Breaking News

ಈ 6 ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ಕೋವಿಡ್-19 ನೆಗೆಟಿವ್ ರಿಪೋರ್ಟ್ ಕಡ್ಡಾಯ!

Spread the love

ಮುಂಬೈ: ಕೋವಿಡ್ ಹಾಟ್ ಸ್ಪಾಟ್ ಆಗಿರುವ ಮಹಾರಾಷ್ಟ್ರದಲ್ಲಿ ಸೋಂಕು ಪ್ರಸರಣ ತಡೆಯಲು ಅಲ್ಲಿನ ಸರ್ಕಾರ ಹರಸಾಹಸ ಪಡುತ್ತಿದ್ದು, ಇದೀಗ 6 ರಾಜ್ಯಗಳಿಂದ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರಿಗೆ ಕೋವಿಡ್-19 ನೆಗೆಟಿವ್ ರಿಪೋರ್ಟ್ ಕಡ್ಡಾಯಗೊಳಿಸಿದೆ.

ಹೌದು…ಕೇರಳ, ಗೋವಾ, ರಾಜಸ್ಥಾನ, ದೆಹಲಿ, ಗುಜರಾತ್ ಮತ್ತು ಉತ್ತರಾಖಂಡ ಈ ಆರು ರಾಜ್ಯಗಳಿಂದ ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ರೈಲ್ವೆ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್ ನೆಗೆಟಿವ್ ರಿಪೋರ್ಟ್ ಹೊಂದಿರಬೇಕು ಎಂದು ಮಹಾರಾಷ್ಟ್ರ ಸರ್ಕಾರ ಸೂಚಿಸಿದೆ. ಮಹಾರಾಷ್ಟ್ರದಲ್ಲಿ ಇತ್ತೀಚಿನ ದಿನಗಳಲ್ಲಿ ಕೊರೋನಾ ಪ್ರಕರಣಗಳು ಹೆಚ್ಚಾಗುತ್ತಿರುವದರಿಂದ ರಾಜ್ಯ ಸರ್ಕಾರ ಈ ಆರು ರಾಜ್ಯಗಳನ್ನು ‘ಸೂಕ್ಷ್ಮ ವಲಯಗಳು’ ಎಂದು ವರ್ಗೀಕರಿಸಿದೆ. ಕೊರೋನವೈರಸ್ ಹರಡುವುದನ್ನು ನಿಯಂತ್ರಿಸಲು ಈ ರಾಜ್ಯಗಳಿಂದ ರೈಲ್ವೆ ಪ್ರಯಾಣಿ ಮಾಡುವವರಿಗೆ ಹೊಸ ಎಸ್‌ಒಪಿ ಜರಿ ಮಾಡಲಾಗಿದೆ.

ಅಂತೆಯೇ ಮಹಾರಾಷ್ಟ್ರಕ್ಕೆ ಬರುವ 48 ಗಂಟೆಗಳ ಮೊದಲು ಮಾಡಿಸಲಾದ ಕೋವಿಡ್-19 ನೆಗೆಟಿವ್ ರಿಪೋರ್ಟ್ ಅಥವಾ ಆರ್‌ಟಿ-ಪಿಸಿಆರ್ ಟೆಸ್ಟ್ ರಿಪೋರ್ಟ್ ಕಡ್ಡಾಯವಾಗಿ ತರಬೇಕೆಂದು ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.

ಈ ಬಗ್ಗೆ ಆದೇಶ ಹೊರಡಿಸಿರುವ ಮಹಾರಾಷ್ಟ್ರದ ಮುಖ್ಯ ಕಾರ್ಯದರ್ಶಿ ಸೀತಾರಾಮ್ ಕುಂಟೆ ಅವರು, ‘ಮಹಾರಾಷ್ಟ್ರಕ್ಕೆ ಪ್ರಯಾಣಿಸುವ ಎಲ್ಲಾ ಪ್ರಯಾಣಿಕರು ಕಡ್ಡಾಯವಾಗಿ ಕೋವಿಡ್-19 ನೆಗೆಟಿವ್ ರಿಪೋರ್ಟ್ ಅಥವಾ ಆರ್‌ಟಿ-ಪಿಸಿಆರ್ ಟೆಸ್ಟ್ ರಿಪೋರ್ಟ್ ಕಡ್ಡಾಯವಾಗಿ ತರಬೇಕು ಮತ್ತು ಯಾವುದೇ ರೋಗ ಲಕ್ಷಣವಿಲ್ಲದ ಪ್ರಯಾಣಿಕರು ಮಾತ್ರ ಮಹಾರಾಷ್ಟ್ರಕ್ಕೆ ರೈಲುಗಳನ್ನು ಹತ್ತಲು ಅವಕಾಶವಿರುತ್ತದೆ. ಬೋರ್ಡಿಂಗ್ / ಡಿಬೋರ್ಡಿಂಗ್ ಮತ್ತು ಪ್ರಯಾಣದ ಸಮಯದಲ್ಲಿ ಸಾಮಾಜಿಕ ಅಂತರ ಕಡ್ಡಾಯವಾಗಿ ಪಾಲಿಸಿರಬೇಕು’ ಎಂದು ಆದೇಶದಲ್ಲಿ ತಿಳಿಸಿದ್ದಾರೆ. ಈ ಆರು ರಾಜ್ಯಗಳಿಂದ ಚಲಿಸುವ ರೈಲುಗಳಲ್ಲಿ ಮಹಾರಾಷ್ಟ್ರಕ್ಕೆ ಯಾವುದೇ ಕಾಯ್ದಿರಿಸಲಾಗದ ಟಿಕೆಟ್ ನೀಡಬಾರದು ಎಂದೂ ಆದೇಶದಲ್ಲಿ ತಿಳಿಸಲಾಗಿದೆ.


Spread the love

About Laxminews 24x7

Check Also

ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ

Spread the love ಗೋಲಿಹಳ್ಳಿಯ ಶ್ರೀ ಶಿವ ಮಂದಿರದಲ್ಲಿ ನೂತನ ಶಿವ ಮುಖವಾಡ ಮತ್ತು ನಂದಿ ಮೂರ್ತಿ ಪ್ರತಿಷ್ಠಾಪನೆ ಖಾನಾಪೂರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ