Breaking News

ಒಬ್ಬನೊಂದಿಗೇ ಅಮ್ಮ-ಮಗಳ ಅಕ್ರಮ ಸಂಬಂಧ!

Spread the love

ದಾವಣಗೆರೆ: ಅಮ್ಮ-ಮಗಳಿಗೆ ಒಬ್ಬನೇ ಪ್ರಿಯಕರ. ಅಮ್ಮನ ಅಕ್ರಮ ಸಂಬಂಧಕ್ಕೆ ಸಾಥ್​​ ಕೊಟ್ಟ ಮಗಳು ಕೂಡ ಅಮ್ಮನ ಹಾದಿಯನ್ನೇ ಹಿಡಿದಳು. ಅದೂ ಅಮ್ಮನ ಪ್ರಿಯಕರನೊಟ್ಟಿಗೆ. ಈ ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ವೃದ್ಧನೊಬ್ಬನನ್ನ ಪ್ರಿಯಕರನ ಮೂಲಕವೇ ತಾಯಿ-ಮಗಳು ಕೊಲೆ ಮಾಡಿಸಿ ಅಸಹಜ ಸಾವು ಎಂದು ಬಿಂಬಿಸಿದ್ದರು. ಇದೀಗ ಕೊಲೆ ರಹಸ್ಯ ಬಯಲಾಗಿದೆ.

ಹೊನ್ನಾಳಿ ತಾಲೂಕಿನ‌ ಕುಳಗಟ್ಟ ಗ್ರಾಮದಲ್ಲಿ ಮಾ.2ರಂದು ಮಂಜಪ್ಪ(70) ಮೃತಪಟ್ಟಿದ್ದ. ಅಸಹ ಸಾವು‌ ಎಂದು ಪ್ರಕರಣ ದಾಖಲಾಗಿತ್ತು. ಅನುಮಾನಗೊಂಡ ಪೊಲೀಸರು ಸಾವಿನ ಜಾಡು ಹಿಡಿದು ಹೊರಟಾಗ ಗೊತ್ತಾಯ್ತು ಇದು ಕೊಲೆ ಎಂದು. ಅಂದಹಾಗೆ ಈ ಕೊಲೆ ಮಾಡಿದ್ದು ಮಂಜಪ್ಪನ ಮಗಳು ಉಷಾ ಮತ್ತು ಮೊಮ್ಮಗಳು ಸಿಂಧು ಹಾಗೂ ಇವರಿಬ್ಬರ ಪ್ರಿಯಕರ ಶ್ರೀನಿವಾಸ!

ಮಂಜಪ್ಪನಿಗೆ ಇಬ್ಬರು ಹೆಂಡತಿಯರು, ಇಬ್ಬರೂ ಮೃತರಾಗಿದ್ದಾರೆ. ಮೊದಲ ಪತ್ನಿಗೆ 2 ಪುತ್ರಿಯರು, 2ನೇ ಪತ್ನಿಗೆ ಒಬ್ಬ ಮಗಳು. ಎರಡನೇ ಪತ್ನಿಯ ಮಗಳೇ ಉಷಾ. ಇವಳ ಮಗಳು ಸಿಂಧು. ಮಂಜಪ್ಪನ ಮೂವರು ಹೆಣ್ಣುಮಕ್ಕಳ ಪತಿಯರು ಮೃತಪಟ್ಟಿದ್ದಾರೆ. ಸಿಂಧು ಶಿವಮೊಗ್ಗದಲ್ಲಿ ಬಿಎಸ್ಸಿ ನರ್ಸಿಂಗ್ ಓದುತ್ತಿದ್ದಳು. ಕುಳಗಟ್ಟ ಗ್ರಾಮದ ಶ್ರೀನಿವಾಸ ಎಂಬಾತನಿಗೆ ಉಷಾ ಜತೆ ಅಕ್ರಮ ಸಂಬಂಧವಿತ್ತು. ಇದೇ ಸಲುಗೆಯಲ್ಲಿ ಶ್ರೀನಿವಾಸ ಉಷಾಳ ಮಗಳು ಸಿಂಧು ಜತೆಗೂ ಅಕ್ರಮ ಸಂಬಂಧ ಹೊಂದಿದ್ದ. ಈ ಬಗ್ಗೆ ತಿಳಿದ ಮಂಜಪ್ಪ ಸಿಟ್ಟಾಗಿದ್ದರು. ಇಂತಹದ್ದನ್ನೆಲ್ಲ ಬಿಟ್ಟು ಮರ್ಯಾದೆಯಿಂದ ಬಾಳುವಂತೆ ಎಚ್ಚರಿಸಿದ್ದ. ಇದೇ ಕಾರಣಕ್ಕೆ ಅಮ್ಮ-ಮಗಳು ಸೇರಿ ಮಂಜಪ್ಪನನ್ನ ಮುಗಿಸಲು ಸ್ಕೆಚ್ ಹಾಕಿ ಪ್ರಿಯಕರ ಶ್ರೀನಿವಾಸನಿಗೆ ಕೊಲೆ ಮಾಡಲು ಸೂಚನೆ ಕೊಟ್ಟಿದ್ದರು.

ಕೊಲೆ ಸಂಚಿನಂತೆ ಮಾ.1ರ ರಾತ್ರಿ ಮಂಜಪ್ಪನಿಗೆ ಮನೆಯಲ್ಲೇ ಚಿಕನ್ ಊಟ ಮಾಡಿ ಬಡಿಸಿದ್ದರು. ತೋಟಕ್ಕೆ ನೀರು ಕಟ್ಟಲು ಮಂಜಪ್ಪನೊಂದಿಗೆ ಶ್ರೀನಿವಾಸನೂ ಹೋಗಿದ್ದ. ಆ ವೇಳೆ ವೃದ್ಧನಿಗೆ ತೋಟದಲ್ಲಿ ಶ್ರೀನಿವಾಸ ಕಂಠಪೂರ್ತಿ ಮದ್ಯ ಕುಡಿಸಿ ದೊಣ್ಣೆಯಿಂದ ಹೊಡೆದು ಕೊಂದಿದ್ದ. ತೋಟದ ಪಕ್ಕದಲ್ಲಿದ್ದ ಚಾನಲ್‌ಗೆ ಮೃತದೇಹ ಎಸೆದು ಅಸಹಜ ಸಾವು ಎಂದು ಬಿಂಬಿಸಲು ಪ್ರಯತ್ನಿದ್ದ. 

ಚಾನಲ್‌ಗೆ ಮೃತದೇಹ ಸಾಗಿಸುವಾಗ ಮಂಜಪ್ಪನ ಕಾಲು ತಂತಿ ಬೇಲಿಗೆ ಸಿಕ್ಕು ರಕ್ತ ಅಂಟಿಕೊಂಡಿತ್ತು. ಮಾರನೇ ದಿನ ಚಾನಲ್‌ನಲ್ಲಿ ಮಂಜಪ್ಪನ ಶವ ಪತ್ತೆಯಾಗಿತ್ತು. ಮಂಜಪ್ಪ ಮೃತಪಟ್ಟಿರುವ ಬಗ್ಗೆ ಈತನ ಮೊದಲನೇ ಪತ್ನಿಯ ಇಬ್ಬರು ಹೆಣ್ಣು ಮಕ್ಕಳು ಹೊನ್ನಾಳಿ ಪೊಲೀಸರಿಗೆ ದೂರು ನೀಡಿದ್ದರು. ಆದರೆ, ಉಷಾ ಮತ್ತು ಸಿಂಧು ಪೊಲೀಸ್ ಠಾಣೆ ಬಳಿ‌ ಸುಳಿದಿರಲಿಲ್ಲ.

ಉಷಾಳ ಅಕ್ರಮ ಸಂಬಂಧದ ಸುದ್ದಿ ಗ್ರಾಮದಲ್ಲಿ ಹರಡಿತ್ತು. ಆರೋಪಿಗಳ ಮೊಬೈಲ್ ಕಾಲ್ ಡಿಟೇಲ್ಸ್ ಹಾಗೂ ಉಷಾ ದೂರು ಕೊಡಲು ಬಾರದೇ ಇದ್ದ ಅನುಮಾನದಲ್ಲಿ ಪೊಲೀಸರು ತನಿಖೆ ಆರಂಭಿಸಿದ್ದರು. ಅಸಹಜ ಸಾವು ಎಂದು ದಾಖಲಾಗಿದ್ದ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಮಗಳು-ಮೊಮ್ಮಗಳು ಹಾಗೂ ಇವರಿಬ್ಬರ ಪ್ರಿಯಕರನಿಂದಲೇ ಕೊಲೆ ಆಗಿರುವ ರಹಸ್ಯ ಬಯಲಾಗಿದೆ. ಹೊನ್ನಾಳಿ ಸಿಪಿಐ ಟಿ.ವಿ. ದೇವರಾಜ್ ನೇತೃತ್ವ ‌ತಂಡ ಕೊಲೆ ಪ್ರಕರಣ ಬೇಧಿಸಿದೆ.


Spread the love

About Laxminews 24x7

Check Also

ಮೈಸೂರಿನಿಂದ ಉದಯಪುರಕ್ಕೆ ತೆರಳುತ್ತಿದ್ದ ರೈಲಿನ ಇಂಜಿನ್​ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕ ಸೃಷ್ಟಿಯಾಗಿತ್ತು.

Spread the loveರಾಮನಗರ: ಬೊಂಬೆನಗರಿ ಚನ್ನಪಟ್ಟಣದ ಬಳಿ ಚಲಿಸುತ್ತಿದ್ದ ರೈಲಿನ ಇಂಜಿನ್​​ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡ ಘಟನೆ ಇಂದು (ಗುರುವಾರ) ನಡೆದಿದೆ. …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ