Breaking News

ಪ್ರಿಯತಮೆಗೆ ಪ್ರೇಮ ನಿವೇದನೆ ಮಾಡಲು 2.5 ಕಿ.ಮೀ ರಸ್ತೆ ಪೂರ್ತಿ ‘I Love You, I Miss You’ ಎಂದು ಬರೆದ ಪಾಗಲ್ ಪ್ರೇಮಿ

Spread the love

ಕೊಲ್ಹಾಪುರ: ಸಣ್ಣ ಪುಟ್ಟ ವಿಚಾರಗಳಿಂದ ಸಂಗಾತಿಯನ್ನು ಸೆಳೆಯುವುದು ಅಥವಾ ಪ್ರೀತಿಯನ್ನು ವಿಶೇಷವಾಗಿ ಹೇಳುವ ಮೂಲಕ ಸಂಗಾತಿಯ ಮುಖದಲ್ಲಿ ಮಂದಹಾಸವನ್ನು ತರಿಸಲು ಪರದಾಡುವ ಪ್ರೇಮಿಗಳನ್ನು ನಾವು ನೋಡಿದ್ದೇವೆ. ಆದರೆ ಮಹಾರಾಷ್ಟ್ರದ ಕೊಲ್ಲಾಪುರದ ವ್ಯಕ್ತಿಯೊಬ್ಬ ತನ್ನ ಪ್ರೇಯಸಿಯ ಬಗ್ಗೆ ತನ್ನ ಭಾವನೆಗಳನ್ನು ವ್ಯಕ್ತಪಡಿಸಲು ಹೋಗಿ ವ್ಯಕ್ತಿಯೊಬ್ಬ ಸಿನಿಮಾದಲ್ಲಿ ಮಾಡುವಂತೆ ಮಾಡಿದ್ದಾನೆ.

ಶಿರೋಲ್ ತಾಲೂಕಿನ ಧರಂಗುಟಿ ಗ್ರಾಮದ ಅಪರಿಚಿತ ವ್ಯಕ್ತಿಯೊಬ್ಬ ಗ್ರಾಮದ ಮುಖ್ಯ ರಸ್ತೆಯಲ್ಲಿ 2.5 ಕಿ.ಮೀ.ದೂರದವರೆಗೆ ಪೈಂಟ್ ನಿಂದ ‘ಐ ಲವ್ ಯೂ’ ಮತ್ತು ‘ಐ ಮಿಸ್ ಯು’ ಎಂದು ಬರೆದಿದ್ದಾನೆ. ಬೀದಿಯಲ್ಲಿ ಚಿತ್ರಿಸಿದ ಸಂದೇಶಗಳಲ್ಲಿ ಒಂದು ಹೀಗಿದೆ: ‘ನಾನು ನಿನ್ನನ್ನು ಮಿಸ್ ಮಾಡಿಕೊಳ್ಳುತ್ತೇನೆ. ಜಿಂದಗಿ ಕೆ ಸಾತ್, ಜಿಂದಗಿ ಕೆ ಬಾದ್ ಭಿ ‘ ಎಂದು ರಸ್ತೆಯಲ್ಲಿ ಬರೆದಿದ್ದಾನೆ.

ಈ ಸಂದೇಶಗಳನ್ನು ಬಿಳಿ ತೈಲಬಣ್ಣದಿಂದ ಬರೆಯಲಾಗಿದೆ. ಜೈಸಿಂಗ್ ಪುರದಿಂದ ಧರಂಗೂಟಿ ಮಾರ್ಗದಲ್ಲಿ ಸುಮಾರು 2.5 ಕಿ.ಮೀ. ಗ್ರಾಮದ ಮುಖ್ಯ ರಸ್ತೆಯಲ್ಲಿ ಈ ದೃಶ್ಯ ಕಂಡು ಬಂದ ಕೂಡಲೇ ಎಚ್ಚೆತ್ತ ಗ್ರಾಮಸ್ಥರು ಈ ಬಗ್ಗೆ ವರದಿ ಮಾಡಿದ್ದಾರೆ. ಈ ಘಟನೆ ಮಂಗಳವಾರ ನಡೆದಿದ್ದು, ಇದರ ಹಿಂದೆ ಯಾರಿದ್ದಾರೆ ಎಂಬ ಕುತೂಹಲ ಗ್ರಾಮಸ್ಥರಲ್ಲಿ ಮನೆ ಮಾಡಿದೆ. ಈ ‘ದೀವಾನಾ ಆಶಿಕ್’ ಇನ್ನೂ ಪತ್ತೆಯಾಗಿಲ್ಲವಾದರೂ, ಈ ಕುಕೃತ್ಯದ ಹಿಂದೆ ಗ್ರಾಮದ ಕೆಲವು ಯುವಕರು ಇರಬಹುದು ಎಂದು ಸ್ಥಳೀಯ ಪೊಲೀಸರು ಶಂಕಿಸಿದ್ದಾರೆ.

ತನ್ನ ಪ್ರೇಯಸಿ ಈ ರೀತಿಯಾಗಿ ಬರೆದ ಘಟನೆ ನಮಗೆ ತಿಳಿದಿರಲಿಲ್ಲ. ಆದರೆ ಈ ಘಟನೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಸದ್ದು ಮಾಡಿತ್ತು. ವಿಡಿಯೋ ವೈರಲ್ ಆದ ನಂತರ ಸ್ಥಳೀಯ ಆಡಳಿತವು ಸಿಬ್ಬಂದಿಗಳನ್ನು ಕಳುಹಿಸಿ, ಸಂದೇಶಗಳ ಬಗ್ಗೆ ತನಿಖೆ ನಡೆಸಲು ಕಳುಹಿಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.


Spread the love

About Laxminews 24x7

Check Also

ಪರಪ್ಪನ ಅಗ್ರಹಾರ ಜೈಲೋ? ರೆಸಾರ್ಟೋ?

Spread the loveಬೆಂಗಳೂರು, ಅಕ್ಟೋಬರ್​ 09: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ರೌಡಿ ಶೀಟರ್​ ಗುಬ್ಬಚ್ಚಿ ಸೀನಾ ಹುಟ್ಟುಹಬ್ಬ ಆಚರಣೆಯ ವಿಚಾರ ವ್ಯಾಪಕ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ