Breaking News

ಪೆಟ್ರೋಲ್, ಡೀಸೆಲ್ ಬೆಲೆ ಇನ್ನಷ್ಟು ತಗ್ಗುತ್ತದೆ; ಪೆಟ್ರೋಲಿಯಂ ಸಚಿವ

Spread the love

ಕೋಲ್ಕತ್ತಾ, ಏಪ್ರಿಲ್ 5: ದೇಶದ ತೈಲ ಬೆಲೆಯಲ್ಲಿ ಈಚೆಗಷ್ಟೆ ಸ್ವಲ್ಪ ಇಳಿಕೆಯಾಗಿದ್ದು, ಮುಂದೆ ಪೆಟ್ರೋಲ್, ಡೀಸೆಲ್ ಬೆಲೆ ಇನ್ನಷ್ಟು ಇಳಿಕೆಯಾಗಬಹುದು ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಮೂರನೇ ಹಂತದ ಚುನಾವಣೆಗೆ ಸಿದ್ಧತೆ ನಡೆಯುತ್ತಿದ್ದು, ಭಾನುವಾರ ಭೇಟಿ ನೀಡಿದ್ದ ಧರ್ಮೇಂದ್ರ ಪ್ರಧಾನ್, ಬೆಲೆ ಇಳಿಕೆಯಾಗುವ ಭರವಸೆ ನೀಡಿದ್ದಾರೆ.

ಚುನಾವಣಾ ಆಯೋಗ ನಾಲ್ಕು ರಾಜ್ಯಗಳು ಹಾಗೂ ಒಂದು ಕೇಂದ್ರಾಡಳಿತ ಪ್ರದೇಶಕ್ಕೆ ಚುನಾವಣೆ ಘೋಷಣೆ ಮಾಡಿದ ನಂತರ ಫೆಬ್ರವರಿ 27ರಿಂದಲೂ ತೈಲ ಬೆಲೆಯಲ್ಲಿ ಏರಿಕೆ ಮಾಡಿರಲಿಲ್ಲ. ಆನಂತರ ಕಚ್ಚಾ ತೈಲ ಬೆಲೆ ಇಳಿಕೆಯಾದ ಕಾರಣ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯನ್ನು ಕೊಂಚ ತಗ್ಗಿಸಲಾಗಿತ್ತು. ಪೆಟ್ರೋಲ್ ಮೇಲೆ 61 ಪೈಸೆ ಹಾಗೂ ಡೀಸೆಲ್ ಮೇಲೆ 60 ಪೈಸೆಯನ್ನು ತಗ್ಗಿಸಲಾಗಿತ್ತು. ಗ್ಯಾಸ್ ಸಿಲಿಂಡರ್ ಬೆಲೆಯನ್ನೂ 10 ರೂಪಾಯಿ ತಗ್ಗಿಸಲಾಗಿತ್ತು.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆ ಇಳಿಕೆಯಾಗಿದೆ. ಇದರ ಲಾಭವನ್ನು ಗ್ರಾಹಕರಿಗೆ ತಲುಪಿಸಲಾಗುತ್ತಿದೆ. ಪೆಟ್ರೋಲ್, ಡೀಸೆಲ್ ಬೆಲೆಯನ್ನು ಇಳಿಸಲಾಗಿದೆ. ಗ್ಯಾಸ್ ಸಿಲಿಂಡರ್ ಬೆಲೆಯೂ ಇಳಿಕೆಗೊಂಡಿದೆ. ಪೆಟ್ರೋಲ್, ಡೀಸೆಲ್ ಹಾಗೂ ಅನಿಲ ಬೆಲೆ ಮುಂದಿನ ದಿನಗಳಲ್ಲಿ ಇನ್ನಷ್ಟು ತಗ್ಗಲಿದೆ ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.

ಯುರೋಪ್ ಹಾಗೂ ಏಷ್ಯಾಗಳಲ್ಲಿ ಕೊರೊನಾ ಪ್ರಕರಣಗಳ ಏರಿಕೆ ಬೆನ್ನಲ್ಲೇ ಮಾರ್ಚ್ 15ರ ನಂತರ ಪೆಟ್ರೋಲಿಯಂ ಉತ್ಪನ್ನ ಹಾಗೂ ಕಚ್ಚಾ ತೈಲಗಳ ಬೆಲೆ ಕಡಿಮೆಯಾಗಿತ್ತು. ಈ ಬೆಲೆಯು ಸ್ಥಿರವಾಗಿದ್ದು, ಮುಂದೆ ಏರಿಕೆಯಾಗುವುದಿಲ್ಲ ಎನ್ನುವ ಭರವಸೆ ಇದೆ ಎಂದು ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿ ತರುಣ್ ಕಪೂರ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಸಕ್ರೆಬೈಲು ಆನೆ ಬಾಲಣ್ಣನ ಕಿವಿ ಕತ್ತರಿಸಿದ ವೈದ್ಯರ ತಂಡ: ಚಿಕಿತ್ಸೆ ಕುರಿತು ಡಿಎಫ್ಒ ಹೇಳಿದ್ದಿಷ್ಟು

Spread the love ಶಿವಮೊಗ್ಗ: ಸಕ್ರೆಬೈಲು ಆನೆ‌ ಬಿಡಾರದ ಬಾಲಣ್ಣ ಎಂಬ ಹೆಸರಿನ ಸಾಕಾನೆಯ ಬಲ ಕಿವಿಯನ್ನು ಬೆಂಗಳೂರಿನ ವೈದ್ಯರ ತಂಡವು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ