Breaking News

ಮಕ್ಕಳ ಶೌಚಾಲಯ ಹೆಸರಿನಲ್ಲಿ ದುಡ್ಡು ತಿನ್ನುವ ಕೆಲಸ, ಕಾಮಗಾರಿಗೆ ಮುನ್ನವೇ ಹಣ ಬಿಡುಗಡೆ ಇದು ಬಿಕೆ ಕಂಗ್ರಾಳಿ ಗ್ರಾಮ ಪಂಚಾಯತಿ ಕಥೆ,

Spread the love

ಬೆಳಗಾವಿ: ಇವತ್ತು ಒಂದು ಅದ್ಭುತವಾದ ಕಥೆಯನ್ನ ನಾವು ಹೇಳ್ತೀವಿ ಇದೊಂದು ಗ್ರಾಮ ಪಂಚಾಯತಿ ಕಥೆ ಇದು ಬೆಳಗಾವಿಯ ಬಿಕೆ ಕಂಗ್ರಾಳಿ ಗ್ರಾಮ ಪಂಚಾಯತಿ ಕಥೆ, ನಮ್ಮ ರಾಜ್ಯದಲ್ಲಿ ಜಿಲ್ಲೆಯಲ್ಲಿ ಬ್ರಷ್ಟಾಚಾರದ ಕಥೆ ಗಳನ್ನಾ ಸುಮಾರು ಕೆಳಿದ್ದಿವಿ,

ಹಾಗೂ ನಮ್ಮ ರಾಜ್ಯದಲ್ಲಿ ಸರ್ಕಾರಿ ಶಾಲೆಯಲ್ಲಿ ಮಕ್ಕಳು ಯಾಕೆ ಬರಲ್ಲ ಅನ್ನೋದು ಕೂಡ ನಮ್ಮ ಈ ಸ್ಟೋರಿಗೆ ನಾವು ಹೇಳುವ ಕಥೆಗೂ ಲಿಂಕ್ ಇದೆ.

ಜನ ಇವಾಗ ಕೆಲಸ ಮಾಡಿದ ಮೇಲೆ ದುಡ್ಡು ಸಿಗೋದೇ ಜಾಸ್ತಿ ಆದ್ರೆ ಇಲ್ಲಿ ಆಗಿದ್ದು ಏನು ಗೊತ್ತಾ ಕೆಲಸ ಕಾರ್ಯ ಮಾಡೋಕೆ ಮೊದಲೇ ಇಲ್ಲಿಯ ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಒ ಸೇರಿ ಸುಮಾರು ಲಕ್ಷಾಂತರ ರೂಪಾಯಿ ಗಳನ್ನ ಗುಳುಂ ಮಾಡಿದ್ದಾರೆ ಎಂದು ಜನ ಹಾಗೂ ಇಲ್ಲಿಯ ಪಂಚಾಯತಿ ಉಪಾಧ್ಯಕ್ಷ ಆರೋಪ ಮಾಡಿದ್ದಾರೆ.

ಇವಾಗ ವಿಷಯ ಏನಂದ್ರೆ ಕನ್ನಡ ಹಾಗೂ ಮರಾಠಿ ಸರ್ಕಾರಿ ಶಾಲೆಗಳಿಗೆ ಶೌಚಾಲಯ ಗಳನ್ನ ಕಟ್ಟಲು ಬಿಡುಗಡೆ ಆದ ಆನುದಾನ ವನ್ನಾ ಶೌಚಾಲಯದ ಕಾಮಗಾರಿ ಪೂರ್ತಿ ಆಗೋಕೂ ಮುಂಚೆಯೇ ಬಿಲ್ಲನ ಪಡೆದು ಕೊಂಡಿದ್ದಾರೆ.

ಇದು ಹೇಗೆ ಇದು ಒಂದು ಬೆಳಕಿಗೆ ಬಂದಿರೋ ಘಟನೆ ಇನ್ನು ಇಂಥವು ಸುಮಾರ್ ಪ್ರಕರಣ ಗಳನ್ನ ನಾವು ಮುಂದಿನ ದಿನಮಾನದಲ್ಲಿ ನಿಮ್ಮ ಮುಂದೆ ಇಡ್ತಿವಿ.

ಇನ್ನು ಇಲ್ಲಿಯ ಶಾಲೆಯ ಸಿಬ್ಬಂದಿ ವರ್ಗ ಹಾಗೂ ಇಲ್ಲಿಯ ಜನತೆಯಲ್ಲಿ ಇವಾಗ ಒಂದು ಆತಂಕ ಕಾಮಗಾರಿಗೆ ಮುಂಚೆಯೇ ಬಿಲ್ಲನ್ನು ಕೊಟ್ಟಿದ್ದಾರೆ ಕಾಮಗಾರಿ ಹಾಗೆಯೇ ಅರ್ದ ಇದೆ ಇನ್ನು ಇದನ್ನ ಪೂರ್ತಿ ಮಾಡೋರು ಯಾರು ಹಾಗೂ ಇದರ ಬಗ್ಗೆ ಉನ್ನತ ಮಟ್ಟದಲ್ಲಿ ತನಿಖೆ ಯಾಗಿ ಮಕ್ಕಳ ಶೌಚಾಲಯದ ಬಗ್ಗೆ ಕಕ್ಕಾ ತಿಂದೊರು ಕಕ್ಕೊ ಹಾಗೆ ಆಗಲೇಬೇಕು ಎಂಬುದೇ ಎಲ್ಲರ ಆಶಯವಾಗಿದೆ.

ಬಿಕೆ ಕಂಗ್ರಾಳಿ, ಹಾಗೂ ಗೌಂಡವಾಡ ಗ್ರಾಮದಲ್ಲಿ ಸರ್ಕಾರಿ ಶಾಲೆಯ ಶೌಚಾಲಯ ಗಳಿಗೆ ಬಿಡುಗಡೆ ಆದ ಅನುದಾನವನ್ನು ಗ್ರಾಮ ಪಂಚಾಯತಿ ಅಧ್ಯಕ್ಷ ಹಾಗೂ ಪಿಡಿಒ ಗಳು ಕಾಮಗಾರಿಯ ಮುಂಚೆಯೇ ಹಣ ಬಿಡುಗಡೆ ಮಾಡಿ ಕೊಂಡಿದ್ದಾರೆ

ಇನ್ನೂ ಇದರ ಬಗ್ಗೆ ಇಲ್ಲಿನ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಅವರು ಹಾಗೂ ಜಿಲ್ಲಾ ಪಂಚಾಯತಿ ಸಿಇಒ ದರ್ಶನ ಅವರು ಇದರ ಬಗ್ಗೆ ಗಮನ ಹರಿಸಿ ಇಲ್ಲಿನ ಪಿಡಿಯೋ ಅವರನ್ನ ಅಮಾನತ್ತು ಗೊಳಿಸಿ ಇಲ್ಲಿನ ಅಧ್ಯಕ್ಷರ ಬದಲಾವಣೆ ಆಗಬೇಕು ಎಂದು ಇಲ್ಲಿನ ಜನರ ಅಭಿಪ್ರಾಯ ವಾಗಿದೆ.


Spread the love

About Laxminews 24x7

Check Also

14 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನಿಪ್ಪಾಣಿ ಯುವಕನಿಗೆ 30 ವರ್ಷ ಜೈಲು ಶಿಕ್ಷೆ

Spread the love 14 ವರ್ಷದ ಬಾಲಕಿ ಮೇಲೆ ಅತ್ಯಾಚಾರ: ನಿಪ್ಪಾಣಿ ಯುವಕನಿಗೆ 30 ವರ್ಷ ಜೈಲು ಶಿಕ್ಷೆ ನಿಪ್ಪಾಣಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ