ಬಳ್ಳಾರಿ : ಬಳ್ಳಾರಿ ತಾಲೂಕಿನ ಗೋನಾಳ್ ಗ್ರಾಮದಲ್ಲಿ ನಡೆದ ಗಾಧಿಲಿಂಗೆಶ್ವರ ರಥೋತ್ಸವದಲ್ಲಿ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಅಭಿಮಾನಿಯೊಬ್ಬರು ರಥೋತ್ಸವದ ವೇಳೆ ಬಾಳೆ ಹಣ್ಣು ಎಸೆದು ಹರಕೆ ತೀರಿಸಿದ್ದಾರೆ.
ಹೌದು, ಶನಿವಾರ ಗೋನಾಳ್ ಗ್ರಾಮದಲ್ಲಿ ಜರುಗಿದ ಗಾದಿಲಿಂಗೇಶ್ವರ ರಥೋತ್ಸವದ ವೇಳೆ ಸಿದ್ದರಾಮಯ್ಯ ಅಭಿಮಾನಿ ವಿರೇಶ್ ಎಂಬುವರು Next CM ಸಿದ್ದರಾಮಯ್ಯ ಎಂದು ಬರೆದು ಗಾಧಿಲಿಂಗೇಶ್ವರ ರಥೋತ್ವದಲ್ಲಿ ಬಾಳೆ ಹಣ್ಣನ್ನು ಎಸೆದಿದ್ದಾರೆ.
ರಾಜ್ಯದಲ್ಲಿ ಸಾರ್ವತ್ರಿಕ ಚುನಾವಣೆಗೆ ಇನ್ನೂ ಮೂರು ವರ್ಷವಿದ್ದು, ಈಗಿನಿಂದಲೇ ಸಿದ್ದರಾಮಯ್ಯ ಅಭಿಮಾನಿಗಳು ಮುಂದಿನ ಸಿದ್ದರಾಮಯ್ಯ ಮತ್ತೊಮ್ಮೆ ಮುಖ್ಯಮಂತ್ರಿ ಆಗಲಿ ಎಂದು ಹರಕೆ ತೀರಿಸಲು ಮುಂದಾಗಿದ್ದಾರೆ. ಸದ್ಯ ಸಿದ್ದರಾಮಯ್ಯ ಸಿಎಂ ಆಗಲಿ ಎಂದು ಬಾಳೆ ಹಣ್ಣಿನ ಮೂಲಕ ದೇವರಿಗೆ ಹರಕೆ ತೀರಿಸಿರುವ ಅಭಿಮಾನಿಯ ವಿಡಿಯೋ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
Laxmi News 24×7