ಸಿಂಗಪುರ: ಕೋವಿಡ್-19 ಸಮಯದಲ್ಲಿ ಫ್ರಂಟ್ ಲೈನ್ ವಾರಿಯರ್ ಆಗಿ ಕೆಲಸ ಮಾಡುತ್ತಿರುವ ಭಾರತೀಯ ಮೂಲದ ನರ್ಸ್ ಕಲಾ ನಾರಾಯಣಸ್ವಾಮಿ ಅವರಿಗೆ ಸಿಂಗಪುರದಲ್ಲಿ ರಾಷ್ಟ್ರಪತಿ ಪುರಸ್ಕಾರ ನೀಡಿ ಗೌರವಿಸಲಾಗಿದೆ.
ಒಟ್ಟು ಐವರು ನರ್ಸ್ ಗಳು ಈ ಗೌರವಕ್ಕೆ ಪಾತ್ರರಾಗಿದ್ದು, ಐವರಲ್ಲಿ ಕಲಾ ನಾರಾಯಣಸ್ವಾಮಿ ಸಹ ಒಬ್ಬರಾಗಿದ್ದಾರೆ. ಸಿಂಗಪುರದ ಆರೋಗ್ಯ ಸಚಿವಾಲಯ ಈ ಬಗ್ಗೆ ಅಧಿಕೃತ ಮಾಹಿತಿಯನ್ನು ನೀಡಿದೆ. ರಾಷ್ಟ್ರಪತಿಗಳ ಪುರಸ್ಕಾರಕ್ಕೆ ಪಾತ್ರವಾಗಿರುವ ನರ್ಸ್ ಗಳಿಗೆ ಸಿಂಗಪುರ ರಾಷ್ಟ್ರಪತಿ ಹಲಿಮಾ ಯಾಕೂಬ್ ಅವರ ಹಸ್ತಾಕ್ಷರವುಳ್ಳ ಪ್ರಮಾಣ ಪತ್ರ, ಒಂದು ಟ್ರೋಫಿ ಮತ್ತು 7,228 ಯುಎಸ್ ಡಾಲರ್ (5.40 ಲಕ್ಷ ರೂ.) ಹಣ ಬಹುಮಾನವಾಗಿ ಸಿಗಲಿದೆ.
ಕಲಾ ನಾರಾಯಣಸ್ವಾಮಿ ವುಡ್ ಲ್ಯಾಂಡ್ಸ್ ಹೆಲ್ತ್ ಕ್ಯಾಂಪಸ್ ನಲ್ಲಿ ನರ್ಸಿಂಗ್ ವಿಭಾಗದ ಉಪ ನಿರ್ದೇಶಕಿಯಾಗಿ ಕೆಲಸ ಮಾಡುತ್ತಿದ್ದಾರೆ. ಕೊರೊನಾ ನಿಯಂತ್ರಣ ಮಾಡುವಲ್ಲಿ ಕಲಾ ನಾರಾಯಣಸ್ವಾಮಿ ಯಶಸ್ವಿಯಾಗಿದ್ದರಿಂದ ಈ ಗೌರವಕ್ಕೆ ಪಾತ್ರರಾಗಿದ್ದಾರೆ. 2003ರಲ್ಲಿ ಸಾರ್ಸ್ ಕಾಣಿಸಿಕೊಂಡಾಗ ರೋಗವನ್ನು ನಿಯಂತ್ರಿಸುವುದನ್ನು (ಚೈನ್ ಕಟ್) ಕಲಾ ಅವರು ಕಲಿತಿದ್ದರು