Breaking News

ಸ್ವತಃ ಲಾಕ್ ಡೌನ್ ಹೇರಿಕೊಂಡ ಗ್ರಾಮಸ್ಥರು

Spread the love

ಬೀದರ್ : ಕೊರೊನಾ ಅಟ್ಟಹಾಸಕ್ಕೆ ಗಡಿ ಜಿಲ್ಲೆ ನಲುಗಿ ಹೋಗುತ್ತಿದೆ. ಈ ನಿಟ್ಟಿನಲ್ಲಿ ಸರ್ಕಾರವು ಸಾಕಷ್ಟು ರೂಲ್ಸ್ ಜಾರಿಗೊಳಿಸುತ್ತಿದೆ. ಸದ್ಯ ಗ್ರಾಮಸ್ಥರೇ ಇಲ್ಲಿ ಸ್ವಯಂ ಲಾಕ್ ಡೌನ್ ಘೋಷಿಸಿಕೊಳ್ಳುತ್ತಿದ್ದಾರೆ.

ಹೌದು! ಜಿಲ್ಲೆಯಲ್ಲಿ ಪ್ರತಿ ದಿನ 400ರ ಆಸುಪಾಸಿನಲ್ಲಿ ಕೇಸ್ ಗಳು ದಾಖಲಾಗುತ್ತಿವೆ. ಇದರಿಂದ ಭಯಗೊಂಡ ಗ್ರಾಮಸ್ಥರು ಸ್ವಯಂ ಲಾಕ್ ಡೌನ್ ಹೇರಿಕೊಳ್ಳುತ್ತಿರುವ ಘಟನೆ ಬೀದರ್ ನಲ್ಲಿ ನಡೆದಿದೆ.

ಗ್ರಾಮದ ಹಿರಿಯರು, ಜನಪ್ರತಿನಿಧಿಗಳು ಸೇರಿಕೊಂಡು ಮಹಾಮಾರಿಗೆ ಕಡಿವಾಣ ಹಾಕಲು ಈ ನಿರ್ಧಾರ ಕೈಗೊಂಡಿದ್ದಾರೆ. ತಮಟೆ ಬಾರಿಸುವ ಮುಖಾಂತರ ಗ್ರಾಮಸ್ಥರು ಸೆಲ್ಫ್ ಲಾಕ್ ಡೌನ್ ಹೇರಿಕೊಂಡಿದ್ದಾರೆ.

ತಾಲೂಕಿನ ಬಾವಗಿ ಗ್ರಾಮಸ್ಥರು ಹೇರಿಕೊಂದಿರುವ ಲಾಕ್ ಡೌನ್ ಈ ರೀತಿ ಇದೆ.
ಬೆಳಗ್ಗೆ ಹಾಗೂ ಸಂಜೆ 6 ರಿಂದ 8 ಗಂಟೆಯವರೆಗೆ ಮಾತ್ರ ಅಗತ್ಯ ವಸ್ತುಗಳ ಅಂಗಡಿಗಳು ತೆರೆಯಲು ಅನುಮತಿ ನೀಡಲಾಗಿದೆ. ಯಾರು ಮಾಸ್ಕ್ ಇಲ್ಲದೆ ಓಡುವಂತಿಲ್ಲ ಎಂದು ಕೊವೀಡ್ ನಿಯಮಗಳನ್ನು ಪಾಲಿಸುವಂತೆ ಕೂಡಾ ತಮಟೆ ಬಾರಿಸುವ ಮೂಲಕ ತಿಳಿಸಲಾಗಿದೆ.

ಇದೇ ರೀತಿ ಪ್ರತಿಯೊಂದು ಹಳ್ಳಿ ಹಾಗೂ ನಗರಗಳು ಸ್ವಯಂ ಲಾಕ್ ಡೌನ್ ಹೇರಿಕೊಳ್ಳುವುದರ ಮೂಲಕ ಕೊರೊನಾವನ್ನು ದೇಶದಿಂದ ತೊಲಗಿಸಬಹುದು ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.


Spread the love

About Laxminews 24x7

Check Also

ಜೈಲಿನಲ್ಲಿ ತಪಾಸಣೆಗೆ ಎಐ ಮಾದರಿ ತಂತ್ರಜ್ಞಾನ ಬಳಕೆ: ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್

Spread the loveಮಂಗಳೂರು: ಜೈಲಿನಲ್ಲಿ ತಪಾಸಣೆಗೆ ಟ್ರಯಲ್ ಬೇಸಿಸ್ ಮೇಲೆ ಎಐ ಟೆಕ್ನಾಲಜಿ ಬಳಕೆ ಮಾಡುತ್ತೇವೆ.‌ ಅದು ಎಷ್ಟು ಪರಿಣಾಮಕಾರಿ ಆಗುತ್ತದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ