ಬೆಂಗಳೂರು: ರಮೇಶ್ ಜಾರಕಿಹೊಳಿ ಅವರದ್ದು ಎನ್ನಲಾದ ರಾಸಲೀಲೆಯ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಡಿಯಲ್ಲಿರುವ ಯುವತಿಯ ಪ್ರಿಯತಮನನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಎಸ್‌ಐಟಿ ತನಿಖೆ ವೇಳೆ ಯುವತಿಯ ಪ್ರಿಯತಮ ಎಸ್‌ಐಟಿ ಮುಂದೆ ಹಾಜರಾಗಿ ಹೇಳಿಕೆ ನೀಡಿದ್ದಾನೆ.
ಯುವತಿ ತನ್ನ ಪ್ರಿಯಕರನಿಗೆ ಸಿಡಿಯ ಕಥೆ ಹೇಳದೆಯೇ ಮಾಹಾಮೊಸ ಮಾಡಿದ್ದಾಳೆ ಎಂದು ಎಸ್‌ಐಟಿ ತನಿಖಾಧಿಕಾರಿಗಳ ಮುಂದೆ ಯುವತಿ ಪ್ರಿಯತಮ ಸತ್ಯ ಬಾಯಿ ಬಿಟ್ಟಿದ್ದಾನೆ. ಸಚಿವರೊಬ್ಬರಿಗೆ ವಂಚನೆ ಮಾಡುತ್ತಿರೋ ವಿಚಾರ ಪ್ರಿಯತಮನಿಗೆ ಗೊತ್ತಿತ್ತಂತೆ. ಆದರೆ ರಾಸಲೀಲೆ ಸಿಡಿ ಇಟ್ಟುಕೊಂಡು ಸಚಿವರನ್ನು ಸಂಕಷ್ಟಕ್ಕೆ ಸಿಲುಕಿಸುವ ಸಂಚು ರೂಪಿಸಲಾಗಿದೆ ಎನ್ನುವುದು ಮಾತ್ರ ನನಗೆ ತಿಳಿದಿರಲಿಲ್ಲ ಎಂದು ಪ್ರಿಯತಮ ಶಾಕಿಂಗ್ ವಿಚಾರವನ್ನು ಹೇಳಿದ್ದಾನೆ.
ಅಲ್ಲದೇ ಸಿಡಿ ರಿಲೀಸ್ ಆಗುವವರೆಗೂ ಸಿಡಿ ಇಟ್ಟುಕೊಂಡು ಮೋಸ ಮಾಡುತ್ತಾರೆ ಎನ್ನುವುದು ತಿಳಿದಿರಲಿಲ್ಲ. ಬಳಿಕ ಸಿಡಿಯನ್ನ ಇಟ್ಟುಕೊಂಡು ಹಣ ಮಾಡಲು ಮುಂದಾಗಿದ್ದಾಳೆ ಅಂತಾ ತಿಳಿಯಿತು ಎಂದು ಎಸ್‌ಐಟಿ ಅಧಿಕಾರಿಗಳ ಮುಂದೆ ಪ್ರಿಯತಮ ಹೇಳಿದ್ದಾನೆ ಎಂದು ತಿಳಿದುಬಂದಿದೆ.
Laxmi News 24×7