Breaking News

ರಾಬರ್ಟ್ ಸಕ್ಸಸ್: ಚಂದು ಗೌಡ ಮನೆಗೆ ಬಂತು ದುಬಾರಿ ಕಾರು

Spread the love

ಕಿರುತೆರೆ ಹಾಗೂ ಸಿನಿಮಾಗಳಲ್ಲಿ ಮಿಂಚುತ್ತಿರುವ ನಟ ಚಂದು ಗೌಡ ತಮ್ಮ ಮನೆಗೆ ಹೊಸ ಅತಿಥಿಯನ್ನು ಬರಮಾಡಿಕೊಂಡಿದ್ದಾರೆ. ಆಡಿ ಕ್ಯೂ 7 ಕಾರನ್ನು ಖರೀದಿಸಿದ್ದು, ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿದ್ದಾರೆ.

”ಬೋರಿಂಗ್ ಕಾರುಗಳನ್ನು ಓಡಿಸಲು ಜೀವನ ಬಹಳ ಚಿಕ್ಕದು” ಎಂದು ಪೋಸ್ಟ್ ಹಾಕಿಕೊಂಡಿರುವ ಚಂದು ಗೌಡ, ”ಮನೆಗೆ ದೊಡ್ಡ ಕ್ವಾಟ್ರೊಗೆ ಸ್ವಾಗತ” ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಚಂದು ಗೌಡ ಅವರು ಹೊಸ ಕಾರು ಖರೀದಿಸಿರುವುದಕ್ಕೆ ಅಭಿಮಾನಿಗಳು ಶುಭಾಶಯ ತಿಳಿಸಿದ್ದಾರೆ. ಅಂದ್ಹಾಗೆ, ಆಡಿ ಕ್ಯೂ 7 ಕಾರಿನ ಆರಂಭಿಕ ಬೆಲೆ 69.27 ಲಕ್ಷದಿಂದ 81.18 ಲಕ್ಷದವರೆಗೂ ಇದೆ.

ಚಂದ್ರು ಗೌಡ ಇತ್ತೀಚಿಗಷ್ಟೆ ಬಿಡುಗಡೆಯಾದ ದರ್ಶನ್ ನಟನೆಯ ರಾಬರ್ಟ್ ಚಿತ್ರದಲ್ಲಿ ನಟಿಸಿದ್ದರು. ರಾಬರ್ಟ್ ಸಿನಿಮಾ ಮಾರ್ಚ್ 11 ರಂದು ತೆರೆಕಂಡು ಯಶಸ್ವಿ ಪ್ರದರ್ಶನ ಕಂಡಿದೆ. ಈ ಚಿತ್ರದಲ್ಲಿ ಚಂದು ಗೌಡ ವಿಲನ್ ಆಗಿ ಅಭಿನಯಿಸಿದ್ದಾರೆ.

2018ರಲ್ಲಿ ರಿಲೀಸ್ ಆದ ‘ಎಟಿಎಂ’ (ಅಟೆಮ್ಟ್ ಟು ಮರ್ಡರ್) ಚಿತ್ರದ ಮೂಲಕ ಸ್ಯಾಂಡಲ್ ವುಡ್ ಪ್ರವೇಶಿಸಿದರು. ಕಳೆದ ವರ್ಷ ತೆರೆಕಂಡ ‘ಕುಷ್ಕ’ ಚಿತ್ರದಲ್ಲೂ ಚಂದು ಬಿ ಗೌಡ ಅಭಿನಯಿಸಿದ್ದಾರೆ. ಈಗ ರಾಬರ್ಟ್ ಸಿನಿಮಾದಲ್ಲಿ ಎಂಎಲ್‌ಎ ಮಗನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.


Spread the love

About Laxminews 24x7

Check Also

ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ

Spread the love ಸೆಟ್ಟೇರಿತು ಮನೋರಂಜನ್ ರವಿಚಂದ್ರನ್ ಐದನೇ ಸಿನಿಮಾ..ಹೊಸ ನಿರ್ದೇಶಕರ ಜೊತೆ ಕೈ ಜೋಡಿಸಿದ ಕ್ರೇಜಿಸ್ಟಾರ್ ಪುತ್ರ ಲಕ್ಷ್ಮಿ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ