ಹುಬ್ಬಳ್ಳಿ : ದೇಶದಾದ್ಯಂತ ಭಾರೀ ಸದ್ದು ಮಾಡುತ್ತಿರುವ ಈ ಡ್ರಗ್ಸ್ ದಂಧೆಯಲ್ಲಿ ತೊಡಗಿದ್ದ ಓರ್ವ ಯುವಕ, ಓರ್ವ ಯುವತಿ ಪೊಲೀಸರ ಬಲೆಗೆ ಬಿದ್ದ ಘಟನೆ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ನಡೆದಿದೆ.
ನಗರದಲ್ಲಿ ಕಾರ್ಯಾಚರಣೆ ನಡೆಸಿದ ಸಿಸಿಬಿ ಪೊಲೀಸರು, ಪೆಡ್ಲರ್ ಸೇರಿ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆಖಚಿತವಾದ ಮಾಹಿತಿ ಮೇರೆಗೆ ದಾಳಿ ನಡೆಸಿದ ಸಿಸಿಬಿ ಪೊಲೀಸರು ಕಾರ್ಯಾಚರಣೆ ಮಾಡಿ ಪೆಡ್ಲರ್ ಸೇರಿದಂತೆ ಇಬ್ಬರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಲ್ಲದೇ ಅಪಾರ ಪ್ರಮಾಣದಲ್ಲಿ ಡ್ರಗ್ಸ್ ನ್ನು ವಶಪಡಿಸಿಕೊಂಡಿದ್ದಾರೆ.
. ಅಜಯರಾಮ್ ವೆಂಕಟೇಶ್ ರಾವ್ ಮತ್ತು ಶಿಮ್ರಾನ್ ಜಿತ್ ಕೌರ್ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದ್ದು, ಗೋಕುಲ್ ರಸ್ತೆಯ ವಿಮಾನ ನಿಲ್ದಾಣ ಬಳಿ ಇಬ್ಬರನ್ನು ಬಂಧಿಸಲಾಗಿದೆ ಅಜಯ್ ರಾವ್ ಮುಂಬಯಿಯ ಅಂದೇರಿ ನಿವಾಸಿಯಾಗಿದ್ದು ಪೆಡ್ಲರ್ ಆಗಿದ್ದು, ಇವನಿಂದ ಹುಬ್ಬಳ್ಳಿಯ ಶಿಮ್ರಾನ್ ಜಿತ್ ಕೌರ್ ಎಂಬಾಕೆ ಡ್ರಗ್ಸ್ ಖರೀದಿ ಮಾಡುತ್ತಿದ್ದಳು ಎನ್ನಲಾಗಿದೆ. ಶಿಮ್ರಾನ್ ಜಿತ್ ಕೌರ್ ಹುಬ್ಬಳ್ಳಿಯ ಪ್ರಸಿದ್ದ ಹೊಟೇಲ್ ಉದ್ಯಮಿಯ ಪುತ್ರಿಯಾಗಿದ್ದು ಪೆಡ್ಲರ್ ನಿಂದ ಡ್ರಗ್ಸ್ ತಗೆದುಕೊಳ್ಳುವಾಗ ರೆಡ್ ಹ್ಯಾಂಡ್ ಸಿಕ್ಕಿ ಹಾಕಿಕೊಂಡಿದ್ದಾಳೆ. ಸದ್ಯ. ಇಬ್ಬರನ್ನು ವಶಕ್ಕೆ ಪಡೆದಿರುವ ಸಿಸಿಬಿ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.