ಬೆಂಗಳೂರು : ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾಗಿರುವ ರಾಸಲೀಲೆ ಸಿಡಿ ವಿಷಯಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು ಎಸ್ ಐಟಿ ತೀವ್ರಗೊಳಿಸಿದೆ.
ಎಸ್ ಐಟಿಗೆ ಸಿಕ್ಕ ವಿಡಿಯೋ ತುಣುಕೊಂದರಲ್ಲಿ ಯುವತಿ, ಕೆಲಸ ಸಕ್ಸಸ್ ಆಗಿದೆ ಬಾ ಎಂದು ಶಂಕಿತ ಆರೋಪಿಯಾಗಿರುವ ಶ್ರವಣ್ ಗೆ ಹೇಳಿದ್ದಾರೆ. ಸದ್ಯ ಈ ವಿಡಿಯೋ ಎಸ್ ಐಟಿಗೆ ಲಭ್ಯವಾಗಿದೆ. ನಗರದ ಪ್ರಮುಖ ಪ್ರದೇಶದಲ್ಲಿರುವ ಅಪಾರ್ಟ್ ಮೆಂಟ್ ಕಟ್ಟಡದಲ್ಲಿ ಯುವತಿ ಇದ್ದಳು. ಅಲ್ಲಿಂದ ಸ್ವಲ್ಪ ದೂರದಲ್ಲಿ ಶ್ರವಣ್ ಇದ್ದ. ಆಗ ಫ್ಲ್ಯಾಟ್ ನಿಂದ ಹೊರ ಬರುತ್ತಿರುವ ಯುವತಿ, ಶ್ರವಣ್ ಗೆ ಕರೆ ಮಾಡಿ ಮಾತನಾಡಿದ್ದಾಳೆ. ಇದು ಸ್ಪೈ ಕ್ಯಾಮೆರಾದಲ್ಲಿ ರೆಕಾರ್ಡ್ ಆಗಿದೆ. ಸದ್ಯ ಈ ವಿಡಿಯೋ ಎಸ್ ಐಟಿಗೆ ಲಭ್ಯವಾಗಿದೆ.
ಈ ಮೂಲಕ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರನ್ನು ಹನಿಟ್ರ್ಯಾಪ್ ಮಾಡಲಾಗಿದೆಯೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ. ಸಿಡಿ ಗ್ಯಾಂಗ್ ಸದಸ್ಯರು ಸುಮಾರು ರೂ. 1 ಲಕ್ಷಕ್ಕೂ ಅಧಿಕವಾಗಿ ಖರ್ಚು ಮಾಡಿ ಎಸ್ ಪಿ ರಸ್ತೆಯಲ್ಲಿ ಸ್ಪೈ ಕ್ಯಾಮೆರಾ ಸಿಸ್ಟಮ್ ಖರೀದಿಸಿದ್ದರು. ಅವುಗಳ ಬಳಕೆ ಕುರಿತು ಲೇಡಿಗೆ ತರಬೇತಿ ನೀಡಿದ್ದರು ಎನ್ನಲಾಗಿದೆ.
ಹೀಗಾಗಿ ಸ್ಪೈ ಕ್ಯಾಮೆರಾ, ವ್ಯಾನಿಟಿ ಬ್ಯಾಗ್ ನಲ್ಲಿಟ್ಟುಕೊಂಡು ಫ್ಲ್ಯಾಟ್ ನ ಒಳಗೆ ಯುವತಿ ಪ್ರವೇಶಿಸಿದ್ದಾಳೆ. ಆ ನಂತರ ಹೊರ ಬಂದಿದ್ದಾಳೆ. ಮಹಡಿ ಇಳಿಯುವ ಸಂದರ್ಭದಲ್ಲಿ ಶ್ರವಣ್ ಗೆ ಕರೆ ಮಾಡಿ ಕೆಲಸ ಸಕ್ಸಸ್ ಆಗಿದೆ ಬಾ ಎಂದಿದ್ದಾಳೆ. ಶ್ರವಣ್ ಮತ್ತು ಯುವತಿ ಭೇಟಿ ಮಾಡಿದ ಬಳಿಕ ಸ್ಪೈ ಕ್ಯಾಮೆರಾದಲ್ಲಿ ವಿಡಿಯೋ ರೆಕಾರ್ಡಿಂಗ್ ಆಫ್ ಆಗಿದೆ. ಸದ್ಯ ಈ ವಿಡಿಯೋ ಎಸ್ ಐಟಿ ತಂಡಕ್ಕೆ ಲಭ್ಯವಾಗಿದೆ.