ಬೆಳಗಾವಿ : ರಾಜ್ಯದಲ್ಲಿ ಭಾರೀ ಸದ್ದು ಮಾಡುತ್ತಿರುವ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಯುವತಿ ಕೋರ್ಟ್ ಗೆ ಬಂದು ಹೇಳಿಕೆ ನೀಡುವಂತೆ 24 ನೇ ಎಸಿಎಂಎಂಕೋರ್ಟ್ ಅನುಮತಿ ನೀಡಿದೆ. ಆದರೆ ಯುವತಿ ಕೋರ್ಟ್ ಮುಂದೆ ಹೇಳಿಕೆ ಕೊಡಲು ಬಂದರೂ ಪರಿಗಣಿಸಬಾರದು ಎಂದು ಸಿಡಿ ಯುವತಿ ಪೋಷಕರು ಮನವಿ ಮಾಡಿಕೊಂಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಯುವತಿ ಪೋಷಕರು, ಸಿಡಿ ಕಿಂಗ್ ಪಿನ್ ನಮ್ಮ ಮಗಳ ತಲೆ ಕೆಡಿಸಿದ್ದಾರೆ. ಹೀಗಾಗಿ ನಮ್ಮ ಮಗಳು ಕೋರ್ಟ್ ಮುಂದೆ ಹೇಳಿಕೆ ಕೊಡಲು ಬಂದರೂ ಪರಿಗಣಿಸಬಾರದು. ಆಕೆಗೆ ತಲೆ ಕೆಡಿಸಿದ್ದಾರೆ. ಸಿಡಿ ಕಿಂಗ್ ಪಿನ್ ನಮ್ಮ ಮಗಳ ತಲೆ ಕೆಡಿಸಿದ್ದಾರೆ. ಇದರಿಂದ ಆಕೆಯನ್ನು ನಮ್ಮ ಮನೆಗೆ ಕಳುಹಿಸಿ ಆಮೇಲೆ ಹೇಳಿಕೆ ಪಡೆಯಬೇಕು ಎಂದು ಯುವತಿ ಪೋಷಕರು ಒತ್ತಾಯಿಸಿದ್ದಾರೆ.
Laxmi News 24×7