Breaking News

ಕಳತ್ಮಾಡು: ವರ್ಷದಿಂದ ಉಪಟಳ ನೀಡುತ್ತಿದ್ದ ಆನೆ ಕೊನೆಗೂ ಬಂದಿ!

Spread the love

ಮಡಿಕೇರಿ: ಒಂದು ವರ್ಷದಿಂದ ಗಾಮೀಣ ಭಾಗಗಳಿಗೆ ಲಗ್ಗೆ ಇಟ್ಟು ಅಪಾರ ಕೃಷಿ ಹಾನಿಗೆ ಕಾರಣವಾಗಿದ್ದ ಪುಂಡಾನೆಯನ್ನು ಅರಣ್ಯ ಇಲಾಖೆ ಸಿಬಂದಿ ಕಳತ್ಮಾಡು ಗ್ರಾಮದ ಕಾಫಿ ತೋಟದಿಂದ ಸೆರೆ ಹಿಡಿದಿದ್ದಾರೆ.

35ರ ಹರೆಯದ ಗಂಡಾನೆಯ ಸೆರೆಗೆ 3 ದಿನ ಗಳಿಂದ ಕಾರ್ಯಾಚರಣೆ ನಡೆಸಿರುವ ಸಿಬಂದಿ ಬಲ್ಲೆ ಹಾಗೂ ಮತ್ತಿಗೋಡು ಆನೆ ಶಿಬಿರಗಳ 6 ಸಾಕಾನೆಗಳ ಸಹಕಾರ ಪಡೆದುಕೊಂಡಿದ್ದರು.

ದಕ್ಷಿಣ ಕೊಡಗಿನ ಪೊನ್ನಂಪೇಟೆ ತಾಲೂಕಿಗೆ ಒಳಪಟ್ಟ ಗೋಣಿಕೊಪ್ಪಲು ಬಳಿಯ ಕಳತ್ಮಾಡು ಹಾಗೂ ಅಮ್ಮತ್ತಿ ಗ್ರಾಮದಲ್ಲಿ ಪುಂಡಾನೆಯ ಹಾವಳಿ ಮಿತಿ ಮೀರಿತ್ತು. ಬೇಸತ್ತ ಗ್ರಾಮಸ್ಥರು ಕಾಡಾನೆಗಳನ್ನು ಸೆರೆಹಿಡಿಯುವಂತೆ ಅರಣ್ಯ ಇಲಾಖೆಯ ಮೇಲೆ ಒತ್ತಡ ಹೇರಿದ್ದರು. ಪಶುವೈದ್ಯ ಡಾ| ಮುಜೀಬ್‌ ಮಾರ್ಗದರ್ಶನದೊಂದಿಗೆ ಮಡಿಕೇರಿ, ವೀರಾಜಪೇಟೆ ಅರಣ್ಯಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ಸೆರೆ ಸಿಕ್ಕ ಕಾಡಾನೆಯನ್ನು ಕ್ರೇನ್‌ ಬಳಸಿ ಲಾರಿಗೆ ಏರಿಸಿ ಬಂಡೀಪುರ ಅರಣ್ಯಕ್ಕೆ ರವಾನಿಸಲಾಗಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.


Spread the love

About Laxminews 24x7

Check Also

ನಾಲ್ಕು ರಾಜ್ಯಗಳ ಉಪಚುನಾವಣೆ: ಬಿಜೆಪಿ ಅಭ್ಯರ್ಥಿಗಳ ಪಟ್ಟಿ ಪ್ರಕಟ

Spread the loveಭಾರತೀಯ ಜನತಾ ಪಾರ್ಟಿ (ಬಿಜೆಪಿ) ಗೋವಾ ಸೇರಿದಂತೆ ನಾಲ್ಕು ರಾಜ್ಯಗಳ ಐದು ವಿಧಾನಸಭಾ ಕ್ಷೇತ್ರಗಳಿಗೆ ನಡೆಯಲಿರುವ ಉಪಚುನಾವಣೆಗಾಗಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ