Breaking News

ಸಿಡಿ ಲೀಕ್​ ಆದಾಗಿನಿಂದ ಊರೂರು ಸುತ್ತುತ್ತಿರುವ ಕಿಂಗ್​ಪಿನ್, ಹ್ಯಾಕರ್​, ಯುವತಿ ಸದ್ಯ ರಾಜಸ್ಥಾನದಲ್ಲಿದ್ದಾರೆ ಎನ್ನಲಾಗಿದೆ.?

Spread the love

ಬೆಂಗಳೂರು: ಬಗೆದಷ್ಟೂ ಆಳ ಎಂಬಂತೆ ತನಿಖೆ ಮುಂದುವರಿದಂತೆ ಮಾಜಿ ಸಚಿವ ರಮೇಶ್​ ಜಾರಕಿಹೊಳಿಯದ್ದು ಎನ್ನಲಾದ ಸೆಕ್ಸ್​ ಸಿಡಿ ಕೇಸ್​ನ ಲೀಕಾಸುರರ ಎಕ್ಸ್​ಕ್ಲೂಸಿವ್​ ಮಾಹಿತಿ ಲಭ್ಯವಾಗುತ್ತಲೇ ಇದೆ.

ಸಿಡಿ ಲೀಕ್​ ಆದಾಗಿನಿಂದ ಊರೂರು ಸುತ್ತುತ್ತಿರುವ ಕಿಂಗ್​ಪಿನ್, ಹ್ಯಾಕರ್​, ಯುವತಿ ಸದ್ಯ ರಾಜಸ್ಥಾನದಲ್ಲಿದ್ದಾರೆ ಎನ್ನಲಾಗಿದೆ. ಇನ್ನು ಸಿಡಿ ಬಹಿರಂಗದ ಬಳಿಕ ಸಿಡಿ ಗ್ಯಾಂಗ್ ನಡೆಸಿದ್ದ ತಂತ್ರ ಏನು? ಹ್ಯಾಕರ್ ಶ್ರವಣ್ ಯಾವ ರೀತಿ ಪ್ಲಾನಿಂಗ್ ಮಾಡಿಕೊಂಡಿದ್ದ? ಅನ್ನೋದ್ರ ಕಂಪ್ಲೀಟ್​ ಡಿಟೇಲ್ಸ್ ಇಲ್ಲಿದೆ. 

ಎಸ್‌ಐಟಿ ತನಿಖೆ ವೇಳೆ ಹ್ಯಾಕರ್ ಶ್ರವಣ್​ ಸಂವಹನ ನಡೆಸಲು ಹೊಸ ತಂತ್ರ ಅನುಸರಿಸಿದ್ದರ ಬಗ್ಗೆ ಗೊತ್ತಾಗಿದೆ. ವಾಟ್ಸ್​ಆಯಪ್, ಫೇಸ್​ಬುಕ್ ಬಳಿಕ ಸಿಗ್ನಲ್​ನಲ್ಲಿ ಮಾತುಕತೆ ನಡೆಸಿದ್ದಾರೆ. ಪೊಲೀಸರು ಫೋನ್ ಟ್ರ್ಯಾಪ್ ಮಾಡಬಹುದೆಂಬ ಕಾರಣಕ್ಕೆ ಹ್ಯಾಕರ್​ನಿಂದ ಸಿಡಿ ಗ್ಯಾಂಗ್​ಗೆ ಹೊಸ ಸಂದೇಶ ಬಂದಿತ್ತು. ಅದರಂತೆ ಸಂವಹನ ನಡೆಸಲು ಮಾ.2ರಂದು ಸಾಮಾಜಿಕ ಕಾರ್ಯಕರ್ತ ದಿನೇಶ್​ ಕಲ್ಲಹಳ್ಳಿ, ಶ್ರವಣ್​, ಕಿಂಗ್​ಪಿನ್​ ನರೇಶ್​ಗೌಡ ಅವರು ತಮ್ಮ ಮೊಬೈಲ್​ನಲ್ಲಿ ಸಿಗ್ನಲ್ ಆಯಪ್ ಇನ್​ಸ್ಟಾಲ್ ಮಾಡಿಕೊಂಡಿದ್ದರು.

ನಾರ್ಮಲ್ ಕಾಲ್​ನಲ್ಲಿ ಮಾತನಾಡಿದ್ರೆ ಗೌಪ್ಯ ಬಯಲಾಗುತ್ತೆ ಅನ್ನೋ ಕಾರಣಕ್ಕೆ ಗುಪ್ತವಾಗಿ ಮಾತನಾಡಲು ವಾಟ್ಸ್​ಆಯಪ್​ ಅಥವಾ ಫೇಸ್​ಬುಕ್ ಬಳಸಿದ್ದರು. ಮಾ.2ರಂದು ಸಿಗ್ನಲ್ ಆಯಪ್ ಇನ್​ಸ್ಟಾಲ್ ಮಾಡಿಕೊಂಡು ಮುಂದಿನ ನಡೆ ಕುರಿತು ಚರ್ಚಿಸಿದ್ದಾರೆ. ಸಿಗ್ನಲ್ ಆಯಪ್ ಮೂಲಕವೇ ಸಂದೇಶವನ್ನ ರವಾನೆ ಮಾಡಿಕೊಳ್ಳುತ್ತಿದ್ದರು. ತುರ್ತಾಗಿ ಮಾತನಾಡಬೇಕಿದ್ರೆ ಸಿಗ್ನಲ್ ಆಯಪ್​ನಲ್ಲೇ ಕರೆ ಮಾಡಿ ಮಾಹಿತಿ ಮಿನಿಮಯ ಮಾಡಿಕೊಳ್ಳುತ್ತಿದ್ದರು.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ