Breaking News

: ಜನ ಯಾರನ್ನು ನಂಬಬೇಕೋ? ಯಾವುದನ್ನು ನಂಬಬೇಕೋ ಗೊತ್ತಾಗುತ್ತಿಲ್ಲ……/ಕೊರೋನಾ ಸಾವು ಮುಚ್ಚಿಡಲಾಗುತ್ತಿದ್ಯಾ?

Spread the love

ಬೆಂಗಳೂರು: ಜನ ಯಾರನ್ನು ನಂಬಬೇಕೋ? ಯಾವುದನ್ನು ನಂಬಬೇಕೋ ಗೊತ್ತಾಗುತ್ತಿಲ್ಲ. ಕೊರೊನಾ ಸಂಬಂಧ ವೈದ್ಯಕೀಯ ವಸ್ತು, ಔಷಧಿಗಳ ಖರೀದಿಯಲ್ಲಿ ಭಾರೀ ಗೋಲ್‍ಮಾಲ್ ನಡೆದಿದೆ ಎಂಬ ಆರೋಪ ಕೇಳಿಬಂದಿತ್ತು. ಇದೀಗ ಆರೋಗ್ಯ ಇಲಾಖೆ ನೀಡುವ ಕೊರೋನಾ ಹೆಲ್ತ್ ಬುಲೆಟಿನ್‍ನಲ್ಲಿ ನಿತ್ಯ ನೀಡುವ ಅಂಕಿ ಸಂಖ್ಯೆಯನ್ನೂ ಅನುಮಾನದಿಂದ ನೋಡುವ ಸಂದರ್ಭ ಎದುರಾಗಿದೆ. ಯಾಕೆಂದರೆ ಕೊರೋನಾ ಸಾವು ನೋವುಗಳ ಲೆಕ್ಕವನ್ನು ಮುಚ್ಚಿಟ್ಟಿರೋದು ಕೂಡ ಇದೀಗ ಜಗಜ್ಜಾಹೀರಾಗಿದೆ.

ಯಾವುದೋ ಕಾರಣಕ್ಕೆ, ಎಂದೋ ಸತ್ತವರನ್ನು ಕೊರೋನಾ ಸಾವಿನ ಪಟ್ಟಿಗೆ ಸೇರಿಸಲಾಗ್ತಿದೆ. ಕೊರೋನಾ ವಿಚಾರದಲ್ಲಿ ಸುಳ್ಳು ಲೆಕ್ಕ ತೋರಿಸಿ ಸರ್ಕಾರವೇ ಜನರನ್ನು ಬೆಚ್ಚಿಬೀಳಿಸುತ್ತಿದೆಯಾ? ಅಥವಾ ಯಾವ್ಯಾವುದೋ ಕಾರಣಕ್ಕೆ ಸತ್ತವರನ್ನು ಕೊರೋನಾ ಲೆಕ್ಕದಲ್ಲಿ ಹಾಕಿ, ದುಡ್ಡು ಹೊಡೆಯೋ ಪ್ಲಾನ್ ಏನಾದ್ರೂ ನಡೆದಿದ್ಯಾ ಎಂಬ ಪ್ರಶ್ನೆ ಏಳುತ್ತಿವೆ. ಆರೋಗ್ಯ ಇಲಾಖೆ ಮತ್ತು ಬಿಬಿಎಂಪಿ ಎಡವಟ್ಟಿನ ಬಗ್ಗೆ ನಿವೃತ್ತ ಐಎಎಸ್ ಅಧಿಕಾರಿ ಮದನ್ ಗೋಪಾಲ್, ಸಚಿವರು ಮತ್ತು ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದು ತನಿಖೆಗೆ ಆಗ್ರಹಿಸಿದ್ದಾರೆ.

ಮೂರು ದಿನ ಸಾವುಗಳ ಸುಳ್ಳು ಲೆಕ್ಕ
20/07ರ ಹೆಲ್ತ್ ಬುಲೆಟಿನ್
* ಸರ್ಕಾರ ಹೇಳಿದ ಸಾವಿನ ಲೆಕ್ಕ – 72
* 19,20ರಂದು ಸಂಭವಿಸಿದ ಸಾವು – 12
* ಉಳಿದ 60 ಸಾವುಗಳು ತಿಂಗಳ ಲೆಕ್ಕ (ಜೂನ್‍ನಲ್ಲಿ ಸಂಭವಿಸಿದ 2 ಸಾವು ಕೂಡ ಇದರಲ್ಲಿ ಇದೆ)

21/07ರ ಹೆಲ್ತ್ ಬುಲೆಟಿನ್
* ಸರ್ಕಾರ ಹೇಳಿದ ಸಾವಿನ ಲೆಕ್ಕ – 61
* 20,21ರಂದು ಸಂಭವಿಸಿದ ಸಾವು – 11
* ಉಳಿದ 50 ಸಾವುಗಳು ತಿಂಗಳ ಲೆಕ್ಕ (ಜೂನ್‍ನಲ್ಲಿ ಸಂಭವಿಸಿದ 4 ಸಾವು ಕೂಡ ಇದರಲ್ಲಿ ಇದೆ)

22/07ರ ಹೆಲ್ತ್ ಬುಲೆಟಿನ್
* ಸರ್ಕಾರ ಹೇಳಿದ ಸಾವಿನ ಲೆಕ್ಕ – 55
* ಇಂದು ಮತ್ತು ನಿನ್ನೆ ಸಾವು – 09
* ಉಳಿದ 44 ಸಾವುಗಳು ವಾರದ ಲೆಕ್ಕ

ಎಂದೋ ಸತ್ತವರನ್ನ ಇವಾಗ ಯಾಕೆ ಬುಲೆಟಿನ್ ಸೇರಿಸುತ್ತಾ ಇರೋದು? ಹಾಗಾದ್ರೆ ಇಷ್ಟು ದಿನ ಏನು ನಡೆಯುತ್ತಿತ್ತು ಎಂಬ ಪ್ರಶ್ನೆಗೆ ಹೆಲ್ತ್ ಬುಲೆಟಿನ್‍ನ ನಿರ್ವಹಣೆಯ ಉಸ್ತುವಾರಿ, ಐಎಎಸ್ ಅಧಿಕಾರಿ ತ್ರಿಲೋಕ್  ಪ್ರತಿಕ್ರಿಯೆ ನೀಡಿದ್ದಾರೆ. ಮನೆಯಲ್ಲಿ ಸಾವನ್ನಪ್ಪಿದವರ ಸ್ವಾಬ್ ಟೆಸ್ಟ್ ರಿಸಲ್ಟ್ ತಡವಾಗಿ ಬಂದಿದೆ. ಹೀಗಾಗಿ ಅದನ್ನು ಈಗ ಹೆಲ್ತ್ ಬುಲೆಟಿನ್‍ಗೆ ಬಿಬಿಎಂಪಿ ಸೇರಿಸಿದೆ. ಬಿಬಿಎಂಪಿ ಯಾಕೆ ಈ ಥರ ಮಾಡುತ್ತಿದೆ ಪರಿಶೀಲಿಸುತ್ತೇನೆ ಎಂದು ಹೇಳಿ ಜಾರಿಕೊಂಡಿದ್ದಾರೆ.


Spread the love

About Laxminews 24x7

Check Also

ಖಾನಾಪೂರ ಕೋ ಆಪ್ (ಅರ್ಬನ್ ಬ್ಯಾಂಕ್)ಬ್ಯಾಂಕಿನ ಮತ ಎಣಿಕೆ ಮಂಗಳವಾರ ನಡೆಯುವ ಸಾಧ್ಯತೆ.

Spread the love ಖಾನಾಪೂರ :-ಖಾನಾಪೂರ ಕೋ ಆಪ್ ಬ್ಯಾಂಕ್ (ಅರ್ಬನ್ ಬ್ಯಾಂಕ್) ನ ಚುನಾವಣೆ ನಡೆದು ಹದಿನೈದರಿಂದ ಇಪ್ಪತ್ತು …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ