Breaking News

ರಾಗಿ ಕಾಳು ಎಣಿಸಿ ದಾಖಲೆ ಸೃಷ್ಟಿಸಿದ ಶಿವಮೊಗ್ಗ ಯುವಕ

Spread the love

ಶಿವಮೊಗ್ಗ: ಸಾಮಾನ್ಯವಾಗಿ ಒಂದು ಕೆ.ಜಿ ರಾಗಿಯಲ್ಲಿ ಎಷ್ಟು ಕಾಳುಗಳು ಇರುತ್ತವೆ ಎಂದು ಕೇಳಿದರೆ, ನಿನಗೇನು ಹುಚ್ಚಾ ಎಂದು ಪ್ರಶ್ನೆ ಮಾಡುವ ಮಂದಿಯೇ ಹೆಚ್ಚು. ನಗರದ ಯುವಕ ಒಂದು ಕೆ.ಜಿ. ರಾಗಿಯಲ್ಲಿ ಎಷ್ಟು ಕಾಳುಗಳಿವೆ ಎಂದು ಲೆಕ್ಕ ಹಾಕುವ ಮೂಲಕ ಇಂಡಿಯನ್ ವರ್ಲ್ಡ್‌ ರೆಕಾರ್ಡ್‌ನಲ್ಲಿ ದಾಖಲೆ ಸೃಷ್ಟಿಸಿದ್ದಾರೆ.

ಶಿವಮೊಗ್ಗದ ಹೊಯ್ಸಳ ಕಾಲೇಜಿನ ದ್ವಿತೀಯ ವರ್ಷದ ಬಿ.ಕಾಂ. ವಿಭಾಗದ ವಿದ್ಯಾರ್ಥಿ ಸಚ್ಚಿನ್ ಈ ಸಾಧನೆ ಮಾಡಿದ ಯುವಕ. ಒಂದು ಕೆ.ಜಿ. ರಾಗಿಯಲ್ಲಿ 3,76,083 ಕಾಳುಗಳು ಇವೆ ಎಂದು ಎಣಿಸಿದ್ದಾರೆ. ಈ ಕಾಳುಗಳ ಲೆಕ್ಕ ಹಾಕಲು ಅವರು 146 ಗಂಟೆ 30 ನಿಮಿಷ ತೆಗೆದುಕೊಂಡಿದ್ದಾರೆ. ಅವರು ಬಾಪೂಜಿನಗರದ ಶಿಕ್ಷಕ ಬಿ.ಎಂ.ಗೋಪಾಲಯ್ಯ ಮತ್ತು ಆರ್. ಶಾರದಾ ಅವರ ಪುತ್ರ.


Spread the love

About Laxminews 24x7

Check Also

ಕರ್ನಾಟಕದಲ್ಲಿ ವಿದ್ಯುತ್‌ ಉತ್ಪಾದನೆ ಶೇ. 5ರಷ್ಟು ಹೆಚ್ಚಳ : ಬೇಡಿಕೆ ಮೀರಿದ ಉತ್ಪಾದನೆ ನೆರೆರಾಜ್ಯಗಳಿಗೆ ಮಾರಾಟ, ರೈತರಿಗೂ ಲಾಭ

Spread the loveಬೆಂಗಳೂರು : ರಾಜ್ಯದಲ್ಲಿ ವಾರ್ಷಿಕ ವಿದ್ಯುತ್‌ ಉತ್ಪಾದನೆಯು ಶೇ.5ರಷ್ಟು ಹೆಚ್ಚಳವಾಗಿದ್ದು, ಈ ಬಾರಿ ಬೇಸಿಗೆಯಲ್ಲಿ ವಿದ್ಯುತ್‌ಗೆ ಬರವಿಲ್ಲ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ