Breaking News

ನಾಳೆ ಯುವತಿ ನ್ಯಾಯಾಲಯದ ಮುಂದೆ ಹಾಜರಾಗುತ್ತಾಳೆ -ವಕೀಲ ಜಗದೀಶ್?

Spread the love

ಬೆಂಗಳೂರು: ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಸಿಡಿ ಸ್ಫೋಟ ಕೇಸ್​ಗೆ ಸಂಬಂಧಿಸಿ ನಾವು ಅಂದುಕೊಂಡಂತಾದ್ರೆ ನಾಳೆ ಯುವತಿ ನ್ಯಾಯಾಲಯದ ಮುಂದೆ ಹಾಜರಾಗುತ್ತಾಳೆ. ಸಿಡಿ ಲೇಡಿ ಪೋಷಕರು ತಮ್ಮ ಮಗಳ ಪರವಾಗಿ ನಿಲ್ಲಬೇಕು. ಮಗಳಿಗೆ ಅನ್ಯಾಯವಾಗಿದೆ ಹೀಗಾಗಿ ಆಕೆ ಪರವಾಗಿ ನಿಲ್ಲಬೇಕು ಎಂದು ಫೇಸ್​ಬುಕ್​ನಲ್ಲಿ ಸಂತ್ರಸ್ತೆ ಪರ ದೂರುದಾರ ವಕೀಲ ಜಗದೀಶ್ ಹೇಳಿದ್ರು.

ಈ ಪ್ರಕರಣ ದಾಖಲಾದ ನಂತರ ನಿನ್ನೆ ಪೋಷಕರಿಗೆ ಸೆಕ್ಯೂರಿಟಿ ಕೊಡಿ ಅಂದ್ರೆ ಯಾರನ್ನೂ ಬೇಟಿ ಮಾಡದೇ ಎಸ್​ಐಟಿ ಪೊಲೀಸರು ವಾಪಸ್ ಕಳಿಸಿದ್ದಾರೆ. ಅತ್ಯಾಚಾರ ಪ್ರಕರಣದಲ್ಲಿ ನ್ಯಾಯಯುತವಾದ ತನಿಖೆ ಆಗಿಲ್ಲ. ಪೊಲೀಸರು ರಾಜಕಾರಣಿಗಳಿಗೆ ತಮ್ಮ ತಲೆ ಬಗ್ಗಿಸಿದ್ದಾರೆ ಅನಿಸ್ತಿದೆ. ಅತ್ಯಾಚಾರದ ಪ್ರಕರಣ ಹಾಗೂ ಸುಲಿಗೆ ಕೇಸ್ ಎಫ್​ಐಆರ್ ಇದೆ. ಎರಡು ಎಫ್​ಐಆರ್ ಒಂದೇ ಇನ್ವೆಸ್ಟಿಗೇಶನ್ ಏಜನ್ಸಿ ಮಾಡಿದಾಗ ಎಲ್ಲೋ ಒಂದು ಕಡೆ ತಾರತಮ್ಯ ಆಗಬಹುದು.

ಸ್ಟೇಟ್ ಮೆಂಟ್ ರೆಕಾರ್ಡ್ ಮಾಡಿ ತದನಂತರ ಪೊಲೀಸರಿಗೆ ಪ್ರೊಡ್ಯೂಸ್ ಮಾಡೋ ಪ್ಲಾನ್ ಮಾಡ್ತಿದ್ದೀವಿ. ಶನಿವಾರ, ಭಾನುವಾರ ಕೋರ್ಟ್ ರಜೆ ಇದೆ. ಸೋಮವಾರ ನಾಳೆ ಕೋರ್ಟಿನ ಮುಂದೆ ಹಾಜರಾಗೋ ಸಾಧ್ಯತೆ ಹೆಚ್ಚಾಗಿದೆ. ಯುವತಿಯೇ ವಿಡಿಯೋದಲ್ಲಿ ಹೇಳೋ ಪ್ರಕಾರ ಪೋಷಕರ ಮೇಲೆ ಪ್ರಭಾವಿ ವ್ಯಕ್ತಿ ಒತ್ತಡ ಹೇರಿ ಸ್ಟೇಟ್ ಮೆಂಟ್ ಕೊಡಿಸಿರೋ ಸಾಧ್ಯತೆಯೂ ತುಂಬಾ ಇದೆ. ಒಂದು ವೇಳೆ ಇದು ನಿಜವಾದ್ರೂ ಈ ಪ್ರಕರಣದಲ್ಲಿ ಹೆಣ್ಣು ಮಗಳ ಹೇಳಿಕೆ ತುಂಬಾ ಇಂಪಾರ್ಟೆಂಟ್ ಆಗುತ್ತೆ.

ನೊಂದಿರೋಳು ಹೆಣ್ಣು ಮಗಳು ಆಕೆ ಸಹಾಯ ಬೇಡ್ತಿರೋದು ಸಮಾಜಕ್ಕೆ. ತಂದೆ ತಾಯಿ ಸಂತ್ರಸ್ತೆ ಮಗಳ ಪರವಾಗಿ ನಿಲ್ಲಬೇಕು. ಜಾತಿ ಬಣ್ಣ, ರಾಜಕೀಯ ಬಣ್ಣ ಆಗ್ತಿದೆ ಆದಷ್ಟು ಬೇಗ ನ್ಯಾಯಾಲಯದ ಮುಂದೆ ಹಾಜರುಪಡಿಸೋದು ತುಂಬಾ ಇಂಪಾರ್ಟೆಂಟ್ ಆಗಿದೆ. ನಾಳೆ ಆಕೆ‌ ನ್ಯಾಯಾಲಯದ ಮುಂದೆ ಹಾಜರಾಗುವ ಎಲ್ಲ ಸಾಧ್ಯತೆಗಳಿವೆ ಎಂದು ವಕೀಲ ಜಗದೀಶ್ ತಿಳಿಸಿದ್ದಾರೆ.


Spread the love

About Laxminews 24x7

Check Also

ಪತ್ರ ಬರೆದು ಕ್ಷಮೆ ಸಿದ್ದರಾಮಯ್ಯನವರ ಕ್ಷಮೆ ಕೇಳಿದ ಅರವಿಂದ್ ಬೆಲ್ಲದ್

Spread the love ಬೆಂಗಳೂರು,ಸೆ.3- ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ವಾಗ್ದಾಳಿ ನಡೆಸಿದ್ದ ವಿರೋಧ ಪಕ್ಷದ ಉಪ ನಾಯಕ ಅರವಿಂದ್ ಬೆಲ್ಲದ್ ಈಗ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ