Breaking News

ಪೊಲೀಸರಿಂದ ತಪ್ಪಿಸಿಕೊಳ್ಳಲು ಸಿಗ್ನಲ್ ಆಯಪ್ ಬಳಸುತ್ತಿರುವ ಸಿಡಿ ಪ್ರಕರಣದ ಕಿಂಗ್‌ಪಿನ್‌ಗಳು!

Spread the love

ಬೆಂಗಳೂರು: ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರದು ಎನ್ನಲಾದ ಅಶ್ಲೀಲ ಸಿಡಿ ಪ್ರಕರಣ ಬಹಿರಂಗವಾದ ಬಂದ ಬಳಿಕ 20 ದಿನಗಳಿಂದ ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿರುವ ಕಿಂಗ್‌ಪಿನ್‌ಗಳು ಗೌಪ್ಯ ಸಂವಹನಕ್ಕೆ ‘ಸಿಗ್ನಲ್’ ಆಯಪ್ ಮೆಸೆಂಜರ್ ಬಳಸುತ್ತಿದ್ದಾರೆ ಎಂಬ ಸಂಗತಿ ವಿಶೇಷ ತನಿಖಾ ದಳದ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

ಸಿಡಿ ಸ್ಫೋಟದ ಮಾಸ್ಟರ್ ಮೈಂಡ್ ಎನ್ನಲಾದ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತರು ಮತ್ತು ವಿವಾದಿತ ಯುವತಿ ಎಸ್‌ಐಟಿ ಗಾಳಕ್ಕೆ ಸಿಲುಕದಂತೆ ಹೊರ ರಾಜ್ಯಗಳಲ್ಲಿ ಭೂಗತವಾಗಿದ್ದಾರೆ. ಈ ಪ್ರಕರಣದ ಸಂಬಂಧ ಎಸ್‌ಐಟಿ ತನಿಖೆ ಸೇರಿದಂತೆ ಬೆಂಗಳೂರಿನಲ್ಲಿ ನಡೆದಿರುವ ಬೆಳವಣಿಗೆ ಹಾಗೂ ಹೊರ ರಾಜ್ಯಗಳಲ್ಲಿ ಸುರಕ್ಷಿತ ಆಶ್ರಯ ತಾಣಗಳ ಪಡೆಯುವ ಸಲುವಾಗಿ ಮಾತುಕತೆಗೆ ಅವರು ‘ಸಿಗ್ನಲ್’ ಆಯಪ್ ಬಳಸುತ್ತಿದ್ದಾರೆ.

ಮೊಬೈಲ್ ಕರೆಗಳು ಹಾಗೂ ವಾಟ್ಸ್‌ಆಯಪ್ ಬಳಸಿದರೆ ಪೊಲೀಸರಿಗೆ ತಮ್ಮ ಇರುವಿಕೆಯ ಸ್ಥಳದ ಜಾಡು ಸಿಗುತ್ತದೆ ಎಂದು ಎಚ್ಚರಿಕೆವಹಿಸಿರುವ ಸಿಡಿ ಸ್ಫೋಟದ ಗುಂಪು, ತನಿಖಾ ತಂಡಗಳಿಗೆ ಸಿಗ್ನಲ್ ಆಯಪ್ ಬಳಸುವ ಮೂಲಕ ಚಳ್ಳೆ ಹಣ್ಣು ತಿನ್ನಿಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಅಂದಹಾಗೇ ಸಿಗ್ನಲ್ ಆಯಪ್​ 50 ಮಿಲಿಯನ್ ಡೌನ್ಲೋಡ್​ಗಳನ್ನು ಗೂಗಲ್ ಪ್ಲೆ ಸ್ಟೋರ್​ನಲ್ಲಿ ಕಂಡಿದೆ. ಸಂದೇಶಗಳ ಸುರಕ್ಷತೆಗೆ ಮೊದಲ ಪ್ರಾಧಾನ್ಯತೆ ಎಂದು ಈ ಆಯಪ್ ಹೇಳಿಕೊಂಡಿದೆ.


Spread the love

About Laxminews 24x7

Check Also

ಹಾವೇರಿ: ಶರಣ ಚೌಡಯ್ಯ ಐಕ್ಯ ಮಂಟಪಕ್ಕೆ ಜಲದಿಗ್ಬಂಧನ, ತೆಪ್ಪದಲ್ಲಿ ತೆರಳಿ ಭಕ್ತರಿಂದ ಪೂಜೆ

Spread the loveಹಾವೇರಿ: ಸಂತರ, ಶರಣರ ಮತ್ತು ದಾರ್ಶನಿಕರ ಜಿಲ್ಲೆ ಹಾವೇರಿ. ಇಲ್ಲಿ ಸರ್ವಜ್ಞ, ಅಂಬಿಗರ ಚೌಡಯ್ಯ, ಕನಕದಾಸರು, ಶಿಶುನಾಳ ಶರೀಫರು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ