ಬೆಂಗಳೂರು, ಮಾ.23- ಸ್ಕೂಟರ್‍ನಲ್ಲಿ ಬಂದು ಬೆದರಿಸಿ ಹಣ-ಆಭರಣ ಸುಲಿಗೆ ಮಾಡಿದ್ದ ಮೂವರನ್ನು ಚಂದ್ರಾ ಲೇಔಟ್ ಪೊಲೀಸರು ಬಂಧಿಸಿ 3 ಲಕ್ಷ ರೂ. ಬೆಲೆಬಾಳುವ 102 ಗ್ರಾಂ ಚಿನ್ನದ ಆಭರಣ ಹಾಗೂ ಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ವಶಪಡಿಸಿಕೊಂಡಿದ್ದಾರೆ. ಕೆಜಿ ಹಳ್ಳಿ, ಪಿಳ್ಳಣ್ಣ ಗಾರ್ಡನ್ ನಿವಾಸಿ ಜಾಕೀರ್ ಹುಸೇನ್ (30), ವೆಂಕಟೇಶಪುರಂನ ಶಾಬಾಜ್‍ಖಾನ್ (25), ಫಾಜಿಲ್ (23) ಬಂಧಿತರು.
ಭೈರವೇಶ್ವರನಗರ 9ನೆ ಕ್ರಾಸ್‍ನಲ್ಲಿ ಸಾರ್ವಜನಿಕರೊಬ್ಬರು ಮಾ.13ರಂದು ಹೋಗುತ್ತಿದ್ದಾಗ ಮೂವರು ಸುಲಿಗೆಕೋರರು ಸ್ಕೂಟರ್‍ನಲ್ಲಿ ಬಂದು ಅವರಿಗೆ ಪ್ರಾಣಭಯ ಉಂಟುಮಾಡಿ ಅವರ ಬಳಿ ಇದ್ದ 3 ಲಕ್ಷ ರೂ. ಬೆಲೆಬಾಳುವ ಆಭರಣಗಳು ಹಾಗೂ 3 ಸಾವಿರ ಹಣವನ್ನು ಬಲವಂತವಾಗಿ ಪಡೆದು ಪರಾರಿಯಾಗಿದ್ದರು.
ಈ ಬಗ್ಗೆ ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇನ್‍ಸ್ಪೆಕ್ಟರ್ ಬ್ರಿಜೇಶ್ ಮ್ಯಾಥ್ಯೂ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಮೂವರನ್ನು ಬಂಧಿಸಿ ಆಭರಣ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.