ರಮೇಶ್ ಜಾರಕಿಹೊಳಿ CD ವಿಚಾರದಲ್ಲಿ ವಿಧಾನಸಭೆಯಲ್ಲಿ ಕಾಂಗ್ರೆಸ್ ನಡೆಸುತ್ತಿರೋ ಧರಣಿ, ಆರೋಪಗಳ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ‘ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್, ಹೆಚ್.ಡಿ. ಕುಮಾರಸ್ವಾಮಿ.. ಇವರೆಲ್ಲರೂ ಸತ್ಯ ಹರಿಶ್ಚಂದ್ರರು. ಎಲ್ಲರೂ ಏಕಪತ್ನಿ ವ್ರತಸ್ಥರು. ಇವರೆಲ್ಲರೂ ಸಮಾಜಕ್ಕೆ ಮಾದರಿಯಾಗಿದ್ದಾರೆ. ಹೀಗಾಗಿ ನಾನೊಂದು ಚಾಲೆಂಜ್ ಹಾಕ್ತೀನಿ. ನಾನೂ ಸೇರಿದಂತೆ 225 ಶಾಸಕರ ಮೇಲೆ ತನಿಖೆ ನಡೆಯಲಿ. ಯಾರಿಗೆ ಅನೈತಿಕ ಸಂಬಂಧ ಇದೆ, ಯಾರ ಚರಿತ್ರೆ ಏನು ಅಂತ ಗೊತ್ತಾಗುತ್ತೆ. ಮುಖ್ಯಮಂತ್ರಿ ಆಗಿದ್ದಾಗ ಯಾರ್ ಯಾರ್ ಏನ್ ಮಾಡಿದ್ದಾರೆ ಗೊತ್ತಾಗುತ್ತೆ. ಯಾರ ಬಂಡವಾಳ ಏನು ಅನ್ನೋದು ರಾಜ್ಯದ ಜನರಿಗೆ ಗೊತ್ತಾಗಲಿ ನೋಡೋಣ’ ಅಂತ ಹೇಳಿದ್ದಾರೆ.
