Breaking News

ಮನೆಗಳ್ಳನ ಬಂಧನ; ೨೩,೧೫,೦೦೦/- ರೂ. ಮೌಲ್ಯದ ಬಂಗಾರದ ಆಭರಣ, ಹಾಗೂ ೬೦ ಸಾವಿರ ನಗದು ವಶಕ್ಕೆ

Spread the love

ಬೆಳಗಾವಿ – ದಿನಾಂಕ:೦೩-೦೪-೨೦೨೧ ರಂದು ಗೌಸಮೋದಿನ ಮೈನುದ್ದಿನ ತೋರಗಲ್ಲ, ಬೆಳಗಾವಿ ಇವರು  ದಿನಾಂಕ: ೦೨-೦೪-೨೦೨೧ ರಂದು ರಾತ್ರಿ ವೇಳೆಯಲ್ಲಿ ಸಂಗಮೇಶ್ವರ ನಗರದಲ್ಲಿರುವ ತಮ್ಮ ಮನೆಯಲ್ಲಿದ್ದ ೪೭೦ ಗ್ರಾಂ ಬಂಗಾರದ ಆಭರಣ ಹಾಗೂ ಒಂದು ಲಕ್ಷ ನಗದು ಹಣವನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ ಎಂದು ನೀಡಿದ ದೂರಿನನ್ವಯ ಎ.ಪಿ.ಎಮ್.ಸಿ. ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿಕೊಂಡು ತನಿಖೆ ಕೈಗೊಳ್ಳಲಾಗಿತ್ತು.

ಮೊಹ್ಮದಸಲ್ಮಾನ ನಸೀರಅಹ್ಮದ ಅನ್ಸಾರಿ ( ವಯಾ: ೨೨ ವರ್ಷ, ಸಾ: ಸಿಕಂದರಪೂರ, ೨ನೇ ಗಲ್ಲಿ, ಜಿಲ್ಲಾ, ಬಸ್ತಿ, ಠಾಣಾ ಪರಸರಾಮಪೂರ, ತಾಲೂಕ ಹರಯ್ಯ, ಉತ್ತರಪ್ರದೇಶ ಹಾಲಿ ಪ್ಲಾಟ ನಂ: ೧೮/ಸಿ ಕೆ.ಐ.ಎ.ಡಿ.ಬಿ ಹೊನಗಾ ಬೆಳಗಾವಿ) ಇವನನ್ನು ವಶಕ್ಕೆ ಪಡೆದುಕೊಂಡು ವಿಚಾರಣೆಗೊಳಪಡಿಸಿದಾಗ  ಕಳುವು ಮಾಡಿದ ಬಗ್ಗೆ ಒಪ್ಪಿಕೊಂಡು, ಕಳ್ಳತನ ಮಾಡಿದ ಸುಮಾರು ೨೩,೧೫,೦೦೦/- ರೂ ಮೌಲ್ಯದ ೪೭೦ ಗ್ರಾಂ ಬಂಗಾರದ ಆಭರಣ ಹಾಗೂ ಕೆನರಾ ಬ್ಯಾಂಕ್ ಅಜಮನಗರ ಬ್ಯಾಂಚದಲ್ಲಿ ತನ್ನ ಖಾತೆಗೆ ಜಮಾಮಾಡಿಕೊಂಡಿದ್ದ ರೂ.೬೦,೦೦೦/- ನಗದು ಹೀಗೆ ಒಟ್ಟು ರೂ.೨೩,೭೫,೦೦೦/- ಮೌಲ್ಯದ ಬಂಗಾರದ ಆಭರಣ ಮತ್ತು ಹಣವನ್ನು  ಜಪ್ತಪಡಿಸಿಕೊಂಡು ಆತನ ವಿರುದ್ಧ ಕಾನೂನು ಕ್ರಮ ಜರುಗಿಸಲಾಗಿದೆ.

ತ್ಯಾಗರಾಜನ ಪೊಲೀಸ್ ಆಯುಕ್ತರು ಬೆಳಗಾವಿನಗರ ಹಾಗೂ ಮುತ್ತು ರಾಜ ಡಿಸಿಪಿ (ಅ&ಸಂ) ನಿರ್ದೆಶನದ ಮೇರೆಗೆ  ಎನ್ ವ್ಹಿ ಭರಮನಿ ಎಸಿಪಿ ಅಪರಾಧ ಪ್ರಭಾರ ಮಾರ್ಕೆಟ ಉಪವಿಭಾಗ ರವರ ಉಸ್ತುವಾರಿಯಲ್ಲಿ ಎಪಿಎಮ್‌ಸಿ ಪೊಲೀಸ್ ಠಾಣೆಯ ಪಿಐ ದಿಲೀಪ ಕುಮಾರ ಕೆ. ಎಚ್ ರವರ ನೇತೃತ್ವದಲ್ಲಿ ತಾಂತ್ರಿಕ ವಿಭಾಗ ಮತ್ತು ಬೆರಳು ಮುದ್ರೆ ವಿಭಾಗದ ಸಹಾಯದಿಂದ ಈ ಪ್ರಕರಣವನ್ನು ಪತ್ತೆ ಹಚ್ಚಲಾಗಿದೆ.ಎಪಿಎಂಸಿ ಠಾಣೆಯ ದಿಲೀಪಕುಮಾರ ಕೆ. ಎಚ್, ಪಿ.ಐ, ಮಂಜುನಾಥ ಭಜಂತ್ರಿ ಪಿಎಸ್‌ಐ(ಕಾಸು) ಹಾಗೂ ಸಿಬ್ಬಂದಿ ಜನರಾದ ಬಿ. ಕೆ. ಮಿಟಗಾರ, ಎಎಸ್‌ಐ, ದೀಪಕ ಸಾಗರ, ಶಂಕರ ಕುಗಟೊಳಿ, ನಾಮದೇವ ಲಮಾಣಿ, ಕೆಂಪಣ್ಣ ದೊಡಮನಿ ಮತ್ತು ಟೆಕ್ನಿಕಲ್ ಶೆಲ್‌ನ ರಮೇಶ ಅಕ್ಕಿ ಮತ್ತು ಬೆರಳು ಮುದ್ರೆ ವಿಭಾಗದ ಮಹಾದೇವ ಕುಂಬಾರ ಸಿಬ್ಬಂದಿ ಕಾರ್ಯವನ್ನು ಪೊಲೀಸ್ ಆಯುಕ್ತರು ಪ್ರಶಂಸಿಸಿದ್ದಾರೆ.


Spread the love

About Laxminews 24x7

Check Also

ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ

Spread the love ಅಥಣಿ ನಗರದ ಪ್ರವಾಸಿ ಮಂದಿರದಲ್ಲಿ ಇಂದು ಸಾರ್ವಜನಿಕರ ಅಹವಾಲು ಆಲಿಸಿ, ಅವರ ಸಮಸ್ಯೆಗಳಿಗೆ ಸೂಕ್ತ ಪರಿಹಾರ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ