Breaking News

ಮೊದಲು ಯಡಿಯೂರಪ್ಪ ಯತ್ನಾಳ್ ಗೆ ಬೈದು ಬಾಯಿ ಮುಚ್ಚಿಸಲಿ. ನನಗೆ ಬೈಯ್ಯೋದಲ್ಲ: ಸಿದ್ದರಾಮಯ್ಯ

Spread the love

ಬೆಂಗಳೂರು: ಅನ್ನ ಭಾಗ್ಯ ಯೋಜನೆ ವಿಚಾರದ ಬಗ್ಗೆ ಮಾತನಾಡುವಾಗ ಸರ್ಕಾರಿ ದುಡ್ಡು ಯಾರಪ್ಪನ ಮನೆ ದುಡ್ಡಲ್ಲ ಎಂದಿದೆ. ಅದು ಬೈಗುಳವೇ? ಮೊದಲು ಯಡಿಯೂರಪ್ಪ ಯತ್ನಾಳ್ ಗೆ ಬೈದು ಬಾಯಿ ಮುಚ್ಚಿಸಲಿ. ನನಗೆ ಬೈಯ್ಯೋದಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನನಗೂ ನಲವತ್ತು ವರ್ಷದ ಅನುಭವವಿದೆ. ಇದು ಯಡಿಯೂರಪ್ಪ ಮನೆ ಹಣ ಅಲ್ಲ, ಸರ್ಕಾರದ ಹಣ ಅಂತ ಹೇಳೋದು ಅಸಂವಿಧಾನಿಕ ಪದವೇ ಎಂದು ಪ್ರಶ್ನಿಸಿದರು.

ಜಾರಕಿಹೊಳಿ ಪ್ರಕರಣದ ಯುವತಿ ಮಾಜಿ ಸಚಿವ ಡಿ.ಸುಧಾಕರ್ ಜೊತೆ ಸಂಪರ್ಕ ಮಾಡಿರೋ ವಿಚಾರವಾಗಿ ಕೇಳಿದ ಪ್ರಶ್ನೆಗೆ ಆ‌ ವಿಚಾರ ಯಾವುದು ನನಗೆ ಗೊತ್ತಿಲ್ಲ. ಗೊತ್ತಿಲ್ಲದ ವಿಚಾರ ಮಾತನಾಡಲ್ಲ ಎಂದರು.

 

ಕೊರೋನಾ ನಿಯಮ ಬದಲಾವಣೆ ವಿಚಾರದ ಬಗ್ಗೆ ಮಾತನಾಡಿದ ಅವರು, ಇಲ್ಲಿಯವರೆಗೂ ವಿಪಕ್ಷದವರನ್ನ ಕರೆದು ಮಾತನಾಡಿಲ್ಲ. ನಾನೇ ಅವರಿಗೆ ಪತ್ರ ಬರೆದಿದ್ದೇನೆ. ಈವರೆಗೂ ನಮ್ಮನ್ನ ಕರೆದು ಮಾತನಾಡಿಲ್ಲ ಎಂದರು.

ಯುವತಿ ಪೊಲೀಸ್ ಆಯುಕ್ತರಿಗೆ ಪತ್ರ ಬರೆದಿರುವ ವಿಚಾರಕ್ಕೆ ಪ್ರತಿಕ್ರಯಿಸಿದ ಸಿದ್ದರಾಮಯ್ಯ, ಅವರಿಗೆ ಎಸ್.ಐ.ಟಿ ಮೇಲೆ ನಂಬಿಕೆ ಇಲ್ಲ ಅಂದರೆ ಬೇರೆ ತನಿಖೆ ಮಾಡಲಿ. ನಾನು ಈ ಬಗ್ಗೆ ಸದನದಲ್ಲೂ ಪ್ರಸ್ತಾಪ ಮಾಡಿದ್ದೆ. ಎಸ್.ಐ.ಟಿ ಸರ್ಕಾರದ ಮುಷ್ಠಿಯಲ್ಲಿ ಇರಲಿದೆ. ಅದಕ್ಕಾಗಿ ಸಿಜೆ ತನಿಖೆ ನಡೆಸುವಂತೆ ಸೂಚಿಸಿದ್ದೆ ಎಂದರು.


Spread the love

About Laxminews 24x7

Check Also

ಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮ

Spread the loveಗೋಕಾಕ ನಗರದ ಶೆಪರ್ಡ್ ಮಿಷನ್ ಆಂಗ್ಲ ಮಾದ್ಯಮ ಶಾಲೆಯ 16 ನೆಯ ವಾರ್ಷಿಕ ಸ್ನೇಹ ಸಮ್ಮೇಳನ ಕಾರ್ಯಕ್ರಮದಲ್ಲಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ