Breaking News

ಮದ್ವೆಯಾಗಿ ಕೊಲ್ಹಾಪುರದಿಂದ ಬೆಳಗಾವಿಗೆ ಬಂದ್ರು – ಮೊದಲ ರಾತ್ರಿಯೇ ಕನ್ಯತ್ವ ಪರೀಕ್ಷೆ ಶೀಲ ಶಂಕಿಸಿ ವಿಚ್ಛೇಧನ

Spread the love

ಮುಂಬೈ: ಪತ್ನಿಯರ ಶೀಲ ಶಂಕಿಸಿ ಇಬ್ಬರು ಸಹೋದರಿಯರನ್ನು ಅವರ ಪತಿಯಂದಿರು ಮನೆಯಿಂದ ಹೊರ ಹಾಕಿರುವ ಘಟನೆ ಮಹಾರಾಷ್ಟ್ರದ ಕೊಲ್ಹಾಪುರದಲ್ಲಿ ನಡೆದಿದೆ. ಈ ಪತಿಯದಿರ ಕುಟುಂಬದ ವಿರುದ್ಧ ಪ್ರಕರಣ ದಾಖಲಾಗಿದೆ.

ಪ್ರಕರಣದ ಹಿನ್ನಲೆ:
2020ರಲ್ಲಿ ನವೆಂಬರ್‍ನಲ್ಲಿ ಕಂಬರ್ಜಾಟ್ ಸಮುದಾಯಕ್ಕೆ ಸೇರಿದ ಇಬ್ಬರು ಅಕ್ಕತಂಗಿಯರು, ಅದೇ ಸಮುದಾಯದ ಕರ್ನಾಟಕದ ಬೆಳಗಾವಿ ಒಂದೇ ಸಮುದಾಯದ ಯುವಕರನ್ನು ವಿವಾಹವಾದರು. ಮೊದಲ ರಾತ್ರಿಯಂದು ಸಮುದಾಯ ಸಂಪ್ರದಾಯದಂತೆ ಅಕ್ಕತಂಗಿಯರ ಶೀಲ ಪರೀಕ್ಷೆಸಲಾಗಿದೆ. ಈ ಪರೀಕ್ಷೆಯಲ್ಲಿ ಅಕ್ಕ ವಿಫಲಳಾಗಿದ್ದಾಳೆ. ಆದರೆ ತಂಗಿ ಉತ್ತೀರ್ಣಳಾಗಿದ್ದಾಳೆ. ಈ ವಿಚಾರವಾಗಿ ಪತಿ ಮನೆಯವರು ತಕರಾರು ಮಾಡಿದ್ದಾರೆ. ಹಾಗಾಗಿ ಅಕ್ಕನ ಮೇಲೆ ಶೀಲ ಕಳೆದುಕೊಂಡ ಆರೋಪವನ್ನು ಹೊರಿಸಲಾಗಿದೆ. ಶೀಲಗೆಟ್ಟವಳ ತಂಗಿ ಎಂಬ ಹಣೆಪಟ್ಟಿ ಕಟ್ಟಿ ತಂಗಿಯನ್ನು ಮನೆಯಿಂದ ಆಚೆ ಹಾಕಿದ್ದಾರೆ.

ಈ ವಿಚಾರವಾಗಿ ಸ್ಥಳೀಯ ಜಾತಿಯ ಮುಖಂಡರೂ ಪಂಚಾಯತ್ ಬೆಂಬಲಿಸಿವೆ. ಮಹಿಳೆಯರಿಗೆ ಅವರ ಪತಿಯಂದಿರು ಮೌಖಿಕವಾಗಿ ನೀಡಿದ ವಿಚ್ಛೇಧನಕ್ಕೆ ಪಂಚಾಯತ್ ಒಪ್ಪಿಗೆಯನ್ನು ನೀಡಿದೆ.

ಕರ್ನಾಟಕದ ಬೆಳಗಾವಿಯಲ್ಲಿ ಮದುವೆಯಾದ ಕೇವಲ ನಾಲ್ಕು ದಿನಗಳ ನಂತರ ನಾವು ಚಿತ್ರಹಿಂಸೆ ಎದುರಿಸಬೇಕಾಯಿತು. ಕನ್ಯತ್ವ ಪರೀಕ್ಷೆಗೆ ಒಳಪಡಿಸುವಂತೆ ಕೇಳಲಾಯಿತು ಮತ್ತು ಐದನೇ ದಿನ ಕರ್ನಾಟಕದಿಂದ ಕೊಲ್ಹಾಪುರದ ನಮ್ಮ ಮನೆಗೆ ವಾಪಸ್ ಕಳುಹಿಸಲಾಗಿದೆ ಎಂದು ಸಹೋದರಿಯೊಬ್ಬರು ಪೊಲೀಸರಿಗೆ ಪತ್ರ ಬರೆದಿದ್ದಾರೆ. ಸಹೋದರಿಯರು ಸಹಾಯಕ್ಕಾಗಿ ಮಹಾರಾಷ್ಟ್ರ ಅಂಧಶ್ರದ್ಧ ನಿರ್ಮುಲನ್ ಸಮಿತಿಯನ್ನು ಸಂಪರ್ಕಿಸಿ ತಮ್ಮ ಗಂಡಂದಿರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಈ ವಿಚಾರನ್ನು ತಿಳಿದ ಪೊಲೀಸರು ಹಳ್ಳಿಗೆ ಹೋಗಿ ಪ್ರಕರಣದ ಕುರಿತಾಗಿ ತಿಳಿದುಕೊಂಡಿದ್ದಾರೆ. ಇಂತಹ ಕೃತ್ಯವೆಸಗಿದ ಸಹೋದರರು ಮತ್ತು ಅವರ ತಾಯಿ ಸೇರಿದಂತೆ ಎಂಟು ಜನರ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಸ್ಥಳೀಯ ಪಂಚಾಯತ್ ಮುಖಂಡರ ವಿರುದ್ಧವೂ ದೂರು ದಾಖಲಿಸಿದ್ದಾರೆ.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ