Breaking News

ಸಿಎಂ ಬದಲಾವಣೆಯಾಗಲೇಬೇಕೆಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಯೇ ಹೇಳಿದ್ದರು: ಹೊಸ ಬಾಂಬ್ ಸಿಡಿಸಿದ ಯತ್ನಾಳ್

Spread the love

ವಿಜಯಪುರ: ಸಿಎಂ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ಹೊಸ ಬಾಂಬ್ ಸಿಡಿಸಿರುವ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ಈ ಬಗ್ಗೆ ನನ್ನ ಬಳಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಅವರೇ ಹೇಳಿದ್ದರು ಎಂದು ತಿಳಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಯತ್ನಾಳ್, ಸಿಎಂ ಬದಲಾವಣೆಯಾಗಲೇಬೇಕು. ಬಿ‌ ಎಸ್ ವೈ ಸಿಎಂ ಆಗಿ ಮುಂದುವರಿದರೆ ಬಿಜೆಪಿಗೆ ಭವಿಷ್ಯ ಇಲ್ಲ. ಹಾಗಾಗಿ ಸಿಎಂ ಬದಲಾವಣೆಯಾಗಬೇಕು ಎಂದು ವಿಧಾನಸೌಧದಲ್ಲಿ ರವಿಕುಮಾರ್ ಭೇಟಿಯಾದ ವೇಳೆ ಹೇಳಿದ್ದರು.

ನಾನು ಸಿಎಂ ಬದಲಾವಣೆ ಬಗ್ಗೆ ಮಾತನಾಡಿದ್ದು ಸರಿಯಿದೆ ಎಂದಿದ್ದರು. ಯತ್ನಾಳ್ ನೀನು ಮಾಡಿದ್ದು ಸರಿಯಾಗಿದೆ. ಅದನ್ನು ಮುಂದುವರೆಸು. ಸಿಎಂ ಬದಲಾವಣೆಯಾಗದಿದ್ದರೆ ಬಿಜೆಪಿಗೆ ಉಳಿಗಾಲವಿಲ್ಲ. ಬಿಜೆಪಿ ಸರ್ಕಾರ ರಾಜ್ಯದಲ್ಲಿ ಇಲ್ಲದಾಗಿದೆ ಎಂದು ಖುದ್ದು ರವಿಕುಮಾರ್ ಹೇಳಿದ್ದರು ಎಂದಿದ್ದಾರೆ.

ಇದೇ ವೇಳೆ ಬಿ.ವೈ.ವಿಜಯೇಂದ್ರ ವಿರುದ್ಧವೂ ಮತ್ತೆ ವಾಗ್ದಾಳಿ ಮುಂದುವರೆಸಿರುವ ಯತ್ನಾಳ್, ಡಿ.ಕೆ.ಶಿವಕುಮಾರ್, ವಿಜಯೇಂದ್ರ ಲಕ್ಷ್ಮಿ ವಿಲಾಸ್ ಹಾಗೂ ಫೆಡರಲ್ ಬ್ಯಾಂಕ್ ನಲ್ಲಿ ಎಷ್ಟು ಹಣ ಇಟ್ಟಿದ್ದಾರೆ? ಇಡಿ ತನಿಖೆ ಯಾರ ಮೇಲೆ ನಡೆಯುತ್ತಿದೆ? ಎಷ್ಟು ಕೋಟಿ ಹಗರಣ ನಡೆಯುತ್ತಿದೆ? ಫೆಬ್ರವರಿಯಲ್ಲಿ 4 ದಿನ ಇಡಿ ಕರೆದೊಯ್ದು ವಿಚಾರಣೆ ನಡೆಸಿದ್ದು ಯಾರನ್ನು? ಎಂಬುದನ್ನು ಮೊದಲು ಬಿ.ವೈ.ವಿಜಯೇಂದ್ರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.


Spread the love

About Laxminews 24x7

Check Also

ಜೈಲಿನಲ್ಲಿ ತಪಾಸಣೆಗೆ ಎಐ ಮಾದರಿ ತಂತ್ರಜ್ಞಾನ ಬಳಕೆ: ಕಾರಾಗೃಹ ಡಿಜಿಪಿ ಅಲೋಕ್ ಕುಮಾರ್

Spread the loveಮಂಗಳೂರು: ಜೈಲಿನಲ್ಲಿ ತಪಾಸಣೆಗೆ ಟ್ರಯಲ್ ಬೇಸಿಸ್ ಮೇಲೆ ಎಐ ಟೆಕ್ನಾಲಜಿ ಬಳಕೆ ಮಾಡುತ್ತೇವೆ.‌ ಅದು ಎಷ್ಟು ಪರಿಣಾಮಕಾರಿ ಆಗುತ್ತದೆ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ