Breaking News

ಅಮಿತಾಬ್ ಗೆ FIAF ಪ್ರಶಸ್ತಿ: ‘ಜೀವಂತ ದಂತಕಥೆ’ ಎಂದು ಕರೆದ ಕ್ರಿಸ್ಟೋಫರ್ ನೋಲನ್

Spread the love

ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ ಬಾಲಿವುಡ್ ನ ಹಿರಿಯ ನಟ ಅಮಿತಾಬ್ ಬಚ್ಚನ್ ಅವರಿಗೆ ಇಂಟರ್ ನ್ಯಾಷನಲ್ ಫೆಡರೇಷನ್ ಆಫ್ ಫಿಲ್ಮ್ ಆರ್ಕೈವ್ಸ್ ಪ್ರಶಸ್ತಿ ನೀಡಿ ಗೌರವಿಸಿದೆ. ಹಾಲಿವುಡ್ ನ ಖ್ಯಾತ ನಿರ್ದೇಶಕರಾದ ಮಾರ್ಟಿನ್ ಸ್ಕಾರ್ಸೆಸೆ ಮತ್ತು ಕ್ರಿಸ್ಟೋಫರ್ ನೋಲನ್ ಅಮಿತಾಬ್ ಅವರಿಗೆ ಪ್ರಶಸ್ತಿ ನೀಡಿ ಗೌರವಿಸಿದರು.

ಪ್ರಶಸ್ತಿ ಸ್ವೀಕರಿಸಿ ಬಳಿಕ ಫೋಟೋವನ್ನು ಅಮಿತಾಬ್ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. 2021ರ FIAF ಪ್ರಶಸ್ತಿಯನ್ನು ನೀಡಿರುವುದಕ್ಕೆ ನನಗೆ ತುಂಬಾ ಗೌರವವಿದೆ. ಇಂದು ಸಮಾರಂಭದಲ್ಲಿ ನನಗೆ ಪ್ರಶಸ್ತಿ ನೀಡಿದ್ದಕ್ಕಾಗಿ FIAF ಮಾರ್ಟಿನ್ ಸ್ಕಾರ್ಸೆಸೆ ಮತ್ತು ಕ್ರಿಸ್ಟೋಫರ್ ನೋಲನ್ ಧನ್ಯವಾದಗಳು’ ಎಂದು ಬರೆದುಕೊಂಡಿದ್ದಾರೆ.

 

ಇನ್ನು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ನಿರ್ದೇಶಕ ಮಾರ್ಟಿನ್, ಸಿನಿಮಾ ಒಂದು ಶತಮಾನಕ್ಕಿಂತಲೂ ಹಳೆಯದಾಗಿದೆ ಮತ್ತು ದುಃಖಕರ, ದುರಂತವೆಂದರೆ ಶ್ರೀಮಂತ ಮತ್ತು ವೈವಿಧ್ಯಮಯ ಚಲನಚಿತ್ರ ಪರಂಪರೆಯನ್ನು ಶಾಶ್ವತವಾಗಿ ಕಳೆದುಕೊಂಡಿದೆ. ಭಾರತದ ಚಲನಚಿತ್ರ ಪರಂಪರೆಯನ್ನು ಕಾಪಾಡುವ ಅಮಿತಾಬ್ ಬಚ್ಚನ್ ಅವರ ಕಾಲ ನಿಜವಾಗಿಯೂ ಅಸಾಧಾರಣವಾಗಿದೆ’ ಎಂದಿದ್ದಾರೆ.

ಇನ್ನು ಇದೇ ಸಮಯದಲ್ಲಿ ಮಾತನಾಡಿದ ಕ್ರಿಸ್ಟೋಫರ್, ಅಮಿತಾಬ್ ಬಚ್ಚನ್ ಅವರ ಭೇಟಿಯನ್ನು ನೆನಪಿಸಿಕೊಂಡರು. ಒಂದೆರಡು ವರ್ಷಗಳ ಹಿಂದೆ ಫಿಲ್ಮ್ ಹೆರಿಟೇಜ್ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮವೊಂದರಲ್ಲಿ ಭಾರತೀಯ ಸಿನಿಮಾರಂಗದ ಜೀವಂತ ದಂತಕಥೆಯನ್ನು ಭೇಟಿಯಾಗುವ ಭಾಗ್ಯ ನನಗೆ ದೊರೆತಿತ್ತು’ ಎಂದು ಹೇಳಿದ್ದಾರೆ.


Spread the love

About Laxminews 24x7

Check Also

ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ

Spread the love ಶಾಂತಾಯಿ ವೃದ್ಧಾಶ್ರಮದಲ್ಲಿ ಸ್ತನ ಕ್ಯಾನ್ಸರ್ ಕುರಿತು ಜಾಗೃತಿ ಪಿಂಕ್ ವಾರಿಯರ್ಸ್ ತಂಡದಿಂದ ಜಾಗೃತಿಪರ ನಾಟಕ ಪ್ರದರ್ಶನ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ