Breaking News

ಸರ್ಕಾರದ ನಿರ್ಧಾರ ಕೇಳಿ ನನಗೆ ಶಾಕ್ ಆಯ್ತು : ಕಿಚ್ಚ

Spread the love

ಬೆಂಗಳೂರು, ಏ.3- ಚಿತ್ರಮಂದಿರಗಳಲ್ಲಿ ಶೇ.50ರಷ್ಟು ಸೀಟ್ ಭರ್ತಿಗೆ ಮಾತ್ರ ಅವಕಾಶ ಕಲ್ಪಿಸಿರುವ ಸರ್ಕಾರದ ಕ್ರಮ ಅತ್ಯಂತ ಶಾಂಕಿಂಗ್ ವಿಷಯ. ಸಿನಿ ರಂಗಕ್ಕೆ ಸಂಕಷ್ಟದ ವಿಷಯ ಕೂಡ ಎಂದು ಚಿತ್ರನಟ ಸುದೀಪ್ ಹೇಳಿದ್ದಾರೆ. ಈ ಕುರಿತು ಟ್ವಿಟ್ ಮಾಡಿರುವ ಅವರು, ಈ ನಿಯಮ ಒಳ್ಳೆಯ ಉದ್ದೇಶಕ್ಕೆ ಜಾರಿ ಮಾಡಲಾಗಿದೆ. ಸರ್ಕಾರದ ಈ ನಿರ್ಧಾರವನ್ನು ನಾನು ಸ್ವಾಗತಿಸುತ್ತೇನೆ ಎಂದು ಹೇಳಿದ್ದಾರೆ.

ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಸರ್ಕಾರ ಹೊಸ ಮಾರ್ಗಸೂಚಿಗಳನ್ನು ಜಾರಿಗೆ ತಂದು ಥಿಯೇಟರ್‍ಗಳಲ್ಲಿ ಶೇ.50ರಷ್ಟು ಮಾತ್ರ ಆಸನ ವ್ಯವಸ್ಥೆ ಅವಕಾಶ ನೀಡಿದೆ. ಸರ್ಕಾರದ ಈ ನಿರ್ಧಾರ ಸ್ವಾಗತಾರ್ಹ.ಈ ನಿಯಮದಿಂದ ಹಲವು ಚಿತ್ರಗಳ ಮೇಲೆ ಪರಿಣಾಮ ಬೀರುತ್ತದೆ. ಆದರೂ ಸರ್ಕಾರದ ನಿರ್ಧಾರ ಗೌರವಿಸುವುದು ನಮ್ಮ ಕರ್ತವ್ಯ ಎಂದಿದ್ದಾರೆ.ಸರ್ಕಾರದ ಹೊಸ ನಿಯಮದ ಪರಿಣಾಮ ಎರಡು ದಿನಗಳ ಹಿಂದಷ್ಟೇ ತೆರೆ ಕಂಡ ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅಭಿನಯದ ಯುವರತ್ನ ಚಿತ್ರದ ಮೇಲೂ ಉಂಟಾಗಿದ್ದು,

ಯುವರತ್ನನಿಗೂ ಧೈರ್ಯ ತುಂಬಿರುವ ಸುದೀಪ್, ಸಂಕಷ್ಟದ ಪರಿಸ್ಥಿತಿಯನ್ನು ಗೆದ್ದು ಯಶಸ್ವಿಯಾಗಿ ಹೊರ ಹೊಮ್ಮುವ ಶಕ್ತಿಯನ್ನು ಯುವ ರತ್ನಕ್ಕೆ ಚಿತ್ರಕ್ಕೆ ನೀಡಲಿ ಎಂದು ಅವರು ಹಾರೈಸಿದ್ದಾರೆ.


Spread the love

About Laxminews 24x7

Check Also

ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್..

Spread the love ತರುಣ್ ಸುಧೀರ್ ನಿರ್ಮಾಣದ ‘ಏಳುಮಲೆ’ ಸಿನಿಮಾದ ಮೆಲೋಡಿ ಹಾಡು ರಿಲೀಸ್.. ರಾಣಾ-ಪ್ರಿಯಾಂಕಾ ಜೋಡಿಯ ಏಳುಮಲೆ ಸಿನಿಮಾದ‌ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ