Breaking News

ಬಿಗ್​ ಬಾಸ್​ ಮನೆಯಲ್ಲಿ ಹೆಣ್ಮಕ್ಳನ್ನು ಟೈಟ್​ ಆಗಿ ತಬ್ಬಿಕೊಳ್ಳುವ ಪ್ರಶಾಂತ್​ ಸಂಬರಗಿಗೆ ಸುದೀಪ್​ ಖಡಕ್​ ವಾರ್ನಿಂಗ್​

Spread the love

ಬಿಗ್​ ಬಾಸ್​ ಮನೆ ಸೇರಿರುವ ಪ್ರಶಾಂತ್​ ಸಂಬರಗಿ ತುಂಬಾನೇ ಚರ್ಚೆಗೆ ಕಾರಣವಾಗಿತ್ತು. ಇದಕ್ಕೆ ಕಾರಣ ಅವರು ಎಲ್ಲಾ ಸ್ಪರ್ಧಿಗಳ ಬಗ್ಗೆ ರೇಗೋದು. ಮತ್ತೊಂದು ಎಂದರೆ, ಪ್ರಶಾಂತ್​ ಸಂಬರಗಿ ಹೆಣ್ಣುಮಕ್ಕಳನ್ನು ಟೈಟ್​ ಆಗಿ ಹಗ್​ ಮಾಡಿಕೊಳ್ಳುವುದು. ಈ ವಿಚಾರ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಅಷ್ಟೇ ಅಲ್ಲ, ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸಾಕಷ್ಟು ಟ್ರೋಲ್​ ಕೂಡ ಹರಿದಾಡಿತ್ತು. ಈಗ ಈ ವಿಚಾರದಲ್ಲಿ ಪ್ರಶಾಂತ್​ಗೆ ಸುದೀಪ್​ ಖಡಕ್​ ಆಗಿ ವಾರ್ನಿಂಗ್​ ನೀಡಿದ್ದಾರೆ.

ವೈರಸ್​ ಟಾಸ್ಕ್​ ನಡೆಯುವಾಗ ರಾತ್ರಿ ಕೆಲವರನ್ನು ಪ್ರಶಾಂತ್​ ಗಟ್ಟಿಯಾಗಿ ಹಗ್​ ಮಾಡಿಕೊಂಡಿದ್ದರು. ಈ ಫೋಟೋಗಳು ಸಾಕಷ್ಟು ವೈರಲ್​ ಆಗಿತ್ತು. ಇದನ್ನು ನೋಡಿದ ಅನೇಕರು ಪ್ರಶಾಂತ್​ ಸಂಬರಗಿ ಹೀಗೆಕೆ ಮಾಡ್ತಾರಪ್ಪ ಎಂದುಕೊಂಡಿದ್ದರು! ಈಗ ಈ ವಿಚಾರದಲ್ಲಿ ಸುದೀಪ್​ ಅವರೇ ಮಧ್ಯಪ್ರವೇಶಿಸಿದ್ದಾರೆ.

ವೀಕೆಂಡ್​ನಲ್ಲಿ ಸ್ಪರ್ಧಿಗಳ ಜತೆ ಕಿಚ್ಚ ಮಾತನಾಡಿದ್ದಾರೆ. ಆಗ ಸುದೀಪ್​ ಈ ವಿಚಾರ ಪ್ರಸ್ತಾಪ ಮಾಡಿದ್ದಾರೆ. ಪ್ರಶಾಂತ್​ ಅವರೇ ನೀವು ಎಲ್ಲರನ್ನೂ ತಬ್ಬಿಕೊಳ್ಳುತ್ತೀರಿ. ಕೆಲವರನ್ನು ತುಂಬಾನೇ ಟೈಟ್​ ಆಗಿ ತಬ್ಬಿಕೊಳ್ಳುತ್ತೀರಿ. ನೀವು ತಬ್ಬಿಕೊಳ್ಳುತ್ತೀರಲ್ಲ ಅದು ಸಮಸ್ಯೆ ಅಲ್ಲ. ಆದರೆ ತಬ್ಬಿಕೊಂಡಾಗ ಮಾತನಾಡುತ್ತೀರಲ್ಲ ಅದು ಸಮಸ್ಯೆ. ನೀವು ತಬ್ಬಿಕೊಂಡಾಗ ಮೈಕ್​ ಒತ್ತಿಕೊಂಡಿರುತ್ತದೆ. ಹಾಗಾಗಿ ನೀವು ಮಾತನಾಡಿದ್ದು ಬೇರೆಯದೇ ರೀತಿ ಕೇಳುತ್ತದೆ ಎಂದಿದ್ದಾರೆ ಸುದೀಪ್​.

ನೀವು ಒಬ್ಬೊಬ್ಬರನ್ನು ತುಂಬಾ ದೀರ್ಘಕಾಲ ತಬ್ಬಿಕೊಳ್ಳುತ್ತೀರಿ. ಅದು ತಪ್ಪು ಎಂದು ನಾನು ಹೇಳುತ್ತಿಲ್ಲ. ತಬ್ಬಿಸಿಕೊಳ್ಳುವವರಿಗೆ ಅಭ್ಯಂತರವಿಲ್ಲ ಎಂದರೆ ನಮ್ಮದೇನು ಅಭ್ಯಂತರ? 2 ಸೆಕೆಂಡ್​ಗಿಂತ ಹೆಚ್ಚು ಕಾಲ ತಬ್ಬಿಕೊಳ್ಳಬಾರದು ಎಂದು ಬಿಗ್​ ಬಾಸ್​ ನಿಯಮ ಹಾಕಿಲ್ಲ. ಆದರೆ, ಬಿಗ್​ ಬಾಸ್​ ಈ ರೀತಿ ನಿಯಮ ತರೋ ತರ ಮಾಡಿಕೊಳ್ಳಬೇಡಿ ಎಂದು ಹೇಳಿದ್ದಾರೆ ಸುದೀಪ್​.


Spread the love

About Laxminews 24x7

Check Also

ಕ್ಷಮೆ ಕೇಳಲಿ, ಇಲ್ಲವೇ ಸಾರ್ವಜನಿಕರ ಪ್ರತಿಭಟನೆ ಎದುರಿಸಬೇಕಾದೀತು: ಸಚಿವೆ ಹೆಬ್ಬಾಳ್ಕರ್

Spread the loveಬೆಂಗಳೂರು: ಕರ್ನಾಟಕ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಕುರಿತು ಅವಹೇಳನಕಾರಿ ಹೇಳಿಕೆ ನೀಡಿರುವ ಬಿಜೆಪಿಯ ವಿಧಾನ ಪರಿಷತ್ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ