Breaking News

ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸ್ಸೇನ್ ಖಾನ್ಬಿಗ್ ಬಾಸ್ ಸ್ಪರ್ಧಿ ಅರ್ಸ್ಲಾನ್ ಗೋನಿ ಜತೆ ಡೇಟಿಂಗ್‍ನಲ್ಲಿದ್ದಾರೆ

Spread the love

ಮುಂಬೈ : ಬಾಲಿವುಡ್ ನಟ ಹೃತಿಕ್ ರೋಷನ್ ಅವರ ಮಾಜಿ ಪತ್ನಿ ಸುಸ್ಸೇನ್ ಖಾನ್ ಒಬ್ಬಂಟಿ ಜೀವನಕ್ಕೆ ಗುಡ್ ಬೈ ಹೇಳಿದ್ದಾರಂತೆ. ಈಕೆ ಮತ್ತೆ ಲವ್‍ನಲ್ಲಿ ಬಿದ್ದಿದ್ದಾರಂತೆ. ಬಿಗ್ ಬಾಸ್ ಸ್ಪರ್ಧಿ ಅರ್ಸ್ಲಾನ್ ಗೋನಿ ಜತೆ ಡೇಟಿಂಗ್‍ನಲ್ಲಿದ್ದಾರೆ ಎನ್ನುವ ರೂಮರ್ ಬಿಟೌನ್ ಅಂಗಳದಲ್ಲಿ ಜೋರಾಗಿ ಕೇಳಿ ಬರುತ್ತಿದೆ.

2014 ರಲ್ಲಿ ಹೃತಿಕ್ ರೋಷನ್ ಹಾಗೂ ಸುಸ್ಸೇನಾ ಪರಸ್ಪರ ವಿಚ್ಛೇದನ ಪಡೆಯುವ ಮೂಲಕ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಇತಿಶ್ರೀ ಹೇಳಿದ್ದರು. ಕಂಗನಾ ಜತೆ ಹೃತಿಕ್ ಡೇಟಿಂಗ್‍ನಲ್ಲಿದ್ದಿದ್ದು ಇವರ ಸಂಸಾರದಲ್ಲಿ ಬಿರುಕು ಮೂಡಲು ಕಾರಣ ಎಂದು ಹೇಳಲಾಗಿತ್ತು. ಡೈವೋರ್ಸ್ ಪಡೆದಿದ್ದರೂ ಕೂಡ ತಮ್ಮ ಮಕ್ಕಳ ಭವಿಷ್ಯದ ಹಿತದೃಷ್ಟಿಯಿಂದ ಇವರಿಬ್ಬರೂ ಒಳ್ಳೆಯ ಸ್ನೇಹಿತರಾಗಿ ಮುಂದುವರೆದಿದ್ದಾರೆ. ಲಾಕ್ ಡೌನ್ ವೇಳೆಯಲ್ಲಿ ಹೃತಿಕ್ ಮನೆಗೆ ತೆರಳಿದ್ದ ಸುಸ್ಸೇನಾ ತಮ್ಮ ಮಕ್ಕಳ ಜತೆ ಕಾಲ ಕಳೆದಿದ್ದರು.

ಹೃತಿಕ್ ರೋಷನ್ ಅವರಿಂದ ದೂರವಾದ ನಂತರ ಹೊಸ ಸಂಬಂಧಗಳಿಗೆ ( ಮತ್ತೊಂದು ಮದುವೆ ) ಸುಸ್ಸೇನಾ ಕೈ ಚಾಚಿರಲಿಲ್ಲ. 7 ವರ್ಷಗಳಿಂದ ಸಿಂಗಲ್ ಆಗಿದ್ದ ಅವರೀಗ ಅರ್ಸ್ಲಾನ್ ಗೋನಿ ಅವರನ್ನು ಪ್ರೀತಿಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

ಖಾನ್ ಹಾಗೂ ಗೋನಿ ಕಳೆದ 6 ತಿಂಗಳ ಹಿಂದೆ ಟಿವಿ ಕಾರ್ಯಕ್ರಮವೊಂದರಲ್ಲಿ ಪರಿಚಯವಾಗಿದ್ದರು. ದಿನಗಳು ಉರುಳಿದಂತೆ ಇವರಿಬ್ಬರ ಸ್ನೇಹ ಗಾಢವಾಗುತ್ತ ಬಂದಿದೆ. ಇವರಿಬ್ಬರೂ ಮೊದಲಿನಕ್ಕಿಂತ ಹೆಚ್ಚು ಆತ್ಮೀಯರಾಗಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡಿದ್ದಾರೆ ಎಂದು ಸುಸ್ಸೇನಾ ಅವರ ಆಪ್ತರೊಬ್ಬರು ಹೇಳಿಕೊಂಡಿದ್ದೇ, ಈ ರೂಮರ್ ಹುಟ್ಟಿಕೊಳ್ಳಲು ಕಾರಣವಾಗಿದೆ.

ಇನ್ನು ಸುಸ್ಸೇನಾ ಹಾಗೂ ಗೋನಿ ಕೆಲವು ಪಾರ್ಟಿಗಳಲ್ಲಿ ಜತೆಯಾಗಿ ಕಾಣಿಸಿಕೊಂಡಿರುವುದೂ ಕೂಡ ಇವರಿಬ್ಬರ ನಡುವೆ ಸಮ್‍ಥಿಂಗ್ ಸಮ್‍ಥಿಂಗ್ ನಡೆಯುತ್ತಿದೆ ಎನ್ನುವ ರೂಮರ್ ಗಳಿಗೆ ದಾರಿ ಮಾಡಿಕೊಟ್ಟಿದೆ. ಆದರೆ, ಇದುವರೆಗೆ ಈ ಜೋಡಿ ಮಾತ್ರ ತಮ್ಮ ಲವ್ ಬಗ್ಗೆ ಎಲ್ಲಿಯೂ ತುಟಿ ಬಿಚ್ಚಿಲ್ಲ.


Spread the love

About Laxminews 24x7

Check Also

ಹುಕ್ಕೇರಿ : ಹುಕ್ಕೇರಿ ಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ ಪಥ ಸಂಚಲನ.

Spread the loveಹುಕ್ಕೇರಿ : ಹುಕ್ಕೇರಿ ಯಲ್ಲಿ ರ್ಯಾಪಿಡ್ ಆಕ್ಷನ್ ಫೋರ್ಸ ಪಥ ಸಂಚಲನ. ಹುಕ್ಕೇರಿ ನಗರದಲ್ಲಿ ಭದ್ರಾವತಿಯ ರಾಷ್ಟ್ರೀಯ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ