Breaking News

ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಬಿಗ್ ಶಾಕ್ : ನಾಳೆಯಿಂದ ಟಿವಿ, ಎಸಿ, ರೆಫ್ರಿಜರೇಟರ್ ಬೆಲೆ ಏರಿಕೆ!

Spread the love

ನವದೆಹಲಿ: ಈಗಾಗಲೇ ಬೆಲೆ ಏರಿಕೆಯಿಂದ ತತ್ತರಿಸಿರುವ ಗ್ರಾಹಕರಿಗೆ ಮತ್ತೊಂದು ಶಾಕ್ ಎದುರಾಗಿದ್ದು, ಏಪ್ರಿಲ್ 1 ರಿಂದ ಏರ್ ಕಂಡೀಷನರ್, ರೆಫ್ರಿಜರೇಟರ್, ಕೂಲರ್, ಟಿವಿಗಳ ಬೆಲೆ ಹೆಚ್ಚಿಸಲು ಕಂಪನಿಗಳು ನಿರ್ಧರಿಸಿವೆ ಎನ್ನಲಾಗಿದೆ.

 

ಕಚ್ಚಾ ವಸ್ತುಗಳ ಬೆಲೆ ಏರಿಕೆಯಿಂದಾಗಿ ಕಂಪನಿಗಳು ಎಲೆಕ್ಟ್ರಾನಿಕ್ ವಸ್ತುಗಳ ಬೆಲೆಗಳನ್ನು ಹೆಚ್ಚಿಸಲು ಮುಂದಾಗಿವೆ. ಬಹುತೇಕ ಎಲ್ಲ ಕಂಪನಿಗಳು ಏಪ್ರಿಲ್ ನಿಂದ ಎಲೆಕ್ಟ್ರಾನಿಕ್ ಉತ್ಪನ್ನಗಳ ಬೆಲೆಯನ್ನು ಹೆಚ್ಚಿಸಲು ನಿರ್ಧರಿಸಿವೆ. 2021ರಲ್ಲಿ ಉಪಕರಣಗಳ ಬೆಲೆಯಲ್ಲಿ ಇದು ಎರಡನೇ ಏರಿಕೆ ಯಾಗಿದೆ. ಜನವರಿಯಲ್ಲಿ, ಅನೇಕ ಕಂಪನಿಗಳು ಉಪಕರಣಗಳ ಬೆಲೆಯನ್ನು 20% ನಷ್ಟು ಹೆಚ್ಚಿಸಿವೆ.

ಓಪನ್ ಸೆಲ್ ಪ್ಯಾನಲ್ ಗಳು ಒಂದು ತಿಂಗಳಲ್ಲಿ ಜಾಗತಿಕ ಮಾರುಕಟ್ಟೆಯಲ್ಲಿ 35 ಪ್ರತಿಶತದಷ್ಟು ದುಬಾರಿಯಾಗಿ ಪರಿಣಮಿಸಿವೆ. ಇದರಿಂದ ಪ್ಯಾನಸೋನಿಕ್, ಹೈಯರ್ ಮತ್ತು ಥಾಮ್ಸನ್ ನಂತಹ ಬ್ರ್ಯಾಂಡ್ ಗಳ ಬೆಲೆ ಏರಿಕೆಗೆ ಕಾರಣವಾಗುತ್ತದೆ. ಮುಂಬರುವ ತಿಂಗಳಲ್ಲಿ, ಟಿವಿ ಬೆಲೆ2,000 ರೂಪಾಯಿಗಳಿಂದ 3,000 ರೂಪಾಯಿಗಳಿಗೆ ಏರಿಕೆಯಾಗಬಹುದು.

ಎಸಿ ತಯಾರಿಸುವ ಕಂಪನಿಗಳು ದರವನ್ನು ಶೇ.4-6ರಷ್ಟು ಹೆಚ್ಚಿಸಲು ಚಿಂತನೆ ನಡೆಸಿದೆ. ಹೀಗಾಗಿ, ಪ್ರತಿ ಯೂನಿಟ್ ಎಸಿ ಬೆಲೆ 1500 ರಿಂದ 2000 ರೂ.ವರೆಗೆ ಏರಿಕೆಯಾಗಬಹುದು. ತಾಮ್ರದ ಬೆಲೆ ದಾಖಲೆಯ ಏರಿಕೆ ಕಂಡಿದೆ, ಇದಕ್ಕಾಗಿ ಗ್ರಾಹಕ ವಸ್ತುಗಳಾದ ಎಸಿ, ಫ್ರಿಜ್, ಕೂಲರ್, ಫ್ಯಾನ್ ಗಳ ಉತ್ಪಾದನಾ ವೆಚ್ಚ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ದಿನಗಳಲ್ಲಿ ಅವುಗಳ ಬೆಲೆಮತ್ತಷ್ಟು ಏರಿಕೆಯಾಗಲಿದೆ.


Spread the love

About Laxminews 24x7

Check Also

ಚಾಮುಂಡಿ ಬೆಟ್ಟಕ್ಕೆ ಎಲ್ಲಾ ಧರ್ಮದವರಿಗೂ ಪ್ರವೇಶವಿದೆ: ಡಿಸಿಎಂ

Spread the loveಬೆಂಗಳೂರು : ಚಾಮುಂಡಿ ಬೆಟ್ಟಕ್ಕೆ ಎಲ್ಲ ಧರ್ಮದವರಿಗೂ ಪ್ರವೇಶವಿದೆ. ಎಲ್ಲಾ ಸಮಾಜದವರು ಚಾಮುಂಡಿ ಬೆಟ್ಟಕ್ಕೆ ಹೋಗುತ್ತಾರೆ, ದೇವರ ಬಳಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ