Breaking News

ಮಾತು ಬಾರದ ಮಹಿಳೆಯ ಮೇಲೆ ಅತ್ಯಾಚಾರ

Spread the love

ಮಂಡ್ಯ: ಮಾತು ಬಾರದ ಮಹಿಳೆಯ ಮೇಲೆ ಮೂವರು ಯುವಕರು ಅತ್ಯಾಚಾರ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಹೊನಗನಹಳ್ಳಿ ಗ್ರಾಮದ ಬಳಿ ಜುರುಗಿದೆ.

ಹೊನಗನಹಳ್ಳಿ ಗ್ರಾಮದ ಮಾತು ಬಾರದ 48 ವರ್ಷದ ಮಹಿಳೆಯ ಮೇಲೆ ಅದೇ ಗ್ರಾಮದ ಮೂವರು ಯುವಕರು ಅತ್ಯಾಚಾರವೆಸಗಿದ್ದಾರೆ. ಏಪ್ರಿಲ್ 1 ರಂದು ಈ ಮಹಿಳೆ ತನ್ನ ಹೊಲದಲ್ಲಿ ಹಸು ಮೇಯಿಸಲು ಹೋಗಿದ್ದಾರೆ. ಸಂಜೆ ನಾಲ್ಕು ಗಂಟೆಯ ವೇಳೆಯಲ್ಲಿ ಮಹಿಳೆ ಇದ್ದ ಹೊಲಕ್ಕೆ ಹೊನಗನಹಳ್ಳಿ ಗ್ರಾಮದ ಪ್ರಸನ್ನ, ಶೇಖರ್, ಪವನ್ ಎಂಬ ಯುವಕರು ಹೋಗಿದ್ದಾರೆ. ಈ ವೇಳೆ ಮಹಿಳೆಯನ್ನು ಎಳೆದಾಡಿದ್ದಾರೆ, ಬಳಿಕ ಮೂವರು ಆಕೆಯ ಮೇಲೆ ಅತ್ಯಾಚಾರವೆಸಗಿದ್ದಾರೆ.

ಈ ಮೂವರು ಯುವಕರು ಕೇವಲ 25 ವರ್ಷದ ಒಳಗಿನವರಾಗಿದ್ದಾರೆ. ಈ ಪ್ರಕರಣವಾದ ಬಳಿಕ ಗ್ರಾಮದಲ್ಲೇ ರಾಜಿ ಪಂಚಾಯ್ತಿ ಮಾಡಿ ಪ್ರಕರಣವನ್ನು ಮುಚ್ಚಿ ಹಾಕಲು ಸಹ ಯತ್ನ ಮಾಡಲಾಗಿತ್ತು. ಆದರೆ ರಾಜಿ ಸಂಧಾನಕ್ಕೆ ಮಹಿಳೆಯ ಕಡೆಯವರು ಒಪ್ಪಿಲ್ಲ. ನಂತರ ನಿನ್ನೆ ಪಾಂಡವಪುರ ಪೊಲೀಸ್ ಠಾಣೆಗೆ ಮಹಿಳೆಯ ಸಂಬಂಧಿಕರು ದೂರು ನೀಡಿದ್ದಾರೆ. ದೂರಿನ ಅನ್ವಯ ಇದೀಗ ಮೂವರು ಯುವಕರನ್ನು ಪೊಲೀಸರು ಬಂಧಿಸಿದ್ದಾರೆ


Spread the love

About Laxminews 24x7

Check Also

ಅಕ್ರಮ ಗೋವು ಸಾಗಾಟ: 10 ಕಿಮೀ ಬೆನ್ನಟ್ಟಿ ಪರಾರಿಯಾಗುತ್ತಿದ್ದ ಆರೋಪಿ ಕಾಲಿಗೆ ​ಗುಂಡೇಟು ಕೊಟ್ಟ ಪೊಲೀಸರು

Spread the loveಪುತ್ತೂರು: ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣಾ ವ್ಯಾಪ್ತಿಯ ಈಶ್ವರಮಂಗಲ ಬೆಳ್ಳಿಚಡವಿನಲ್ಲಿ ಅನಧಿಕೃತವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ಐಸರ್​ ಲಾರಿಯನ್ನು ಬೆನ್ನಟ್ಟಿದ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ