Breaking News

ಗೋಕಾಕ ಮತ್ತು ಅರಬಾವಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಬೆಳಗಾವಿಗೆ ಮತ್ತೆ ಸಿಎಂ B.S.Y.

Spread the love

ಬೆಳಗಾವಿ – ಬೆಳಗಾವಿ ಲೋಕಸಭಾ ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕದಲ್ಲಿರುವ ಭಾರತೀಯ ಜನತಾ ಪಾರ್ಟಿ ಈಗ ಗೋಕಾಕ ಮತ್ತು ಅರಬಾವಿ ಕ್ಷೇತ್ರದ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಿದೆ.

 

 

 

 

 

 

 

 

 

 

 

ಗೋಕಾಕ ಮತ್ತು ಅರಬಾವಿ ಕ್ಷೇತ್ರದಲ್ಲಿ ಜಾರಕಿಹೊಳಿ ಕುಟುಂಬದ ಮತಗಳು ಹೆಚ್ಚಿದ್ದು, ಆ ಮತಗಳು ಸತೀಶ್ ಜಾರಕಿಹೊಳಿಗೆ ಹೋದಲ್ಲಿ ಬಿಜೆಪಿ ಬೆಳಗಾವಿ ಕ್ಷೇತ್ರವನ್ನು ಕಳೆದುಕೊಳ್ಳುವ ಆತಂಕ ಉಂಟಾಗಿದೆ. ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಯಾರ ಪರವಾಗಿ ಕೆಲಸ ಮಾಡಲಿದ್ದಾರೆ ಎನ್ನುವ ಪ್ರಶ್ನೆಗೆ ಸೋಮವಾರದವರೆಗೂ ಉತ್ತರ ಸಿಕ್ಕಿರಲಿಲ್ಲ. ಸೋಮವಾರ ಬಾಲಚಂದ್ರ ಜಾರಕಿಹೊಳಿ ಗೋಕಾಕಕ್ಕೆ ಆಗಮಿಸಿ ಮಂಗಲಾ ಅಂಗಡಿಗೆ ಬೆಂಬಲ ಎಂದು ಘೋಷಿಸಿದರು.

ಆದಾಗ್ಯೂ ಬಿಜೆಪಿ ನಾಯಕರಿಗೆ ನಂಬಿಕೆ ಬಂದಂತೆ ಕಾಣುತ್ತಿಲ್ಲ. ಈ ಎರಡೂ ಕ್ಷೇತ್ರದ ಮತಗಳು ಸತೀಶ್ ಜಾರಕಿಹೊಳಿಗೆ ಹೋದರೆ ಸಂಕಷ್ಟ ಎದುರಾಗಲಿದೆ ಎಂದು ಮನಗಂಡು ಬುಧವಾರ ಮುಖ್ಯಮಂತ್ರಿಗಳ ಸಭೆ ಆಯೋಜಿಸಿದ್ದಾರೆ. ಯಡಿಯೂರಪ್ಪ ಬುಧವಾರ ಬೆಳಗ್ಗೆ ಮೂಡಲಗಿಯಲ್ಲಿ ಮತ್ತು ಸಂಜೆ ಗೋಕಾಕದಲ್ಲಿ ಸಾರ್ವಜನಿಕ ಸಭೆ ನಡೆಸಲಿದ್ದಾರೆ.

ಏ.15ರಂದು ಯಡಿಯೂರಪ್ಪ ಬೆಳಗಾವಿ ನಗರದಲ್ಲಿ 2 ಸಭೆಗಳನ್ನು ನಡೆಸಲಿದ್ದಾರೆ. ಅಂದೇ ಬಹಿರಂಗ ಪ್ರಚಾರಕ್ಕೆ ತರೆ ಬೀಳಲಿದೆ.


Spread the love

About Laxminews 24x7

Check Also

ಕಾರ್ ಹಾಗೂ ಕೆ ಎಸ್ ಆರ್ ಟಿ ಸಿ. ಬಸ್ ಮಧ್ಯ ಭೀಕರ ಅಪಘಾತ

Spread the love ಅಥಣಿ ಹೊರವಲಯದಲ್ಲಿ ಬಸ್- ಕಾರ ಮಧ್ಯೆ ಭೀಕರ ಅಪಘಾತ ಕಾರ್ ಹಾಗೂ ಕೆ ಎಸ್ ಆರ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ