Breaking News

; ಕಲುಷಿತ ಗಾಳಿ ಶುದ್ಧೀಕರಿಸಲಿದೆ ಈ ಯಂತ್ರ

Spread the love

ಬೆಂಗಳೂರು, ಮಾರ್ಚ್ 28: ಮಲಿನಗಾಳಿಯನ್ನು ಶುದ್ಧೀಕರಿಸಲು ಯಂತ್ರವನ್ನು ಅಭಿವೃದ್ಧಿಪಡಿಸಲಾಗಿದೆ. ಬೆಂಗಳೂರು ನಗರದ ಹಡ್ಸನ್ ವೃತ್ತದ ಬಳಿ ಇದನ್ನು ಪ್ರಾಯೋಗಿಕವಾಗಿ ಅಳವಡಿಕೆ ಮಾಡಲಾಗಿದೆ.

ನೂತನ್ ಲ್ಯಾಬ್ಸ್ ಕರ್ನಾಟಕ ಎಂಬ ಸ್ಟಾರ್ಟ್‌ ಅಪ್ ಕಂಪನಿ ಹೊಂಜು ಗೋಪುರ (Smog tower) ಅಭಿವೃದ್ಧಿಪಡಿಸಿದೆ. ಭಾರತೀಯ ವಿಜ್ಞಾನ ಸಂಸ್ಥೆಯು ಇದಕ್ಕೆ ಸಹಕಾರ ನೀಡಿದೆ. ವಿದೇಶದಿಂದ ಈಗಾಗಲೇ ಯಂತ್ರಕ್ಕೆ ಬೇಡಿಕೆಯೂ ಬರುತ್ತಿದೆ.

ಗೋಪುರ ಯಂತ್ರವು 15 ಅಡಿ ಎತ್ತರ, 6 ಅಡಿ ಸುತ್ತಳತೆ ಹೊಂದಿದೆ. ಯಂತ್ರ ಕಾರ್ಯ ನಿರ್ವಹಣೆ ಮಾಡಲು 11 ಕಿಲೋವಾಟ್ ಸಾಮರ್ಥ್ಯದ ವಿದ್ಯುತ್ ಬೇಕಾಗಿದೆ. ದಿನಕ್ಕೆ 10 ಗಂಟೆಗಳ ಕಾಲ ಯಂತ್ರವನ್ನು ಚಾಲನೆಯಲ್ಲಿಡಬೇಕು. ಗಂಟೆಗೆ 11 ಯೂನಿಟ್ ವಿದ್ಯುತ್ ಖರ್ಚಾಗಲಿದೆ.

 

ನೂತನ್ ಲ್ಯಾಬ್ಸ್ ಕರ್ನಾಟಕ ಸಿಇಓ ಎಚ್. ಎಸ್. ನೂತನ್ ಈ ಕುರಿತು ಮಾಹಿತಿ ನೀಡಿದ್ದಾರೆ. “ನ್ಯಾನೊ ತಂತ್ರಜ್ಞಾನದ ಆಧಾರದ ಮೇಲೆ ಈ ಗೋಪುರ ಕೆಲಸ ಮಾಡಲಿದೆ. ವಾತಾವರಣದ ಕಲುಷಿತ ಗಾಳಿಯನ್ನು ಹೀರಿಕೊಂಡು ನ್ಯಾನೊ ಕಣಗಳ ಮೂಲಕ ಹಾಯಿಸುತ್ತದೆ” ಎಂದರು.

“ಈ ಯಂತ್ರವನ್ನು ಸ್ಥಾಪನೆ ಮಾಡಿದ ಬಳಿಕ ಈ ಪ್ರದೇಶದಲ್ಲಿ ವಾಯು ಮಾಲಿನ್ಯ ಪ್ರಮಾಣ ಶೇ 90ರಷ್ಟು ಕಡಿಮೆಯಾಗಿದೆ. ಒಟ್ಟು 11 ಹಂತಗಳಲ್ಲಿ ಇದು ಕಾರ್ಯ ನಿರ್ವಹಣೆ ಮಾಡಲಿದೆ. ಸಣ್ಣ ದೂಳಿನ ಕಣ, ಗಾಳಿಯಲ್ಲಿನ ವಿಷಯುಕ್ತ ಅನಿಲ ಸೇರಿದಂತೆ ಅಪಾಯಕಾರಿ ಅಂಶಗಳನ್ನು ಹೀರಿಕೊಂಡು ಶುದ್ಧಗಾಳಿಯನ್ನು ನೀಡಲಿದೆ” ಎಂದು ಹೇಳಿದ್ದಾರೆ.

“ಈ ಯಂತ್ರದ ನಿರ್ವಹಣೆಗೆ ಬಿಬಿಎಂಪಿ ವಿದ್ಯುತ್ ನೀಡಬೇಕು. ವಾರಕ್ಕೊಮ್ಮೆ ಯಂತ್ರದಲ್ಲಿ ಸಂಗ್ರಹವಾದ ಕಣಗಳನ್ನು ತೆರವುಮಾಡಬೇಕು. ಬಿಬಿಎಂಪಿ ಈ ಯಂತ್ರವನ್ನು ಖರೀದಿ ಮಾಡಿದರೆ ನಮ್ಮ ಸಂಸ್ಥೆ 5 ವರ್ಷಗಳ ಕಾಲ ನಿರ್ವಹಣೆ ಮಾಡಲಿದೆ” ಎಂದು ಎಚ್. ಎಸ್. ನೂತನ್ ತಿಳಿಸಿದರು.

ಈ ಯಂತ್ರ ಹೀರಿಕೊಂಡ ಕಣಗಳನ್ನು ಕೃಷಿಯಲ್ಲಿ ಮಣ್ಣಿಗೆ ಪೋಷಕಾಂಶಗಳಾಗಿ ಬಳಕೆ ಮಾಡಬಹುದಾಗಿದೆ. ಇದನ್ನು ಒಣಗಿಸಿ ಹೆಂಚು ತಯಾರಿಕೆಯಲ್ಲಿಯೂ ಬಳಕೆ ಮಾಡಬಹುದಾಗಿದೆ. ಈ ಯಂತ್ರದ ದರ ಸುಮಾರು 60 ಲಕ್ಷ ರೂ.ಗಳು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ