ಬೆಂಗಳೂರು: ಮಾಜಿ ಭೂಗತ ದೊರೆ ಮುತ್ತಪ್ಪ ರೈ ಆಸ್ತಿ ವಿಭಾಗ ಸಂಬಂಧ ಪತ್ನಿ ಅನುರಾಧಾ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಸಿವಿಲ್ ಕೋರ್ಟ್ ಸದ್ಯ ಆಸ್ತಿ ಪರಭಾರೆ ಮಾಡದಂತೆ ಮಧ್ಯಂತರ ಆದೇಶ ನೀಡಿದೆ.
ಮುತ್ತಪ್ಪ ರೈ ಅವರು ನಿಧನರಾದ ಬಳಿಕ ಎರಡನೇ ಪತ್ನಿ ಅನುರಾಧಾ ಅವರು ಪತಿಯ ಆಸ್ತಿಯನ್ನು ಪರಭಾರೆ ವಿಚಾರ ಸಂಬಂಧ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿ ವಿಚಾರಣೆ ನಡೆಸಿದ ಕೋರ್ಟ್ ಮುತ್ತಪ್ಪ ರೈ ಪುತ್ರ ರಾಕಿ, ರಿಕ್ಕಿ ಸೇರಿ 17 ಮಂದಿ ಪ್ರತಿ ವಾದಿಗಳಿಗೆ ಮೂರನೇ ವ್ಯಕ್ತಿಗಳ ಪರವಾಗಿ ಹಕ್ಕು ಸೃಷ್ಟಿಸದಂತೆ ಮಧ್ಯಂತರ ಆದೇಶ ನೀಡಿದೆ.
Laxmi News 24×7