀಶ್‌ಗೆ ಚಿಕಿತ್ಸೆ ನೀಡಿದ ಎಲ್ಲಾ ವೈದ್ಯ, ನರ್ಸ್ ಹಾಗೂ ಆರೋಗ್ಯ ಕಾರ್ಯಕರ್ತರಿಗೆ ನನ್ನ ನಮನಗಳು” ಎಂದಿದ್ದಾರೆ.


Spread the love

About Laxminews 24x7

Check Also

ಏಪ್ರಿಲ್-ಮೇ ತಿಂಗಳಲ್ಲಿ ಗ್ರಾಪಂ ಚುನಾವಣೆಗೆ ಸರಕಾರ ಸಜ್ಜು: ಶೀಘ್ರವೇ ಮೀಸಲು ಅಧಿಸೂಚನೆ ಪ್ರಕಟ

Spread the loveಧಾರವಾಡ: ರಾಜ್ಯದ ಬಹುತೇಕ ಗ್ರಾಮ ಪಂಚಾಯಿತಿಗಳ ಚುನಾಯಿತ ಪ್ರತಿನಿಧಿಗಳ ಅಧಿಕಾರಾವಧಿ ಫೆಬ್ರವರಿ- ಮಾರ್ಚ್ ತಿಂಗಳಲ್ಲಿ ಮುಗಿಯಲಿದೆ. ಹೀಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ