Breaking News

ಸಾರಿಗೆ ನೌಕರರ ಮುಷ್ಕರ ಎಫೆಕ್ಟ್ :ಖಾಸಗಿ ಬಸ್ಗಳ ಟಾಪ್ ನಲ್ಲಿ ಕುಳಿತು ಪ್ರಯಾಣ

Spread the love

ಬೆಂಗಳೂರು : ಗಂಡ ಹೆಂಡ್ತಿ ಜಗಳದಲ್ಲಿ ಕೂಸು ಬಡವಾಯ್ತು ಅನ್ನೋ ಮಾತು ಸದ್ಯ ರಾಜ್ಯದಲ್ಲಿ ನಡೆಯುತ್ತಿರುವ ವಿದ್ಯಮಾನಗಳೇ ಸಾಕ್ಷಿ. ಸಾರಿಗೆ ನೌಕರರು ಮತ್ತು ಸರ್ಕಾರದ ನಡುವಿನ ಜಟಾಪಟಿ ಎರಡನೇ‌ ದಿನವೂ ಮುಂದುವರೆದಿದ್ದು, ಇವರಿಬ್ಬರ ಮಧ್ಯೆ ಸಿಲುಕಿರುವ ಸಾರ್ವಜನಿಕರು ಸಂಕಷ್ಟ ಎದುರಿಸುವಂತಾಗಿದೆ.‌ ಸಾರ್ವಜನಿಕರಿಗೆ ಅನುಕೂಲವಾಗಲೆಂದು ಸರ್ಕಾರವೇನೋ ಖಾಸಗಿ ಬಸ್​, ಮ್ಯಾಕ್ಸಿಕ್ಯಾಬ್​ಗಳ ಮೊರೆ ಹೋಗಿದೆ. ‌

ಆದರೆ, ಸರಿಯಾದ ಸಮಯಕ್ಕೆ ನಿಗದಿತ ಸ್ಥಳಕ್ಕೆ ತಲುಪಲಾಗದೇ ಸಾಮಾನ್ಯ ಜನರು ಹೈರಾಣಾಗಿದ್ದಾರೆ. ನಗರ ಸಾರಿಗೆ ಬಸ್​ಗಳು ಇಲ್ಲದ ಕಾರಣ ಹಾಗೇ ನೂರಾರು ರೂಪಾಯಿ ಕೊಟ್ಟು ಆಟೋದಲ್ಲಿ ಪ್ರಯಾಣಿಸಲು ಸಾಧ್ಯವಾಗದೇ ಖಾಸಗಿ ಬಸ್​ಗಳಲ್ಲೇ ಪ್ರಯಾಣಿಸುತ್ತಿದ್ದಾರೆ‌. ಇತ್ತ ಬಸ್​ಗಳಲ್ಲಿ ಪ್ರಯಾಣಿಕರು ಫುಲ್ ಆದ ಕಾರಣ ಬಸ್ಸಿನ ಟಾಪ್ ಮೇಲೆ ಕುಳಿತು ಪ್ರಯಾಣಿಸುತ್ತಿರುವ ದೃಶ್ಯ ಬೆಂಗಳೂರು ನಗರದಲ್ಲಿ ಕಂಡುಬಂದಿದೆ.

ನಿನ್ನೆ ಒಂದೇ ದಿನ 11 ಸಾವಿರಕ್ಕೂ ಹೆಚ್ಚು ಖಾಸಗಿ ಬಸ್ಸುಗಳಿಂದ ಸೇವೆ : ರಾಜ್ಯದಲ್ಲಿ ಸಾರಿಗೆ ನೌಕರರ ಮುಷ್ಕರ ಹಿನ್ನೆಲೆ, ಸಾರಿಗೆ ನೌಕರರಿಗೆ ಸೆಡ್ಡು ಹೊಡೆದು ಖಾಸಗಿ ಬಸ್​ಗಳನ್ನ ರಸ್ತೆಗಿಳಿಸಲಾಗಿದೆ.‌ ಪರ್ಯಾಯ ವ್ಯವಸ್ಥೆ ಹೆಸರಿನಲ್ಲಿ ಬರೋಬ್ಬರಿ 22 ಸಾವಿರ ಖಾಸಗಿ ಬಸ್ಸುಗಳಿಗೆ ಸಾರಿಗೆ ಇಲಾಖೆ ಪರ್ಮಿಟ್ ನೀಡಿದೆ. ನಿನ್ನೆ ಒಂದೇ ದಿನ 11,155 ಖಾಸಗಿ ಬಸ್​ಗಳಿಂದ ಪ್ರಯಾಣಿಕರಿಗೆ ಸೇವೆ ಒದಗಿಸಲಾಗಿದೆ. ಕೆಎಸ್​ಆರ್​ಟಿಸಿ ವ್ಯಾಪ್ತಿಯಲ್ಲಿ 3,152 ಬಸ್ಸುಗಳು ಕಾರ್ಯಾಚರಣೆಯಾಗಿದ್ದು,

ಬಿಎಂಟಿಸಿ ಬಸ್ ನಿಲ್ದಾಣದ ಮೂಲಕ 3,124 ಬಸ್ಸುಗಳು( ಖಾಸಗಿ ಬಸ್ಸು 1,124 ಹಾಗೂ ಮ್ಯಾಕ್ಸಿ ಕ್ಯಾಬ್ 2,000) ಬೆಂಗಳೂರಿನಲ್ಲಿ ಕಾರ್ಯಚರಿಸಿವೆ. ಇನ್ನು, ಎನ್​ಡಬ್ಲ್ಯೂ ಕೆಎಸ್​ಆರ್​ಟಿಸಿ ವ್ಯಾಪ್ತಿಯಲ್ಲಿ 1,645 ಬಸ್​ಗಳು, ಎನ್‌ಇಕೆಎಸ್‌ಆರ್ಟಿಸಿ 3,234 ಬಸ್​ಗಳ ಓಡಾಟ ನಡೆಸಿವೆ. 22 ಸಾವಿರ ಖಾಸಗಿ ಬಸ್​ಗಳ ಪೈಕಿ 11,155 ಬಸ್​ಗಳ ಓಡಾಟವಾಗಿದೆ. ನಿನ್ನೆ ತಮಿಳುನಾಡಿನ 300, ಆಂಧ್ರಪ್ರದೇಶದ 125, ತೆಲಂಗಾಣದ 20, ಕೇರಳದ 25 ಬಸ್​ಗಳು ಬೆಂಗಳೂರಿನಿಂದ ಕಾರ್ಯಾಚರಣೆ ನಡೆಸಿವೆ.

ಇಂದು ಕೂಡ ಬೆರಳೆಣಿಕೆಯಷ್ಟು ಸಾರಿಗೆ ಬಸ್ ​ ಗಳ ಓಡಾಟ :
ವಿವಿಧ ಭಾಗಗಳಿಗೆ ಕೆಎಸ್​ಆರ್​ಟಿಸಿಯಿಂದ 38 ಬಸ್​ಗಳ ಕಾರ್ಯಾಚರಣೆ ಆಗಿದ್ದು, ಬಿಎಂಟಿಸಿ 28, ಎನ್‌ಇಕೆಆರ್ಟಿಸಿ 54, ಎನ್​ಡಬ್ಲ್ಯೂ ಕೆಎಸ್​ಆರ್​ಟಿಸಿಯ 14 ಬಸ್​ಗಳು ಬೆಳಗ್ಗೆ 10 ಗಂಟೆಯವರೆಗೆ ಕಾರ್ಯಾಚರಣೆ ನಡೆಸಿವೆ.


Spread the love

About Laxminews 24x7

Check Also

ವೀರಶೈವ-ಲಿಂಗಾಯತ ಒಬಿಸಿ ಸೇರ್ಪಡೆಗೆ ಒತ್ತಾಯ

Spread the love ಬೆಂಗಳೂರು: ಜಾತಿ ಗಣತಿ (ಸಾಮಾಜಿಕ ಮತ್ತು ಆರ್ಥಿಕ ಸಮೀಕ್ಷೆ) ವರದಿಯನ್ನು ಮುಂದಿನ ಸಚಿವ ಸಂಪುಟದಲ್ಲಿ ಕೈಗೆತ್ತಿಕೊಳ್ಳಲು ಸರಕಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ