Breaking News

ಮೇ 1 ರ ನಂತರ ಕೊವಿಶೀಲ್ಡ್​ ದರ ಬದಲು, ಕೇಂದ್ರಕ್ಕೆ ರೂ 150, ರಾಜ್ಯಗಳಿಗೆ ರೂ 400, ಖಾಸಗಿ ಆಸ್ಪತ್ರೆಗಳಿಗೆ ರೂ 600 ಕ್ಕೆ ಲಸಿಕೆ ಮಾರಾಟ

Spread the love

ಮೇ 1 ರ ನಂತರ ಲಸಿಕೆ ಪಡೆಯುವ ಯುವಕರು ಈ ಸುದ್ದಿ ಓದಬೇಕು. ಕೊವಿಶೀಲ್ಡ್​ ಲಸಿಕೆ ಮೇ 1 ರಿಂದ ದುಬಾರಿ ಆಗಲಿದೆ. ಈಗ ಕೊವಿಶೀಲ್ಡ್​ ಲಸಿಕೆ ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿದೆ ಮತ್ತು ಖಾಸಗಿ ಆಸ್ಪತ್ರೆಯಲ್ಲಿ ಇದನ್ನು ರೂ 250 ಕ್ಕೆ ನೀಡಲಾಗುತ್ತಿದೆ. ಸೀರಂ ಇನ್ಸ್​​ಟಿಟ್ಯೂಟ್​ ಆಫ್​ ಇಂಡಿಯಾ ಉತ್ಪಾದಿಸುವ ಕೋವಿಶೀಲ್ಡ್ ಲಸಿಕೆಯನ್ನು ಇನ್ನು ಮುಂದೆ, ಅಂದರೆ ಮೇ 1 ರಿಂದ, ಮೂರು ದರಗಳಲ್ಲಿ ಮಾರಾಟ ಮಾಡಲಾಗುವುದು ಎಂದು ಸೀರಂ ಇನ್ಸ್​​ಟಿಟ್ಯೂಟ್​ನ ಮುಖ್ಯಸ್ಥ ಅದಾರ್​ ಪೂನಾವಾಲಾ ಹೇಳಿದ್ದಾರೆ. ತಾನು ಉತ್ಪಾದಿಸುವ ಲಸಿಕೆಯಲ್ಲಿ 590 ಪ್ರತಿಶತ ಲಸಿಕೆಯನ್ನು ಕೇಂದ್ರ ಸರಕಾರಕ್ಕೆ ರೂ 150 ಕ್ಕೆ ನೀಡಲಾಗುವುದು. ಉಳಿದ 50 ಪ್ರತಿಶತ ಲಸಿಕೆಯಲ್ಲಿ ಅರ್ಧದಷ್ಟನ್ನು ರಾಜ್ಯ ಸರಕಾರಗಳಿಗೆ ತಲಾ ರೂ 400 ಕ್ಕೂ ಮತ್ತು ಖಾಸಗೀ ಆಸ್ಪತ್ರೆಗಳಿಗೆ ರೂ 600 ಕ್ಕೆ ಮಾರಾಟ ಮಾಡಲು ನಿರ್ಧರಿಸುವುದಾಗಿ ಅವರು ಇಂಗ್ಲಿಷ್​ ಟಿವಿ ಚಾನೆಲ್​ ಎನ್​ಡಿ ಟಿವಿಗೆ ಹೇಳಿದ್ದಾರೆ.

ವಿದೇಶಿ ಲಸಿಕೆಗಳಿಗಿಂತ ತಮ್ಮ ಕಂಪೆನಿಯ ಲಸಿಕೆ ಕಡಿಮೆ ದರದಲ್ಲಿ ಸಿಗುತ್ತಿದೆ ಎಂಬುದನ್ನು ಜನ ಗಮನಿಸಬೇಕು. ವಿದೇಶಿ ಲಸಿಕೆ ₹ 750 ರಿಂದ ರೂ 1,500 ವೆಚ್ಚವಾಗುತ್ತದೆ. ಅದಕ್ಕೆ ಹೊಲಿಸಿದರೆ, ಕೊವಿಶೀಲ್ಡ್​ ಕಡಿಮೆ ದರದಲ್ಲಿ ಸಿಗುತ್ತದೆ, ಎಂದು ಹೇಳಿದ್ದಾರೆ. ಸರ್ಕಾರದ ಹೊಸ ನೀತಿಯ ಭಾಗವಾಗಿ, ಶೇಕಡಾ 50 ರಷ್ಟು ಲಸಿಕೆ ಪ್ರಮಾಣವನ್ನು ಕೇಂದ್ರಕ್ಕೆ ಮೀಸಲಿಡಲಾಗುವುದು ಮತ್ತು ಉಳಿದವುಗಳನ್ನು ರಾಜ್ಯ ಮತ್ತು ಖಾಸಗಿ ಆಸ್ಪತ್ರೆಗಳ ನಡುವೆ ಹಂಚಲಾಗುತ್ತದೆ.

ಎಲ್ಲಾ ವಯಸ್ಕರಿಗೆ ವ್ಯಾಕ್ಸಿನೇಷನ್ ಹಾಕಲು ಶುರು ಮಾಡಿದಾಗ ಹೆಚ್ಚುವರಿ 1.2 ಮಿಲಿಯನ್ ಡೋಸ್ ಅಗತ್ಯವಿದೆ. ಹಲವಾರು ರಾಜ್ಯಗಳು ಕೋವಿಡ್ ಲಸಿಕೆ ಕೊರತೆಯ ಕುರಿತು ಈಗಾಗಲೇ ತಿಳಿಸಿವೆ.

ಲಸಿಕೆ ತಯಾರಕರಾದ ಸೀರಮ್ ಇನ್ಸಟಿಟ್ಯೂಟ್​ ಮತ್ತು ಭಾರತ್ ಬಯೋಟೆಕ್‌ಗೆ ಸರ್ಕಾರವು, 4,500 ಕೋಟಿ ನೆರವು ಘೋಷಿಸುವುದರೊಂದಿಗೆ – ಭಾರತದಲ್ಲಿ ನಿರ್ಮಿಸಲಾಗುತ್ತಿರುವ ಕೊವಾಕ್ಸಿನ್ ಮತ್ತು ಕೊವಿಶೀಲ್ಡ್​ ಉತ್ಪಾದನೆ ಜಾಸ್ತಿ ಆಗುತ್ತದೆ. ತಮ್ಮ ಕಂಪೆನಿ ಈ ಕೂಡಲೇ ಉತ್ಪಾದನೆಯ ಪ್ರಮಾಣವನ್ನು ಜಾಸ್ತಿ ಮಾಡಲಿದೆ. ಮತ್ತು ಮೇ ಅಂತ್ಯದ ವೇಳೆಗೆ 15-20 ಪ್ರತಿಶತ ಜಾಸ್ತಿ ಕೋವಿಶೀಲ್ಡ್​ ಲಸಿಕೆ ಉತ್ಪಾದನೆ ಆಗಲಿದೆ ಎಂದು ಹೇಳಿದ್ದಾರೆ.

ಜುಲೈ ನಂತರ ತಮ್ಮ ಕಂಪನಿಯು ತಿಂಗಳಿಗೆ 100 ಮಿಲಿಯನ್ ಡೋಸ್‌ಗಳನ್ನು ಪೂರೈಸಲು ಸಾಧ್ಯವಾಗುತ್ತದೆ ಎಂದು ಪೂನವಾಲಾ ಹೇಳಿದರು. “ಈ ಕೂಡಲೇ ನಮ್ಮ ಉತ್ಪಾದನೆಯನ್ನು ಜಾಸ್ತಿ ಮಾಡುತ್ತಿದ್ದೇವೆ ಮತ್ತು ಇದರ ಪರಿಣಾಮವನ್ನು ಜುಲೈ ನಂತರ ಕಾಣಬಹುದಾಗಿದೆ. ಆದರೆ ಈಗ ಮತ್ತು ಜುಲೈ ನಡುವೆ ನಾವು ನಮ್ಮ ಮಾಸಿಕ ಸಾಮರ್ಥ್ಯದಲ್ಲಿ ಶೇಕಡಾ 15 ರಿಂದ 20 ರಷ್ಟು ಹೆಚ್ಚಿಸುತ್ತೇವೆ. ಜುಲೈ ನಂತರ ನಾವು ತಿಂಗಳಿಗೆ 100 ಮಿಲಿಯನ್ ಡೋಸ್‌ಗಳನ್ನು ದಾಟುತ್ತೇವೆ,”ಎಂದು ಅವರು ತಿಳಿಸಿದರು.


Spread the love

About Laxminews 24x7

Check Also

ನಿಧಿಯಾಸೆಗೆ ದೇವರ ಕಲ್ಲನ್ನು ಕೆಡವಿದ್ದ ಕಳ್ಳರನ್ನು ಬಂಧಿಸಿದ ಪೊಲೀಸರು: ಮೂಕಪ್ಪಸ್ವಾಮಿ ಪವಾಡ ಎಂದ ಗ್ರಾಮಸ್ಥರು

Spread the loveಹಾವೇರಿ: 4 ತಿಂಗಳ ಹಿಂದೆ ನಿಧಿ ಆಸೆಗಾಗಿ ಕೋಣಕಲ್ಲು ಭರಮಪ್ಪ ದೇವರ ಕಲ್ಲನ್ನು ಕೆಡವಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ