Breaking News

‘ಜೀವದ ಮೇಲೆ’ ನಿಮಗೆ ಪ್ರೀತಿ ಇದ್ದರೇ.. ಇಂಥ ‘ದುಸ್ಸಾಹಸ’ಕ್ಕೆ ಕೈ ಹಾಕಬೇಡಿ.!

Spread the love

ಪಣಜಿ : ಸಂಚರಿಸುವಂತ ರೈಲು ಹತ್ತಲು ಹೋಗಿ ಅನೇಕರು ಈಗಾಗಲೇ ಪ್ರಾಣ ಕಳೆದುಕೊಂಡಿದ್ದಾರೆ. ಹೀಗಿದ್ದೂ ಇಂತಹ ದುಸ್ಸಾಹಸಕ್ಕೆ ಕೈಹಾಕಬೇಡಿ ಎಂಬುದಾಗಿ ಎಚ್ಚರಿಸಿದ್ರೂ.. ಪ್ರಯಾಣಿಕರು ಮಾತ್ರ ಡೋಂಟ್ ಕೇರ್. ಹೀಗೆ ಚಲಿಸುತ್ತಿದ್ದಂತ ರೈಲು ಹತ್ತಿದ್ದರಿಂದ ಏನ್ ಆಯ್ತು ಅಂತ, ಈ ಸುದ್ದಿ ಓದಿ..

ಗೋವಾದ ವಾಸ್ಕೋಡಿಗಾಮಾ ರೈಲು ನಿಲ್ದಾಣದಲ್ಲಿ, ರೈಲು ನಿಂತಿದ್ದರೂ, ಹತ್ತದಿದ್ದಂತ ಪ್ರಯಾಣಿಕನೊಬ್ಬ, ಚಲಿಸಲು ಆರಂಭಿಸಿದಂತ ರೈಲು ಹತ್ತೋದಕ್ಕೆ ಪ್ರಯತ್ನ ಪಟ್ಟಿದ್ದಾನೆ. ಓಡಿ ಹೋಗಿ ಹತ್ತೋದಕ್ಕೆ ಪ್ರಯತ್ನಿಸಿದಾಗ ನಿಯಂತ್ರಣ ಕಳೆದುಕೊಂಡು, ರೈಲಿನ ಜೊತೆಗೆ ಪ್ಲಾಟ್ ಪಾಂ ನಲ್ಲೇ ಬಿದ್ದಿದ್ದಾನೆ.

ಹೀಗೆ ರೈಲಿಗೆ ಸಿಕ್ಕಿ, ಪ್ರಾಣಪಾಯ ಎದುರಿಸುತ್ತಿದ್ದನ್ನು ಕಂಡಂತ, ಸಮೀಪದಲ್ಲಿದ್ದ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ ಕೆ.ಎಂ. ಪಾಟೀಲ್, ಕೂಡಲೇ ಯುವಕನನ್ನು ಹಿಡಿದು ಹೊರಗೆ ಎಳೆದಿದ್ದಾರೆ. ಇದರಿಂದಾಗಿ ಯುವಕನ ಪ್ರಾಣ ಉಳಿದಿದೆ. ಆದ್ರೇ.. ಕಾಲುಗಳು ಮಾತ್ರ ಕಟ್ ಆಗಿವೆ. ಇಂತಹ ವೀಡಿಯೋವನ್ನು ರೈಲ್ವೆ ಇಲಾಖೆ ಟ್ವಿಟ್ ನಲ್ಲಿ ಪೋಸ್ಟ್ ಮಾಡಿದ್ದು, ಪ್ರಯಾಣಿಕರು ಇಂತಹ ದುಸ್ಸಾಹಸಕ್ಕೆ ಕೈಹಾಕೋ ಮೊದಲು ಎಚ್ಚರಿಕೆ ವಹಿಸುವಂತೆ ಮನವಿ ಮಾಡಿದೆ.

 


Spread the love

About Laxminews 24x7

Check Also

ಕಾರದಗಾ ಗ್ರಾಮದ ಅಭಿವೃದ್ಧಿಯೇ ನನ್ನ ಧ್ಯೇಯ

Spread the loveಕಾರದಗಾ ಗ್ರಾಮದಲ್ಲಿ 1 ಕೋಟಿ 08 ಲಕ್ಷ ರೂ. ಮೊತ್ತದಲ್ಲಿ ವಿವಿಧ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಲಾಯಿತು.ಇದಕ್ಕೂ …

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ