ಧಾರವಾಡ: ಜಿಲ್ಲಾ ಆರೋಗ್ಯ ಇಲಾಖೆ ಉಗ್ರಾಣದಲ್ಲಿ ಕೋವಿಡ್ ವ್ಯಾಕ್ಸಿನ್ ಖಾಲಿಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಆರೋಗ್ಯ ಇಲಾಖೆಯ ಉಗ್ರಾಣದಲ್ಲಿ 8,800 ಡೋಸ್ ವ್ಯಾಕ್ಸಿನ್ ಮಾತ್ರ ಇತ್ತು. ಇಂದು ಅವುಗಳನ್ನು ಜಿಲ್ಲೆಯ 74 ಆರೋಗ್ಯ ಇಲಾಖೆಯ ವ್ಯಾಕ್ಸಿನ್ ಕೇಂದ್ರಗಳಿಗೆ ಸಪ್ಲೈ ಮಾಡಲಾಗಿದೆ. ಬೆಳಗಾವಿಯ ರಿಜನಲ್ ಸೆಂಟರ್ ನಿಂದ ಧಾರವಾಡಕ್ಕೆ ವ್ಯಾಕ್ಸಿನ್ ಬಂದರೆ ಮಾತ್ರ ನಾಳೆ ಸಾರ್ವಜನಿಕರಿಗೆ ವ್ಯಾಕ್ಸಿನ್ ಲಭ್ಯವಾಗಲಿದೆ.
ಸದ್ಯ ಧಾರವಾಡ ಜಿಲ್ಲೆಗೆ 1,37,380 ಕೋವಿಶೀಲ್ಡ್ ವ್ಯಾಕ್ಸಿನ್, 11,200 ಡೋಸ್ ಕೋವ್ಯಾಕ್ಸಿನ್ ಬಂದಿತ್ತು. ಇದರಲ್ಲಿ 1,33,130 ಡೋಸ್ ವ್ಯಾಕ್ಸಿನ್ ಇಲ್ಲಿವರಗೆ ನೀಡಲಾಗಿದೆ. ಉಳಿದ 8,800 ವ್ಯಾಕ್ಸಿನ್ ಡೋಸ್‍ಗಳನ್ನ 74 ಕೇಂದ್ರಗಳಿಗೆ ಇಂದು ಕಳಿಸಿ ಕೊಡಲಾಗಿದೆ. ಯಾವುದೇ ಕೇಂದ್ರದಲ್ಲಿ ವ್ಯಾಕ್ಸಿನ್ ಖಾಲಿಯಾದರೆ ಬೇರೆ ಕೇಂದ್ರದಲ್ಲಿ ಉಳಿದಿರುವ ವ್ಯಾಕ್ಸಿನ್ ಹೊಂದಾಣಿಕೆ ಮಾಡಿಕೊಳ್ಳುತ್ತೇವೆ ಎಂದು ಜಿಲ್ಲಾ ಆರೋಗ್ಯ ಇಲಾಖೆಯ ವ್ಯಾಕ್ಸಿನ್ ನೋಡಲ್ ಅಧಿಕಾರಿ ಎಸ್.ಎಮ್.ಹೊನಕೇರಿ ತಿಳಿಸಿದ್ದಾರೆ.