Breaking News

ನಾನು ಗಂಡಸು, ಆ ಮಹಾನಾಯಕ ‘ಗಾಂ…’; : ರಮೇಶ್ ಜಾರಕಿಹೊಳಿ

Spread the love

ಬೆಂಗಳೂರು: ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧ ದಿನಕ್ಕೊಂದು ಟ್ವಿಸ್ಟ್ ಪಡೆಯುತ್ತಿದ್ದು ಇಂದು ಸಂತ್ರಸ್ತ ಯುವತಿಯ ಪೋಷಕರು ಮಾಧ್ಯಮದ ಮುಂದೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ನೇರ ಆರೋಪ ಮಾಡಿದ ಬೆನ್ನಲ್ಲೇ ಶಾಸಕ ರಮೇಶ್ ಜಾರಕಿಹೊಳಿ ಡಿಕೆಶಿ ವಿರುದ್ಧ ಕೆಂಡಕಾರಿದ್ದಾರೆ.

ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ ಅವರು ಸಿಡಿ ಪ್ರಕರಣದ ಸಂಬಂಧ ಷಡ್ಯಂತ್ರ ನಡೆಸಿರುವ ಆ ಮಹಾನಾಯಕ ಹೆಸರನ್ನು ಯುವತಿಯ ಪೋಷಕರು ನೇರವಾಗಿ ಹೇಳಿದ್ದಾರೆ. ಇನ್ನು ನಾನು ಹೇಳುವುದು ಏನು ಇಲ್ಲ. ಯಾರು ತಪ್ಪು ಮಾಡಿದ್ದಾರೋ ಅವರಿಗೆ ಶಿಕ್ಷೆಯಾಗಲಿ ಎಂದು ಹೇಳಿದರು.

ನನ್ನ ವಿರುದ್ಧ ಸಿಡಿ ಷಡ್ಯಂತ್ರ ನಡೆಸಿರುವ ಡಿಕೆ ಶಿವಕುಮಾರ್ ಗಾಂಡು. ನಾನು ಗಂಡಸು. ರಾಜಕೀಯಕ್ಕೆ ಡಿಕೆಶಿ ನಾಲಯಕ್ಕು ಎಂದು ಗಂಭೀರ ಆರೋಪ ಮಾಡಿದ್ದಾರೆ. ನನ್ನ ಬಳಿ 11 ಸಾಕ್ಷ್ಯಗಳಿವೆ. ನಾನು ಅವುಗಳನ್ನು ಎಸ್‌ಐಟಿಗೆ ನೀಡುತ್ತೇನೆ. ಡಿಕೆಶಿ ವಿರುದ್ಧ ಅಟ್ರಾಸಿಟಿ ಪ್ರಕರಣ ದಾಖಲಿಸಬೇಕು ಎಂದು ಹೇಳಿದ್ದಾರೆ.

ನಾನು ಚುನಾವಣೆಗೆ ನಿಲ್ಲುವುದಿಲ್ಲ. ಗೋಕಾಕ್ ನಲ್ಲಿ ನನ್ನ ತಮ್ಮನನ್ನು ನಿಲ್ಲಿಸಿ ಆತನನ್ನು ಗೆಲ್ಲಿಸಲು ತನು, ಮನ, ಧನ ವಿಯೋಗಿಸುತ್ತೇನೆ. ಇನ್ನು ಡಿಕೆ ಶಿವಕುಮಾರ್ ಕನಕಪುರದಲ್ಲಿ ಸೋಲಿಸುತ್ತೇನೆ ಎಂದು ಸವಾಲು ಹಾಕಿದ್ದಾರೆ.


Spread the love

About Laxminews 24x7

Check Also

ಸಿಲಿಂಡರ್ ದರ ಹೆಚ್ಚಳಕ್ಕೆ ಕಾಂಗ್ರೆಸ್ ಆಕ್ರೋಶ – ಖಾಲಿ ಸಿಲಿಂಡರ್ ಹಿಡಿದು ಪ್ರತಿಭಟನೆ

Spread the loveಬೆಂಗಳೂರು: ಸಿಲಿಂಡರ್ ದರ ಹೆಚ್ಚಳಕ್ಕೆ  ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದ್ದು, ಕೆಪಿಸಿಸಿ ಕಚೇರಿ ಮುಂದೆ ಕೇಂದ್ರ ಸರ್ಕಾರದ ವಿರುದ್ಧ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ